ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಸ್ಟರಿ18 ಚಾನೆಲ್ ನಲ್ಲಿ ಬೆಂಗ್ಳೂರಿನ ಅಕ್ವಾಪೋನಿಕ್ಸ್ ಕೃಷಿಕ ಯಶೋಗಾಥೆ

|
Google Oneindia Kannada News

ಬೆಂಗಳೂರು, ಜನವರಿ 26: 'ಒಎಂಜಿ! ಯೆ ಮೇರಾ ಇಂಡಿಯಾ', ಸೀಸನ್ 6, ಅಕ್ವಾಪೋನಿಕ್ಸ್ ಎಂಬ ಹೊಸ ಕೃಷಿ ತಂತ್ರಜ್ಞಾನದ ಮೂಲಕ ಸಾಧನೆ ಮಾಡಿದ ವಿಜಯ್ ಕುಮಾರ್ ಬಗ್ಗೆ ಪ್ರಸಾರವಾಗಲಿದೆ.

'ಅಕ್ವಾಪೋನಿಕ್ಸ್' ಎಂಬ ಪದವು ಹೈಡ್ರೋಪೋನಿಕ್ಸ್ ನೊಂದಿಗೆ ಸಾಂಪ್ರದಾಯಿಕ ಜಲಚರಗಳ ಸಂಯೋಜನೆಯನ್ನು ಸೂಚಿಸುತ್ತದೆ; ಅಥವಾ ಸೂಕ್ಷ್ಮ-ಪೋಷಕಾಂಶ-ಸಮೃದ್ಧ ನೀರಿನಲ್ಲಿ ಬೆಳೆಯುವ ಬೆಳೆಗಳೊಂದಿಗೆ ದೊಡ್ಡ ಟ್ಯಾಂಕ್‌ಗಳಲ್ಲಿ ಮೀನು ಮತ್ತು ಚಿಪ್ಪು-ಮೀನುಗಳ ಪಾಲನೆಯನ್ನು ವಿವರಿಸುತ್ತದೆ.

ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1

ಅಕ್ವಾಪೋನಿಕ್ಸ್ ಎರಡು ತಂತ್ರಗಳನ್ನು ಒಟ್ಟಿಗೆ ಬಳಸಿ ರಚಿಸಿದ ಸಹಜೀವನದ ಪರಿಸರದ ಲಾಭವನ್ನು ಪಡೆದುಕೊಳ್ಳುತ್ತದೆ. ಮೀನುಗಳಿಂದ ಉತ್ಪತ್ತಿಯಾಗುವ ಅಮೋನಿಯಾ ಭರಿತ ತ್ಯಾಜ್ಯ-ಉತ್ಪನ್ನಗಳನ್ನು ನೀರಿನಲ್ಲಿ ಬಿಡಲಾಗುತ್ತದೆ. ಈ ನೀರಿನಲ್ಲಿ ಬೆಳೆಯುವ ಸಸ್ಯಗಳು ಅಮೋನಿಯಾವನ್ನು ಹೀರಿಕೊಳ್ಳುತ್ತವೆ, ಹೀಗಾಗಿ ನೀರನ್ನು ಶುದ್ಧೀಕರಿಸುತ್ತವೆ. ಈ ಪ್ರಕ್ರಿಯೆಯು ನೀರಿನ ವ್ಯರ್ಥವಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಅದರೊಂದಿಗೆ ಸಸ್ಯಗಳು ಸಾಕಷ್ಟು ಪೋಷಕಾಂಶಗಳು ಮತ್ತು ಖನಿಜಗಳೊಂದಿಗೆ ಚೆನ್ನಾಗಿ ಬೆಳೆಯುವುದನ್ನು ಖಾತ್ರಿಗೊಳಿಸುತ್ತದೆ.

OMG! Yeh Mera India Season 6, Bengalurean using farming technology Aquaponics

ಬೆಂಗಳೂರು ನಿವಾಸಿ ಕೆ ವಿಜಯಕುಮಾರ್ ಸ್ಥಾಪಿಸಿದ ಮಾಧವಿ ಫಾರ್ಮ್ಸ್ ಭಾರತದ ಮೊದಲ ಮತ್ತು ಅತಿದೊಡ್ಡ ಅಕ್ವಾಪೋನಿಕ್ಸ್ ಫಾರ್ಮ್ ಆಗಿದೆ. 60,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಫಾರ್ಮ್ ಪ್ರತಿವರ್ಷ 50 ಟನ್ ಗಿಡಮೂಲಿಕೆಗಳು, 250 ಟನ್ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುತ್ತದೆ. ಅಕ್ವಾಪೋನಿಕ್ಸ್ ಮೂಲಕ ಉತ್ಪತ್ತಿಯಾಗುವ ಸಸ್ಯಗಳ ಪ್ರಮಾಣ, ಗುಣಮಟ್ಟ ಮತ್ತು ಪೌಷ್ಠಿಕಾಂಶದ ಮೌಲ್ಯವು ಸಾಂಪ್ರದಾಯಿಕ ಕೃಷಿಗಿಂತ ಉತ್ತಮವಾಗಿದೆ.

OMG! Yeh Mera India Season 6, Bengalurean using farming technology Aquaponics

ಬೆಂಗಳೂರಿನ ಈ ಆಕರ್ಷಕ ಕಥೆಗಳ ಹಿಂದಿನ ಜನರನ್ನು ಭೇಟಿ ಮಾಡಲು ಮುಂದಿನ ಸಂಚಿಕೆಯನ್ನು ವೀಕ್ಷಿಸಿ, ಜೊತೆಗೆ ದೇಶಾದ್ಯಂತದ ಇತರ ಕುತೂಹಲಕಾರಿ ಸಂಗತಿಗಳು 'ಒಎಂಜಿ! ಯೆ ಮೇರಾ ಇಂಡಿಯಾ'ದಲ್ಲಿ ಸೋಮವಾರ-ಮಂಗಳವಾರ, 27 ಮತ್ತು 28 ರಂದು ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿ18'ನಲ್ಲಿ ಪ್ರಸಾರವಾಗಲಿದೆ.

English summary
'HistoryTV18's OMG! Yeh Mera India Season 6.The latest episode will feature two fascinating stories from the city of Bangalore- a new farming technology called Aquaponics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X