• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರಿಗೆ ಸಿಹಿ ಸುದ್ದಿ: ನೈಸ್ ರಸ್ತೆಯಲ್ಲೂ ಮೆಟ್ರೋ ಮಾರ್ಗ

|

ಬೆಂಗಳೂರು, ಡಿಸೆಂಬರ್ 17: ನೈಸ್ ರಸ್ತೆಯಲ್ಲೂ ನಮ್ಮ ಮೆಟ್ರೋ ನಿರ್ಮಾಣ ಮಾಡುವ ಸಾಧ್ಯತೆ ಇದೆ. ನಂದಿ ಇನ್‌ಫ್ರಾ ಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಹಾಗೂ ಬಿಡಿಎ ಸಹಭಾಗಿತ್ವದಲ್ಲಿ ನಮ್ಮ ಮೆಟ್ರೋ ಮಾರ್ಗ ನಿರ್ಮಾಣವಾಗುವ ಸಾಧ್ಯತೆ ಇದೆ.

ಈಗಾಗಲೇ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್ ಮೋಹನ್ ದಾಸ್ ಹೆಗಡೆ ಸರ್ಕಾರಕ್ಕೆ ನೀಡಿರುವ ಸಲಹೆ ಆಧರಿಸಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

 ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಸಾರ್ವಜನಿಕರಿಗೆ ಶೀಘ್ರ ಮೆಟ್ರೋ ಸೇವೆ ಕಲ್ಪಿಸುವ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 ಮೆಟ್ರೋ ಮಾರ್ಗ ಎಲ್ಲಿಂದೆಲ್ಲಿಗೆ

ಮೆಟ್ರೋ ಮಾರ್ಗ ಎಲ್ಲಿಂದೆಲ್ಲಿಗೆ

ತುಮಕೂರು ರಸ್ತೆ-ಎಲೆಕ್ಟ್ರಾನಿಕ್ ಸಿಟಿ ನೈಸ್ ಮಾರ್ಗದಲ್ಲಿ ಮತ್ತು ಮುಂದೆ ಬಿಡಿಎ ನಿರ್ಮಾಣ ಮಾಡಲಿರುವ ಪೆರಿಫೆರಲ್ ವರ್ತುಲ್ ರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಚಿಸಲಾಗಿದೆ.

 ಖಾಸಗಿ ಸಹಭಾಗಿತ್ವ ಹೊಸದಲ್ಲ

ಖಾಸಗಿ ಸಹಭಾಗಿತ್ವ ಹೊಸದಲ್ಲ

ಬಿಎಂಆರ್‌ಸಿಎಲ್ ಗೆ ಖಾಸಗಿ ಸಹಭಾಗಿತ್ವ ಹೊಸದಲ್ಲ, ಸಿಲ್ಕ್‌ಬೋರ್ಡ್ -ಕೆಆರ್ ಪುರ ಮಾರ್ಗ ನಿರ್ಮಾಣದಲ್ಲೂ ವಿನೂತನ ಸಂಪನ್ಮೂಲ ಕ್ರೂಢೀಕರಣ ಯೋಜನೆಯನ್ನು ನಿಗಮ ಅನುಷ್ಠಾನಗೊಳಿಸಿದೆ. 4.202 ಕೋಟಿ ರೂ ಯೋಜನಾ ವೆಚ್ಚದಲ್ಲಿ 1100 ಕೋಟಿ ರೂ ವೆಚ್ಚವನ್ನು ಖಾಸಗಿ ಕಂಪನಿಗಳಿಂದ ನಿಗಮ ಪಡೆದುಕೊಳ್ಳಲಿದೆ.

 ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

 ಭೂಸ್ವಾಧೀನ ವಿಳಂಬ ದೂರವಾಗಲಿದೆ

ಭೂಸ್ವಾಧೀನ ವಿಳಂಬ ದೂರವಾಗಲಿದೆ

ಈಗಾಗಲೇ ನೈಸ್ ರಸ್ತೆ ಅಭಿವೃದ್ಧಿಯಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಿದರೆ, ಭೂಸ್ವಾಧೀನ ವಿಳಂಬ ದೂರವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಕಡಿಮೆ ಅವಧಿಯಲ್ಲಿ ಮೆಟ್ರೋ ಸೌಲಭ್ಯ ದೊರೆಯಲಿದೆ.

 ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

 ಬಿಡಿಎ ಜೊತೆ ಚರ್ಚೆ

ಬಿಡಿಎ ಜೊತೆ ಚರ್ಚೆ

ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸುವಂತೆ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಬೆಂಗಳೂರು ಪೂರ್ವ ಭಾಗದಲ್ಲಿ 65 ಕಿ.ಮೀ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣವಾಗಲಿದೆ. ಕಳೆದ 12 ವರ್ಷದಿಂದ ಚರ್ಚೆಯ ಹಂತದಲ್ಲಿರುವ ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿದೆ.

 ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ

English summary
The Banglore Metro Rail corporation and Nandi Infrastructure corridor enterprise have decided to construct metro stations and multilevel parking complexes wherever the metro lines and NICE peripheral roads meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X