ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
ನಿರ್ವಹಣಾ ಕಾರ್ಯದ ನಿಮಿತ್ತ ನಾಳೆ ಬೆಳಗ್ಗೆ 8 ಗಂಟೆಯಿಂದ 6 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಪೂರೈಕೆ ಕಂಪೆನಿ) ಹೇಳಿದೆ.
ಬೆಂಗಳೂರು, ಏಪ್ರಿಲ್ 3: ಉದ್ಯಾನ ನಗರಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಏಪ್ರಿಲ್ 4 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಇದೇನಿದು, ಲೋಡ್ ಶೆಡ್ಡಿಂಗಾ ಎಂದು ತಲೆಕೆಡಿಸಿಕೊಳ್ಳಬೇಡಿ. ನಿರ್ವಹಣಾ ಕಾರ್ಯದ ನಿಮಿತ್ತ ನಾಳೆ ಬೆಳಗ್ಗೆ 8 ಗಂಟೆಯಿಂದ 6 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಪೂರೈಕೆ ಕಂಪೆನಿ) ಹೇಳಿದೆ.[ಏಪ್ರಿಲ್ 01ರಿಂದ ವಿದ್ಯುತ್ ದರ ಏರಿಕೆ ಬರೆ!]

ಬೆಸ್ಕಾಂ ನೀಡಿದ ಮಾಹಿತಿಯ ಪ್ರಕಾರ ನಾಳೆ, ಹೊಸೂರ್ ಮುಖ್ಯರಸ್ತೆ, ಬಂಡೆಪಾಳ್ಯ, ಹೊಂಗಸಂದ್ರ, ಬೊಮ್ಮನಹಳ್ಳಿ, ಮುನೇಶ್ವರ ಬಡಾವಣೆ, ಬಸಪುರ, ಮೀನಾಕ್ಷಿ ಬಡಾವಣೆ, ಚಿಕ್ತೋಗುರ್, ಹಾರಲುಕುಂಟೆ, ಪರಪ್ಪನ ಅಗ್ರಹಾರ, ಬಸವನಗರ, ಕೃಷ್ಣಾ ರೆಡ್ಡಿ ಬಡಾವಣೆ ಮತ್ತು ಸುತ್ತಲ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ.












Click it and Unblock the Notifications