ಬೆಂಗಳೂರಲ್ಲಿ ಮೇ 15ರಿಂದ ಒನ್‍ಪ್ಲಸ್ 7 ಪ್ರೊ ಖರೀದಿಗೆ ಲಭ್ಯ
ಬೆಂಗಳೂರು, ಮೇ 15: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ, ಸ್ಮಾರ್ಟ್‍ಫೋನ್ ಅನುಭವದ ಎಲ್ಲೆಯನ್ನು ಮೀರಿದ ಹೊಚ್ಚ ಹೊಸದಾದ ಒನ್‍ಪ್ಲಸ್ 7 ಸೀರೀಸ್ ಸ್ಮಾರ್ಟ್‍ಫೋನ್ ಅನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು. ವೇಗವನ್ನು ಮರುವ್ಯಾಖ್ಯಾನಿಸುವ ಮತ್ತು ಮೃದುವಾದ ಫೋನ್ ಇದಾಗಿದೆ.
ಸ್ಮಾರ್ಟ್‍ಫೋನ್‍ಗಳ ಉದ್ಯಮದಲ್ಲಿ ಅತ್ಯಾಧುನಿಕವಾದ ಸ್ಮಾರ್ಟ್‍ಫೋನ್ ಡಿಸ್‍ಪ್ಲೇಯನ್ನು ಹೊಂದಿರುವ ಈ ಒನ್‍ಪ್ಲಸ್ 7 ಪ್ರೊ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಗಳ ಸಂಯೋಜನೆಯೊಂದಿಗೆ ಒಟ್ಟಾರೆ ಪ್ರೀಮಿಯಂ ಬಳಕೆದಾರರ ಅನುಭವವನ್ನು ನೀಡಲಿದೆ.
ಒನ್‍ಪ್ಲಸ್ ಇದುವರೆಗೆ ಅಭಿವೃದ್ಧಿಪಡಿಸಿದ ಉತ್ಪನ್ನಗಳಲ್ಲಿ ಇದೇ ಮೊದಲ ಬಾರಿಗೆ ಶಕ್ತಿಶಾಲಿ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗಿದ್ದು, ಬಳಕೆದಾರರು ಇಟ್ಟಿರುವ ನಿರೀಕ್ಷೆಗಳನ್ನು ನಿಜ ಮಾಡುವಂತಹದ್ದಾಗಿದೆ.
ಒನ್‍ಪ್ಲಸ್‍ನ ಸಂಸ್ಥಾಪಕರು ಮತ್ತು ಸಿಇಒ ಪೀಟ್ ಲವು ಅವರು ಮಾತನಾಡಿ, "ಸಾಧ್ಯವಿರುವ ಅತ್ಯುತ್ತಮ ಅನುಭವವನ್ನು ಜನರಿಗೆ ನೀಡಲು ನಮಗೆ ನಾವೇ ಸವಾಲುಗಳನ್ನು ನಿರಂತರವಾಗಿ ಹಾಕಿಕೊಳ್ಳುತ್ತಿರುತ್ತೇವೆ.
ಅತ್ಯುತ್ತಮ ಬಳಕೆದಾರರ ಅನುಭವವೆಂದರೆ ಸ್ವಾತಂತ್ರ್ಯ ಮತ್ತು ಅದನ್ನು ನಿಮ್ಮಿಂದ ಕಸಿದುಕೊಳ್ಳದೇ ನಿಮ್ಮ ಜೀವನ ಮಟ್ಟವನ್ನು ಸುಧಾರಣೆ ಮಾಡುವುದಾಗಿದೆ. ನಾವು ಒನ್‍ಪ್ಲಸ್ 7 ಸೀರೀಸ್ ಅನ್ನು ನಿರ್ಮಾಣ ಮಾಡಿದ್ದೇವೆ ಮತ್ತು ಜನರ ಮುಂದಿಡಲು ಮತ್ತಷ್ಟು ದಿನ ಕಾಯಲಾರೆವು. ಈ ಕಾರಣದಿಂದಲೇ ಈ ಹೊಸ ಸೀರೀಸ್ ಅನ್ನು ಜನರ ಕೈಗಿಡುತ್ತಿದ್ದೇವೆ'' ಎಂದು ತಿಳಿಸಿದರು.

ಮೇ 15 ರ ಸಂಜೆ 7 ಗಂಟೆಯಿಂದ ಖರೀದಿಸಬಹುದು
ಒನ್‍ಪ್ಲಸ್ 7 ಪ್ರೊ ಅನ್ನು ಬೆಂಗಳೂರು, ಮುಂಬೈ, ದೆಹಲಿ, ಹೈದ್ರಾಬಾದ್, ಚೆನ್ನೈ, ಪುಣೆ ಮತ್ತು ಅಹ್ಮದಾಬಾದ್‍ನ ಗ್ರಾಹಕರು ಮೇ 15 ರ ಸಂಜೆ 7 ಗಂಟೆಯಿಂದ ಖರೀದಿಸಬಹುದು.
ಒನ್‍ಪ್ಲಸ್ 7 ಪ್ರೊ ಅಮೆಜಾನ್.ಇನ್, ಒನ್‍ಪ್ಲಸ್.ಇನ್, ಎಲ್ಲಾ ಒನ್‍ಪ್ಲಸ್ ಆಫ್‍ಲೈನ್ ಸ್ಟೋರ್ ಗಳು ಎಲ್ಲಾ ರಿಲಯನ್ಸ್ ಡಿಜಿಟಲ್ ಔಟ್‍ಲೆಟ್‍ಗಳು, ಮೈಜಿಯೋ ಸ್ಟೋರ್‍ಗಳು ಮತ್ತು ಕ್ರೊಮಾ
ಔಟ್‍ಲೆಟ್‍ಗಳಲ್ಲಿಯೂ ಲಭ್ಯವಿದೆ. ಎಸ್‍ಬಿಐ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 2000 ರೂಪಾಯಿವರೆಗೆ ಕ್ಯಾಶ್‍ಬ್ಯಾಕ್ ಸೌಲಭ್ಯವಿದೆ. ಇದಲ್ಲದೇ ಜಿಯೋದಿಂದ 9300 ರೂಪಾಯಿವರೆಗಿನ ಕೊಡುಗೆಗಳೂ ಇವೆ.

ಆಕರ್ಷಕ ಡಿಸ್‍ಪ್ಲೇ ಅನಾವರಣ
ಒನ್‍ಪ್ಲಸ್ 7 ಪ್ರೊ ಸೂಪರ್ ಸ್ಮೂತ್ 90Hz ಡಿಸ್‍ಪ್ಲೇ ಹೊಂದಿದೆ. ಯಾವುದೇ ಅಡ್ಡಿ ಇಲ್ಲದೇ ಪ್ರತಿ ಸೆಕೆಂಡಿಗೆ 90 ಬಾರಿ ಸ್ಕ್ರೀನ್ ರೀಫ್ರೆಶ್ ಆಗುತ್ತದೆ.
ನೀವು ಗೇಮ್ ಆಡುತ್ತಿದ್ದರೆ ಅಥವಾ ಫಿಲ್ಮ್ ಅನ್ನು ವೀಕ್ಷಿಸುತ್ತಿದ್ದರೆ 19.5:9 ಅನುಪಾತದಲ್ಲಿ ಸ್ಕ್ರೀನ್ QHD+ ರಲ್ಲಿ ಅತ್ಯುತ್ತಮ ಗುಣಮಟ್ಟದ ಫ್ಲ್ಯೂಯಿಡ್ ಅಮೋಲೆಡ್ ಡಿಸ್‍ಪ್ಲೇಯನ್ನು ನೀಡುತ್ತದೆ. ಸ್ಕ್ರೀನ್ ಪ್ರತಿ ಇಂಚಿಗೆ 516 ಪಿಕ್ಸೆಲ್ ಸ್ಕ್ರೀನ್ ಇರಲಿದ್ದು, ನಿಖರವಾದ ಬಣ್ಣದೊಂದಿಗೆ 4.49 ದಶಲಕ್ಷ ಚಿತ್ರಗಳನ್ನು ತೆಗೆಯಬಹುದಾಗಿದೆ. HDR10 ಮತ್ತು HDR10+ ನೊಂದಿಗೆ ಹೊಂದಬಹುದಾಗಿದೆ.
6.67 ಇಂಚಿನ ಕರ್ವ್‍ಡ್ ಗ್ಲಾಸ್ ಡಿವೈಸ್‍ನ ಮುಂಭಾಗವಿಡೀ ವ್ಯಾಪಿಸಿದ್ದು, ತಡೆರಹಿತವಾಗಿ, ಅಂಚುಗಳ ಮೇಲೆ ಹರಿಯುತ್ತದೆ. ಹ್ಯಾಂಡ್‍ಸೆಟ್‍ನ ಬೆಝೆಲ್ಸ್‍ನ್ನು ಒನ್‍ಪ್ಲಸ್ ಕಡಿಮೆ ಮಾಡುತ್ತದೆ. ಒನ್‍ಪ್ಲಸ್ 7 ಪ್ರೊ ಡಿಸ್‍ಪ್ಲೇಮ್ಯಾಟೆಯ ಅತ್ಯುನ್ನತ ಶ್ರೇಣಿಯಾದ A+ ನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಮಾರ್ಟ್‍ಫೋನ್ ಡಿಸ್‍ಪ್ಲೇ ಎಂಬ ಹಿರಿಮೆಗೆ ಪಾತ್ರವಾಗಿದೆ.

ಪ್ರತಿಯೊಂದು ಕ್ಷಣಕ್ಕೂ ಒಂದು ಲೆನ್ಸ್
ಒನ್‍ಪ್ಲಸ್ 7 ಪ್ರೊದಲ್ಲಿ ಅತ್ಯಾಧುನಿಕವಾದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಈ ಹಿಂದೆಂದಿಗಿಂತಲೂ ಅತ್ಯುತ್ಕೃಷ್ಠ, ಸಾಮರ್ಥ್ಯವನ್ನು ಹೊಂದಿವೆ. ಇವು ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿಯಲಿವೆ. ನೀವು ದೂರದ ಜಾಗವನ್ನು ಸೆರೆ ಹಿಡಿಯಲು ಪ್ರಯತ್ನ ಮಾಡಿದರೆ, ನಿಮ್ಮಿಂದ ದೂರವಿರುವ ವಸ್ತುವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ ಅಥವಾ ಅತ್ಯುತ್ತಮ ಪೋಟ್ರೇಟ್ ಅನ್ನು ಕ್ಲಿಕ್ಕಿಸಲು ಪ್ರಯತ್ನ ನಡೆಸಿದ್ದರೆ ಈ ಎಲ್ಲಾ ಸಾಧ್ಯತೆಗಳನ್ನು ಒನ್‍ಪ್ಲಸ್ 7 ಪ್ರೊ ಕ್ಯಾಮೆರಾ ಸಾಧ್ಯ ಮಾಡಲಿದೆ.
ಕಡಿಮೆ ಬೆಳಕಿನ ವಾತಾವರಣದಲ್ಲಿಯೂ ಒನ್‍ಪ್ಲಸ್ 7 ಪ್ರೊ ಸಾಂಪ್ರದಾಯಿಕ ಸಾಫ್ಟ್‍ವೇರ್ ಸಮ್ಮಿಳಿತಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಬೆಳಕನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 4-ಇನ್-ಒನ್ ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನ ಇದ್ದು, ರಾತ್ರಿಯಲ್ಲಿ ನಿಮ್ಮ ನೆಚ್ಚಿನ ಸೀನ್ ಅನ್ನು ಸುಂದರಗೊಳಿಸಲಿವೆ. ಒನ್‍ಪ್ಲಸ್‍ನ ರಿಯರ್ ಕ್ಯಾಮೆರಾಗಳು 48 ಮೆಗಾಪಿಕ್ಸೆಲ್, 1/2 ಇಂಚಿನ ಸೂಪರ್ ಸೈಜಿನ ಸೋನಿ ಐಎಂಎಕ್ಸ್586 ಸೆನ್ಸಾರ್, ಕಸ್ಟಮ್-ಮೇಡ್ 7 ಅಂಶಗಳ ಪ್ಲಾಸ್ಟಿಕ್ ಲೆನ್ಸ್ ಅನ್ನು ಒಳಗೊಂಡಿದೆ.

ಇಮ್ಮೆರ್ಸಿವ್ ಗೇಮಿಂಗ್
ಅತ್ಯುತ್ತಮ ಸೌಂಡ್ ಗುಣಮಟ್ಟಕ್ಕಾಗಿ ಶಕ್ತಿಶಾಲಿ ಆ್ಯಂಪ್ಲಿಫೈಯರ್‍ನೊಂದಿಗೆ ಸ್ಟೀರಿಯೋ ಡ್ಯುಯೆಲ್-ಸ್ಪೀಕರ್ ಸಿಸ್ಟಂ ಅಳವಡಿಸಲಾಗಿದೆ. ನಾವು ನಮ್ಮ ಬಳಕೆದಾರರಿಗೆ ಡಾಲ್ಬಿ ಎಫೆಕ್ಟ್ ನೀಡಲು ಪ್ರಯತ್ನ ಮಾಡಿದ್ದೇವೆ. ಈ ಮೂಲಕ ನಮ್ಮ ಗ್ರಾಹಕರನ್ನು ಸಂತೃಪ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ. ಬಳಕೆದಾರರು ತಮ್ಮ ನೆಚ್ಚಿನ ಮನೋರಂಜನೆಗಳಾದ ಸಿನೆಮಾಗಳು, ಟಿವಿ ಶೊಗಳು ಮತ್ತು ಗೇಮ್‍ಗಳನ್ನು ವೀಕ್ಷಿಸುವಾಗ ಅತ್ಯುತ್ತಮ ಗುಣಮಟ್ಟದ ಡಾಲ್ಬಿ ಸೌಂಡ್ ಎಫೆಕ್ಟ್‍ನ ಅನುಭವವನ್ನು ಪಡೆಯಲಿದ್ದಾರೆ.

ಒನ್ ಪ್ಲಸ್ 7 ವಿಶೇಷಗಳು
ಸ್ಲೀಕ್ ಪ್ಯಾಕೇಜಿನಲ್ಲಿ ಒನ್‍ಪ್ಲಸ್ 7 ಮತ್ತೊಂದು ಅತ್ಯದ್ಭುತ ಪ್ರೀಮಿಯಂ ಅನುಭವವಾಗಿದೆ. Qualcomm® SnapdragonTM ಮೊಬೈಲ್ ಪ್ಲಾಟ್‍ಫಾರ್ಮ್, ಯುಎಫ್‍ಎಸ್ 3.0, ಡಾಲ್ಬಿ ಅಟ್ಮೋಸ್ ಸ್ಟೀರಿಯೋ ಸ್ಪೀಕರ್‍ಗಳು, ಆರ್‍ಎಎಂ ಬೂಸ್ಟ್, ಹೊಸ ಸ್ಕ್ರೀನ್ ಅನ್‍ಲಾಕ್ ತಂತ್ರಜ್ಞಾನ, ಅಲ್ಟ್ರಾಶಾಟ್ ಇಂಜಿನ್ ಮತ್ತು ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದುವ ಮೂಲಕ ಒನ್‍ಪ್ಲಸ್ ಇತಿಹಾಸದಲ್ಲಿ ಒನ್‍ಪ್ಲಸ್ 7 ಒಂದು ಬಹುದೊಡ್ಡ ಹೆಜ್ಜೆಯಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications