ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಆಸಕ್ತಿ ಇಲ್ಲ: ರಾಮಲಿಂಗಾರೆಡ್ಡಿ

ಬೆಂಗಳೂರು, ಮಾರ್ಚ್ 21: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇತಿಹಾಸದ ದಾಖಲೆಗಳನ್ನು ನೋಡುವುದಾದರೆ 1989ರಲ್ಲಿ ಕಾಂಗ್ರೆಸ್ ನ ಆರ್. ಗುಂಡೂರಾವ್ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಕೈ ಪಕ್ಷದ ಈ ಸ್ಥಾನದಲ್ಲಿನ ಕಡೆಯ ಗೆಲುವಾಗಿತ್ತು.

ಅಲ್ಲಿಂದೀಚೆಗೆ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಕೃಷ್ಣ ಬೈರೇ ಗೌಡ ಅವರುಗಳು ಸಂಸದರಾಗಿದ್ದ ದಿ. ಅನಂತಕುಮಾರ್ ಗೆ ಸ್ಪರ್ಧೆಯೊಡ್ಡಬಹುದಾದ ಹುರಿಯಾಳುಗಳು ಎಂದು ಗುರುತಿಸಿಕೊಂಡಿದ್ದರು.

Not interested in contesting from Bengaluru South Ramalinga Reddy

ಕಳೆದ 38 ವರ್ಷಗಳಿಂದ ಬೆಂಗಳುರು ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಸಂಸದೀಯ ಚುನಾವಣೆ ಗೆದ್ದಿಲ್ಲ, ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಸ್ಪರ್ಧಿಸುತ್ತಾರೆಯೇ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಾರಾದರೂ ಇದ್ದಲ್ಲಿ ಅದು ರೆಡ್ಡಿಯವರು ಮಾತ್ರ ಎಂದು ಹೇಳಲಾಗಿತ್ತು. ಆದರೆ ಅವರು ನಿರಾಸಕ್ತಿ ತೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+