ಐಟಿ ಕಂಪೆನಿ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟಿದ್ದವನು ಅರೆಸ್ಟ್

ಬೆಂಗಳೂರು, ಜೂನ್ 5: ಎಚ್ ಎಎಲ್ ನಲ್ಲಿರುವ ಐಟಿ ಕಂಪೆನಿಯಲ್ಲಿ ಮಂಗಳೂರು ಮೂಲದ, ಇಪ್ಪತ್ನಾಲ್ಕು ವರ್ಷದ ಪರಮೇಶ್ವರ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಇವನು ಎಂಥ ಘನಂದಾರಿ ಕೆಲಸ ಮಾಡಿದ್ದಾನೆ ಅಂದರೆ, ಹೆಣ್ಣುಮಕ್ಕಳ ಶೌಚಾಲಯದಲ್ಲಿ ಮೊಬೈಲ್ ಫೋನ್ ಅನ್ನು ಇಟ್ಟು ಚಿತ್ರೀಕರಿಸಿಕೊಳ್ಳುತ್ತಿದ್ದನಂತೆ.

ಆ ಐಟಿ ಕಂಪೆನಿಯಲ್ಲಿ ಈ ಪರಮೇಶ್ವರ ಫುಡ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ. ಶೌಚಾಲಯದಲ್ಲಿ ಮೊಬೈಲ್ ಫೋನ್ ಇರುವುದು ಮಹಿಳಾ ಟೆಕಿಯೊಬ್ಬರ ಗಮನಕ್ಕೆ ಬಂದಿದೆ. ಆ ತಕ್ಷಣವೇ ಆಕೆ ಕಂಪೆನಿಯ ಹಿರಿಯ ಅಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆ ನಂತರ ಪೊಲೀಸರಿಗೆ ದೂರು ನೀಡಲಾಗಿದೆ.[ಬೆಂಗಳೂರಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ]

One arrested in Bengaluru IT company, who fixed a camera in ladies toilet

ಈ ಪ್ರಕರಣದ ಬೆನ್ನಟ್ಟಿ ವಿಚಾರಣೆಗೆ ಇಳಿದ ಪೊಲೀಸರು ಪರಮೇಶ್ವರನನ್ನು ವಶಕ್ಕೆ ಪಡೆದಿದ್ದಾರೆ. ಆ ವೇಳೆಯೇ ಆತನ ಮೊಬೈಲ್ ಫೋನ್ ನಲ್ಲಿ ಕೆಲವು ವಿಡಿಯೋಗಳು ಸಿಕ್ಕಿವೆ. ತನಿಖೆಯನ್ನು ಮುಂದುವರಿಸಿದ್ದು, ಆತ ವಾಸವಿದ್ದ ಕೋಣೆಯಲ್ಲೂ ಪರಿಶೀಲನೆಯು ಮುಂದುವರಿದಿದೆ. ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ.[ಹುಬ್ಬಳ್ಳಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ]

ಇಂಥ ಕಾಮುಕರಿಗೆ ಸರಿಯಾದ ಶಿಕ್ಷೆಯಾಗಬೇಕು. ಇಂಥದ್ದೇ ಪ್ರಕರಣವೊಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಅಲ್ಲಿನ ವಿದ್ಯಾರ್ಥಿಯೊಬ್ಬ ಹೆಣ್ಣುಮಕ್ಕಳ ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು, ವಿಡಿಯೋ ಚಿತ್ರೀಕರಣ ನಡೆಸಿದ್ದ. ಆ ನಂತರ ಸಿಕ್ಕಿಬಿದ್ದಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+