ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೇಶನಗಳ ಸರ್ವೇ ನಂಬರ್, ನಕಾಶೆ ಮಾಹಿತಿಗೆ ದಿಶಾಂಕ್ ಆ್ಯಪ್‌

|
Google Oneindia Kannada News

ಬೆಂಗಳೂರು, ಮಾರ್ಚ್ 29: ನಾಗರಿಕರು ನಿವೇಶನಕೊಳ್ಳುವ ಸಂದರ್ಭದಲ್ಲಿ ಮೋಸ ಹೋಗುವುದೇ ಹೆಚ್ಚು.ಯಾವುದೇ ನಿವೇಶನ ಕೆರೆ ಅಥವಾ ಸರ್ಕಾರಿ ಜಮೀನು ಆಗಿದ್ದರೆ ಅಂತಹ ಭೂಮಿಯನ್ನು ಖರೀದಿಸಿದ ಗ್ರಾಹಕರು ಹಳ್ಳಕ್ಕೆ ಬಿದ್ದಂತೆಯೇ.

ಅಂತಹ ಅನಾಹುತವನ್ನು ತಪ್ಪಿಸಲು ಇದೀಗ ದಿಶಾಂಕ್ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಕಂದಾಯ ಇಲಾಖೆ ಹೊರತಂದಿರುವ ದಿಶಾಂಕ್ ಆ್ಯಪ್‌ ನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ನಿವೇಶನದ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ದಿಶಾಂಕ್ ಆ್ಯಪ್‌ ವಿಶೇಷತೆ ಎಂದರೆ ವ್ಯಕ್ತಿ ತಾನು ನಿಂತಿರುವ ಸ್ಥಳದಲ್ಲಿ ಅಥವಾ ಯಾವುದಾದರೂ ನಿವೇಶನದ ಕುರಿತಂತೆ ಸರ್ವೇ ನಂಬರ್ ಹಾಗೂ ಮತ್ತಿತರ ಮಾಹಿತಿ ಬೇಕಾದರೆ ದಿಶಾಂಕ್ ಅಪ್ಲಿಕೇಷನ್ ಆನ್ ಲೈನ್ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು.

Now Dishaank will show survey number in your Hand

ನಾಗರಿಕರು ತಾವು ಕೊಂಡುಕೊಳ್ಳ ಬಯಸುವ ನಿವೇಶನದ ಸರ್ವೇ ನಂಬರ್ ಅದರ ಮೂಲ ಮಾಲಿಕರು ಅದರ ಒಟ್ಟು ವಿಸ್ತೀರ್ಣ ಹೀಗೆ ಎಲ್ಲ ಮಾಹಿತಿಯನ್ನು ದಿಶಾಂಕ್ ಆ್ಯಪ್‌ ಮೂಲಕವೇ ನೋಡಬಹುದಾಗಿದೆ. ಇದರೊಂದಿಗೆ ನಿವೇಶನ ಖರೀದಿ ಸಂದರ್ಭದಲ್ಲಿ ಆಗುವ ಮೋಸವನ್ನು ತಪ್ಪಿಸಲು ಕಂದಾಯ ಇಲಾಖೆ ದಿಶಾಂಕ ಅಪ್ಲಿಕೇಷನ್ ಪರಿಚಯಿಸಿದೆ.

ದಿಶಾಂಕ್ ಅಪ್ಲಿಕೇಷನ್ ಕಂದಾಯ ಇಲಾಖೆ ಸಮೀಕ್ಷೆ ಸರ್ವೇ ವಿಭಾಗದ ಆಯುಕ್ತ ಮನೀಶ್ ಮೌದ್ಗಿಲ್ ಅವರ ಚಿಂತನೆಯ ಮೂಸೆಯಿಂದ ಹೊರಬಂದ ಅಪ್ಲಿಕೇಷನ್ ಇದಾಗಿದೆ.

English summary
Department of Survey and land records has launched an application DISHAANK, which show survey numbers of land and satellite map as well. It is expected that citizens can find whether the site is in lake area. drain or any other government land which is offense if purchased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X