ಎರಡು ತಿಂಗಳುಗಳ ಕಾಲ ನೃಪತುಂಗ ರಸ್ತೆಯಲ್ಲಿ ಸಂಚಾರ ನಿರ್ಬಂಧ

ನೃಪತುಂಗ ರಸ್ತೆಯಲ್ಲಿ ಸೋಮವಾರ ರಾತ್ರಿಯಿಂದಲೇ ರಿಪೇರಿ ಕಾರ್ಯ ಆರಂಭವಾಗಲಿದೆ. ಈ ರಸ್ತೆಯನ್ನು ಟೆಂಡರ್ ಶ್ಯೂ ರ್ ಯೋಜನೆಯಲ್ಲಿ ಬಿಬಿಎಂಪಿ ಅಭಿವೃದ್ಧಿ ಮಾಡುತ್ತಿದೆ. ಬದಲಿ ಮಾರ್ಗ ಇಲ್ಲಿ ತಿಳಿದುಕೊಳ್ಳಿ

ಬೆಂಗಳೂರು, ಫೆಬ್ರವರಿ 28: ಕೆ.ಆರ್ ಸರ್ಕಲ್ ನಿಂದ ಹಡ್ಸನ್ ಸರ್ಕಲ್ ತನಕ, ಕಬ್ಬನ್ ಪಾರ್ಕ್ ಆಸುಪಾಸಿನ ಸುತ್ತಾ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಇನ್ನೆರಡು ತಿಂಗಳು ಕಿರಿಕಿರಿ ತಪ್ಪಿದ್ದಲ್ಲ. ನೃಪತುಂಗ ರಸ್ತೆಯಲ್ಲಿ ಸೋಮವಾರ ರಾತ್ರಿಯಿಂದಲೇ ರಿಪೇರಿ ಕಾರ್ಯ ಆರಂಭವಾಗಲಿದೆ. ಈ ರಸ್ತೆಯನ್ನು ಟೆಂಡರ್ ಶ್ಯೂ ರ್ ಯೋಜನೆಯಲ್ಲಿ ಬಿಬಿಎಂಪಿ ಅಭಿವೃದ್ಧಿ ಮಾಡುತ್ತಿದೆ.

ಸೋಮವಾರ ರಾತ್ರಿಯಿಂದ ನೃಪತುಂಗ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾರ್ಯ ಆರಂಭಗೊಂಡಿದೆ. ಸರ್ಕಾರಿ ವಾಹನಗಳಿಗೆ ಒಂದು ಲೇನ್ ಮೀಸಲಿಡಲಾಗಿದೆ. ಇದನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ವಾಹನಗಳಿಗೆ ಇನ್ನೆರಡು ತಿಂಗಳುಗಳ ಕಾಲ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.

Nrupathunga Road Repair work started TenderSURE

ಯಾವ ವಾಹನಗಳಿಗೆ ಅನುಮತಿ: ಬಿಎಂಟಿಸಿ, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ಸರ್ಕಾರಿ ವಾಹನಗಳು. ಮಾರ್ಥಾಸ್ ಆಸ್ಪತ್ರೆ, ಪೊಲೀಸ್ ಪ್ರಧಾನ ಕಚೇರಿ, ವೈಎಂ ಸಿಎ ಸೇರಿದಂತೆ ಈ ಭಾಗದಲ್ಲಿರುವ ಕಚೇರಿಗೆ ತೆರಳುವ ವಾಹನಗಳಿಗೆ ಮಾತ್ರ ಪ್ರವೇಶ.

ಬದಲಿ ಮಾರ್ಗ: ಶೇಷಾದ್ರಿ ರಸ್ತೆ, ಅರಮನೆ ರಸ್ತೆ, ವಿಧಾನಸೌಧ ಕಡೆಯಿಂದ ಕೆ.ಆರ್ ವೃತ್ತಕ್ಕೆ ಬರುವ ಬೈಕ್, ಕಾರು ಇನ್ನಿತರ ವಾಹನಗಳು ಸೆಂಚುರಿ ಕ್ಲಬ್, ಕೇಂದ್ರ ಗ್ರಂಥಾಲಯ ಮೂಲಕ ಹಡ್ಸನ್ ವೃತ್ತ್ ತಲುಪಬಹುದಾಗಿದೆ.

ಏಕಮುಖ ಸಂಚಾರ ಬದಲು: ಹಡ್ಸನ್ ವೃತ್ತದಿಂದ ಹೈಕೋರ್ಟ್ ತನಕ ಇದ್ದ ಒನ್ ವೇ ಮಾರ್ಗ ಬದಲಾಯಿಸಲಾಗಿದೆ. ಈಗ ಹಡ್ಸನ್ ವೃತ್ತದಿಂದ ಕಬ್ಬನ್ ಪಾರ್ಕ್ ಕಡೆಗೆ ವಾಹನಗಳು ಪ್ರವೇಶಿಸುವಂತಿಲ್ಲ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಕೇಂದ್ರ ಗ್ರಂಥಾಲಯದತ್ತ ತೆರಳಲು ಬಯಸುವವರು ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತದ ಮೂಲಕ ಕಬ್ಬನ್ ಪಾರ್ಕ್ ರಸ್ತೆ ತಲುಪಬಹುದಾಗಿದೆ.

ಇನ್ನಷ್ಟು ಪರ್ಯಾಯ ಮಾರ್ಗ: ಆಂಬೇಡ್ಕರ್ ವೀಧಿ, ಶೇಷಾದ್ರಿ ರಸ್ತೆ ಕಡೆಯಿಂದ ಕೆ. ಆರ್ ರಸ್ತೆ ಕಡೆ ಬರಲು ಕಬ್ಬನ್ ಪಾರ್ಕ್ ನಲ್ಲಿರುವ ಮತ್ಸ್ಯ ದರ್ಶಿನಿ ಹೋಟೆಲ್ ಮುಂಭಾಗದಿಂದ ಕೇಂದ್ರ ಗ್ರಂಥಾಲಯ ವೃತ್ತ ಸುತ್ತಿ ಬಲಕ್ಕೆ ತಿರುಗಿ ಹಡ್ಸನ್ ಸರ್ಕಲ್ ತಲುಪಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+