ಗಮನಿಸಿ...ಈರುಳ್ಳಿ ದರದಲ್ಲಿ ಭಾರೀ ಬದಲಾವಣೆ
ಬೆಂಗಳೂರು, ಮಾರ್ಚ್ 2; ಕಳೆದ ಒಂದು ತಿಂಗಳಿನ ಹಿಂದೆ 200 ರುಪಾಯಿ ಗಡಿ ತಲುಪಿ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿದ್ದ ಈರುಳ್ಳಿ ಬೆಲೆ ಇಂದು ಬಾರೀ ಇಳಿಕೆ ಕಂಡಿದೆ.
ಈರುಳ್ಳಿ ಬೆಲೆ ಬೆಂಗಳೂರು ಮಾರುಕಟ್ಟೆಯಲ್ಲಿ ಕೆಜಿಗೆ 10 ರುಪಾಯಿ ತಲುಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದ ಗ್ರಾಹಕರು ಸಂತಸಗೊಂಡಿದ್ದರೇ, ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬೆಳೆದ ಬೆಳೆಗಾರರು ಬೆಲೆ ಕುಸಿತದಿಂದ ಆತಂಕಗೊಂಡಿದ್ದಾರೆ.
ಮಾರುಕಟ್ಟೆಗೆ ಹೊಸ ಈರುಳ್ಳಿ ಪೂರೈಕೆ ಹೆಚ್ಚಳವಾಗಿರುವುದರಿಂದ ಬೆಲೆ ಕಡಿಮೆಯಾಗಿದೆ. ಜನೇವರಿ ತಿಂಗಳಾಂತ್ಯಕ್ಕೆ ಈರಳ್ಳಿ ಬೆಲೆ ೨೪೦ ದಾಟಿತ್ತು. ಸಮಯದಲ್ಲಿ ರೈತರು ಬಂಪ್ ಲಾಭ ಪಡೆದುಕೊಂಡಿದ್ದರೆ, ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸಿತ್ತು.

ಇನ್ನು ಬೆಳ್ಳೊಳ್ಳಿ ದರದಲ್ಲೂ ಇಳಿಕೆ ಕಂಡು ಬಂದಿದ್ದು, ಕೆಜಿಗೆ 240 ರುಪಾಯಿ ಇದ್ದ ಬೆಳ್ಳೂಳ್ಳಿ ಇಂದಿನ ಮಾರುಕಟ್ಟೆಯಲ್ಲಿ 120 ರಿಂದ 140 ರುಪಾಯಿ ವರೆಗೆ ಮಾರಾಟವಾಗುತ್ತಿದೆ.












Click it and Unblock the Notifications