ಬಿಬಿಎಂಪಿ 5 ಭಾಗ, ಮೂರು ಹಂತದ ಆಡಳಿತ?

ಬೆಂಗಳೂರು, ಜುಲೈ 14 : ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದ ಆಡಳಿತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದೇ ನೋಡಿಕೊಳ್ಳಲು ಸಾಧ್ಯವಿಲ್ಲ. ಪಾಲಿಕೆಯನ್ನು 5 ಭಾಗಗಳಾಗಿ ಮಾಡಿ, ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಿಬಿಎಂಪಿ ವಿಭಜನೆ ಕುರಿತು ವರದಿ ನೀಡಲು ಸರ್ಕಾರ ರಚನೆ ಮಾಡಿದ್ದ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ಮೂವರು ಸದಸ್ಯರ ಸಮಿತಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿಯನ್ನು ನೀಡಿದೆ. ಪಾಲಿಕೆಯನ್ನು 5 ವಿಭಾಗಗಳಾಗಿ ವಿಂಗಡನೆ ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದೆ. [ಬಿಬಿಎಂಪಿಯನ್ನು 3 ಅಥವ 5 ಭಾಗ ಮಾಡಿ]

ಪಾಲಿಕೆಯನ್ನು ಉತ್ತರ, ದಕ್ಷಿಣ, ಕೇಂದ್ರ, ಪೂರ್ವ, ಪಶ್ಚಿಮ ಎಂದು ಐದು ಭಾಗಗಳಾಗಿ ವಿಂಗಡನೆ ಮಾಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. ವಾರ್ಡ್ ಮಟ್ಟದ ಸಮಿತಿಗಳು, ಐದು ಪಾಲಿಕೆಗಳು ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸರ್ಕಾರ ರಚನೆ ಮಾಡಿದ್ದ ಮೂವರು ಸದಸ್ಯರ ಸಮಿತಿಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷರಾಗಿದ್ದರು. ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್‌ನ ಸದಸ್ಯ ರವಿಚಂದರ್ ಈ ಸಮಿತಿಯಲ್ಲಿದ್ದಾರೆ. ಸಮಿತಿಯ ಶಿಫಾರಸುಗಳನ್ನು ಚಿತ್ರಗಳಲ್ಲಿ ನೋಡಿ

ಪಾಲಿಕೆ ವಿಭಜನೆ ವರದಿ ನೀಡಿದ ಬಿ.ಎಸ್.ಪಾಟೀಲ್ ಸಮಿತಿ

ಪಾಲಿಕೆ ವಿಭಜನೆ ವರದಿ ನೀಡಿದ ಬಿ.ಎಸ್.ಪಾಟೀಲ್ ಸಮಿತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ಮಾಡಿ, ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೂವರು ಸದಸ್ಯರ ಸಮಿತಿ ಸೋಮವಾರ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದೆ.

5 ಪಾಲಿಕೆಗಳು, ವಾರ್ಡ್ ಸಮಿತಿಗಳ ರಚನೆ

5 ಪಾಲಿಕೆಗಳು, ವಾರ್ಡ್ ಸಮಿತಿಗಳ ರಚನೆ

ಬಿಬಿಎಂಪಿಯನ್ನು ಉತ್ತರ, ದಕ್ಷಿಣ, ಕೇಂದ್ರ, ಪೂರ್ವ, ಪಶ್ಚಿಮ ಎಂದು ಐದು ಭಾಗಗಳಾಗಿ ವಿಂಗಡನೆ ಮಾಡಬಹುದು ಎಂದು ಹೇಳಿರುವ ಸಮಿತಿ ವಾರ್ಡ್ ಮಟ್ಟದ ಸಮಿತಿಗಳು, ಐದು ಪಾಲಿಕೆಗಳು ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಹೇಳಿದೆ.

ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿ

ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿ

* ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಯಶವಂತಪುರ, ರಾಜರಾಜೇಶ್ವರಿನಗರ, ಗೋವಿಂದರಾಜನಗರ, ವಿಜಯ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ ಮತ್ತು ಪದ್ಮನಾಭನಗರ ವಿಧಾನಸಭೆ ಕ್ಷೇತ್ರಗಳು ಬರಲಿವೆ.

* ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಗೆ ಜಯನಗರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಶಾಂತಿನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರಗಳು ಬರುತ್ತವೆ.

* ಬೆಂಗಳೂರು ಪೂರ್ವ ಪಾಲಿಕೆಗೆ ಶಿವಾಜಿನಗರ, ಸಿ.ವಿ.ರಾಮನ್‌ನಗರ, ಸರ್ವಜ್ಞನಗರ, ಕೆ.ಆರ್.ಪುರ ಮತ್ತು ಮಹದೇವಪುರ ವಿಧಾನಸಭೆ ಕ್ಷೇತ್ರಗಳು ಸೇರಿಕೊಳ್ಳಲಿವೆ.

ಬೆಂಗಳೂರು ಕೇಂದ್ರ, ಉತ್ತರ ಪಾಲಿಕೆ ವ್ಯಾಪ್ತಿ

ಬೆಂಗಳೂರು ಕೇಂದ್ರ, ಉತ್ತರ ಪಾಲಿಕೆ ವ್ಯಾಪ್ತಿ

* ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಗೆ ಬ್ಯಾಟರಾಯನಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಯಶವಂತಪುರ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳು ಸೇರಿಕೊಳ್ಳಲಿವೆ.

* ಬೆಂಗಳೂರು ಕೇಂದ್ರದ ವ್ಯಾಪ್ತಿಗೆ ಶಿವಾಜಿನಗರ, ಗಾಂಧಿನಗರ, ಹೆಬ್ಬಾಳ, ಪುಲಕೇಶಿನಗರ, ಮಲ್ಲೇಶ್ವರಂ, ರಾಜಾಜಿನಗರ ಮತ್ತು ಮಹಾಲಕ್ಷ್ಮೀಲೇಔಟ್ ವಿಧಾನಸಭೆ ಕ್ಷೇತ್ರಗಳು ಬರಲಿವೆ.

ವಾರ್ಡ್ ಸಮಿತಿ ಎಂದರೇನು?

ವಾರ್ಡ್ ಸಮಿತಿ ಎಂದರೇನು?

ವಾರ್ಡ್‌ ಮಟ್ಟದ ಆಡಳಿತದ ಜವಾಬ್ದಾರಿಯನ್ನು ವಾರ್ಡ್ ಸಮತಿಗೆ ನೀಡಲಾಗುತ್ತದೆ. ಸ್ಥಳೀಯ ಕೌನ್ಸಿಲರ್ ಇದರ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯಲ್ಲಿ 20 ಜನ ಸದಸ್ಯರಿರಬೇಕು. ಇವರಲ್ಲಿ 10 ಜನರನ್ನು ಸಮಾನ ಪ್ರಾತಿನಿಧ್ಯದ ಆಧಾರದ ಅಡಿ, ವಾರ್ಡ್‌ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ನೇಮಿಸುತ್ತಾರೆ. ಉಳಿದ 10 ಜನರನ್ನು ನಾಮನಿರ್ದೇಶನ ಮಾಡಲಾಗುತ್ತದೆ.

ಜನರ ಮೂಲಕ ಮೇಯರ್ ಆಯ್ಕೆ, 5 ವರ್ಷದ ಅಧಿಕಾರ

ಜನರ ಮೂಲಕ ಮೇಯರ್ ಆಯ್ಕೆ, 5 ವರ್ಷದ ಅಧಿಕಾರ

ಪಾಲಿಕೆಯ 2ನೇ ಆಡಳಿತದ ಹಂತದಲ್ಲಿ ಮೇಯರ್ ಇರುತ್ತಾರೆ. ಜನರಿಂದ ನೇರವಾಗಿ ಮೇಯರ್ ಆಯ್ಕೆಯಾಗಬೇಕು ಮತ್ತು ಅವರ ಅಧಿಕಾರಾವಧಿ 5 ವರ್ಷ ಇರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಜನ ಕೌನ್ಸಿಲರ್ ಆಯ್ಕೆ ಮಾಡುವಾಗಲೇ ತಮ್ಮ ಮೇಯರ್ ಯಾರು ಎಂದು ಇನ್ನೊಂದು ಮತ ಚಲಾಯಿಸಬೇಕು. ಉಪ ಮೇಯರ್‌ಗಳನ್ನು ಕೌನ್ಸಿಲರ್‌ಗಳು ಮತ ಹಾಕುವ ಮೂಲಕ ಆಯ್ಕೆ ಮಾಡಬಹುದು ಎಂದು ವರದಿ ಹೇಳುತ್ತದೆ.

ಬೃಹತ್ ಬೆಂಗಳೂರು ಪ್ರಾಧಿಕಾರ

ಬೃಹತ್ ಬೆಂಗಳೂರು ಪ್ರಾಧಿಕಾರ

ಪಾಲಿಕೆಯ ಮೂರನೇ ಆಡಳಿತ ವ್ಯವಸ್ಥೆ ಬೃಹತ್ ಬೆಂಗಳೂರು ಪ್ರಾಧಿಕಾರವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಬಿಡಿಎ, ಜಲಮಂಡಳಿ, ನಮ್ಮ ಮೆಟ್ರೋ, ಬೆಸ್ಕಾಂ ಪ್ರತಿನಿಧಿಗಳು ಈ ಪ್ರಾಧಿಕಾರದಲ್ಲಿರುತ್ತಾರೆ. ಐದು ಪಾಲಿಕೆಗಳ ಮೇಯರ್‌ಗಳು ಇದರ ಸದಸ್ಯರಾಗಿರುತ್ತಾರೆ. ನಗರದ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸುವುದು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವುದು ಇದರ ಕೆಲಸವಾಗಿದೆ.

ಮುಖ್ಯಮಂತ್ರಿಗಳು ಹೇಳುವುದೇನು?

ಮುಖ್ಯಮಂತ್ರಿಗಳು ಹೇಳುವುದೇನು?

ಸಮಿತಿಯ ವರದಿಯನ್ನು ಪಡೆದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸಚಿವ ಎಸ್.ಆರ್.ಪಾಟೀಲ್ ನೇತೃತ್ವದ ಸೆಲೆಕ್ಟ್ ಕಮಿಟಿ ತನ್ನ ವರದಿಯನ್ನು ನೀಡಿದ ಬಳಿಕ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+