ಬೆಂಗಳೂರಿನ ಆಟೋದಲ್ಲಿ ರೊಮ್ಯಾನ್ಸ್ ಬೇಡ: ಇದು ಓಯೋ ರೂಮ್ ಅಲ್ಲ, ಪೋಸ್ಟ್ ವೈರಲ್..!
ಬೆಂಗಳೂರಿನಲ್ಲಿ ಏನೇ ಹೊಸದು ಆದರೂ ಅದು ದೇಶದಾದ್ಯಂತ ಟ್ರೆಂಡಿಂಗ್ ಆಗುವುದು, ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುವುದು ಇದೆ. ಅದರಲ್ಲೂ ಓಯೋ ವಿಚಾರವಂತೂ ಭಾರೀ ಚರ್ಚೆ ಆಗುವುದು ಇದೆ. ಇದೀಗ ಬೆಂಗಳೂರಿನಲ್ಲಿ ಆಟೋ - ಓಯೋ ಎರಡೂ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಷ್ಟಕ್ಕೂ ಚರ್ಚೆ ಆಗುತ್ತಿರುವುದೇನು, ವೈರಲ್ ಪೋಸ್ಟ್‌ನಲ್ಲಿ ಏನಿದೆ ಎನ್ನುವ ವಿವರ ನೋಡೋಣ.
ಬೆಂಗಳೂರಿನ ಆಟೋದ ಚಾಲಕರ ಕೆಲವೊಂದು ಬರಹಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವುದು ಇದೆ. ಇದೀಗ ಅದೇ ರೀತಿ ಬೆಂಗಳೂರಿನ ಆಟೋ ಚಾಲಕರೊಬ್ಬರ ಬರಹ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಆ ವೈರಲ್ ಪೋಸ್ಟ್‌ನಲ್ಲಿ ಜನ ಆಟೋ & ಕ್ಯಾಬ್‌ಗಳಲ್ಲೂ ಏನೆಲ್ಲಾ ತರ್ಲೆ ಕೆಲಸ ಮಾಡುತ್ತಾರೆ ಎನ್ನುವುದನ್ನು ಚುಟುಕಾಗಿ ವಿವರಿಸಲಾಗಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ ?
ಎಚ್ಚರಿಕೆ, ಇಲ್ಲಿ ರೊಮ್ಯಾನ್ಸ್ ಬೇಡ. ಇದು ಕ್ಯಾಬ್ ನಮ್ಮ ಖಾಸಗಿ ಸ್ಥಳ, OYO ಅಲ್ಲ. ಆದ್ದರಿಂದ ದಯವಿಟ್ಟು ಅಂತರ ಕಾಪಾಡಿಕೊಳ್ಳಿ ಹಾಗೂ ಶಾಂತವಾಗಿರಿ. ಗೌರವ ನೀಡಿ ಮತ್ತು ಗೌರವವನ್ನು ಪಡೆಯಿರಿ. ಆರ್ಟ್ ಮನು ಮಿಲ್ಕಿ" ಎಂದು ಆಟೋವೊಂದರ ಪೋಸ್ಟ್ ವೈರಲ್ ಆಗುತ್ತಿದೆ. ಹೌದು ರೆಡ್ಡಿಟ್ ಮೀಡಿಯಾದಲ್ಲಿ ಆಟೋದಲ್ಲಿ ಕಾಣಿಸಿಕೊಂಡ ಈ ಬರಹ ವೈರಲ್ ಆಗುತ್ತಿದೆ. ಇದನ್ನು ಹಂಚಿಕೊಂಡಿರುವ ಬಳಕೆದಾರರು, ಮನು ಮಿಲ್ಕಿ ಅವರು ಏನು ಹೇಳುತ್ತಿದ್ದಾರೆ ಎನ್ನುವುದು ಕುತೂಹಲದಿಂದ ಕೂಡಿದೆ. ಈ ಬರಹವು ಅಸಂಬದ್ಧವೇನಲ್ಲ. ಆದರೆ ಹಾಸ್ಯಮಯವಾಗಿದೆ. ಸಖತ್ ಕ್ರಿಯೇಟಿವಿಟಿ ಅಂತ ರೆಡ್ಡಿಟರ್‌ವೊಬ್ಬರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನ ಈ ರೀತಿ ಆಟೋದಲ್ಲಿ ಪೋಸ್ಟ್ ಮಾಡುವುದಕ್ಕೆ ಅಥವಾ ಅಂಟಿಸುವುದಕ್ಕೆ ಕಾರಣವೇನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಚಾಲಕ ಬಹುಶಃ ಪ್ರಯಾಣಿಕರು ವಿಚಿತ್ರವಾದ ಅಥವಾ ಅತಿಯಾದ ರೊಮ್ಯಾನ್ಸ್ ಮಾಡುವುದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಇನ್ನು ಬೆಂಗಳೂರಿನ ಆಟೋ ಹಾಗೂ ಕ್ಯಾಬ್‌ಗಳ ಹಿಂಭಾಗದಲ್ಲಿ ಈ ರೀತಿಯ ಪೋಸ್ಟ್‌ಗಳನ್ನು ಅಥವಾ ಬರಹವನ್ನು ಹಂಚಿಕೊಳ್ಳುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ಈ ರೀತಿಯ ಕೆಲವೊಂದು ಪೋಸ್ಟ್‌ಗಳು ವೈರಲ್ ಆಗಿರುವುದು ಇದೆ.
ಕೆಲವು ಪ್ರಯಾಣಿಕರು ಅನವಶ್ಯಕವಾಗಿ ಇಲ್ಲ ಚಾಲಕರಿಗೆ ಕಿರಿಕಿರಿಯನ್ನುಂಟು ಮಾಡುವಂತೆ ರೊಮ್ಯಾನ್ಸ್ ಮಾಡುವುದು ಸಹ ಈ ರೀತಿಯ ಬರಹಗಳಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications