ನಮ್ಮ ಮೆಟ್ರೋದಲ್ಲಿ ಮಹಿಳಾ ಚಾಲಕರ ಸಂಖ್ಯೆ ಎಷ್ಟು?
ಬೆಂಗಳೂರು, ಮಾ. 16: ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎಂಬ ಮಾತಿಗೆ ನಮ್ಮ ಮೆಟ್ರೋ ತಕ್ಕದಾಗಿ ನಡೆದುಕೊಳ್ಳುತ್ತಿದೆ. ಬೆಂಗಳೂರು ಮೆಟ್ರೋದ ಚಾಲಕರಲ್ಲಿ ಮಹಿಳೆಯರ ಪಾಲು ದೊಡ್ಡದಿದೆ.
ಮೆಟ್ರೋ ಇತ್ತೀಚೆಗೆ ನೇಮಕ ಮಾಡಿಕೊಂಡ 130 ಜನ ಲೊಕೋ ಪೈಲಟ್ ಗಳಲ್ಲಿ 32 ಮಹಿಳೆಯರಿದ್ದಾರೆ. ಈ ಮೊದಲು ಕೇವಲ ಶೇ. 6 ರಷ್ಟಿದ್ದ ಮಹಿಳೆಯರ ಸಂಖ್ಯೆ ಒಮ್ಮೆಲೆ ಶೇ. 25 ಕ್ಕೆ ತಲುಪಿದೆ. ಇದೊಂದು ಉತ್ತಮ ಬೆಳವಣಿಗೆ ಎಂದೇ ಹೇಳಲಾಗಿದೆ.['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]

ಮೊದಲನೇ ಬ್ಯಾಚ್ ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮೊದಲ ಬ್ಯಾಚ್ ನ 82 ಜನರಲ್ಲಿ 17 ಮಹಿಳೆಯರಿದ್ದಾರೆ. ಬೈಯಪ್ಪನಹಳ್ಳಿಯ ಮೆಟ್ರೋ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹಣಕಾಸು ವಿಭಾಗದ ಜನರಲ್ ಮ್ಯಾನೇನರ್ ಯು.ಎ.ವಸಂತ್ ರಾವ್ ತಿಳಿಸಿದ್ದಾರೆ. ಇನ್ನುಳಿದ 15 ಜನ ಮಹಿಳಾ ಸಿಬ್ಬಂದಿ ಮುಂದಿನ ತಿಂಗಳು ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. [ಚಿತ್ರಗಳು : ಸುರಂಗ ಮಾರ್ಗದಲ್ಲಿ ಓಡಿದ ನಮ್ಮ ಮೆಟ್ರೋ]
ಡಿಪ್ಲೋಮಾ ಮುಗಿಸಿದ ನನಗೆ ಜವಾಬ್ದಾರಿಯುತ ಕೆಲಸ ಸಿಕ್ಕಿದೆ. ನಿಜಕ್ಕೂ ಈ ಕೆಲಸ ಮಾಡಲು ತುಂಬಾ ಹೆಮ್ಮೆಯಾಗುತ್ತದೆ ಎಂದು ಮಂಗಳೂರು ಮೂಲದ 33 ವರ್ಷದ ಉಮಾ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಮೆಟ್ರೋದ ಸಿಬ್ಬಂದಿ ಶೇಕಡಾವಾರು ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದ್ದು ಇತರ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದೆ.












Click it and Unblock the Notifications