ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ಬೆಂಗಳೂರು, ಜುಲೈ 19: ಸೋಮವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.
ಜಯನಗರ ಉಪವಿಭಾಗದ ಅಡಿಯಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಾಗುವುದಿಲ್ಲ. ಇನ್ನೂ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ತಿಳಿಸಿದೆ.

S2; ಉಪ ವಿಭಾಗ, ಬಿಎಂಟಿಸಿ, ಸುಧಾಮನಗರ, ಸಿದ್ದಯ್ಯ ರಸ್ತೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ
S6; ಎಲಿಟಾ, ಅಷ್ಟಲಕ್ಷ್ಮಿ ಲೇಔಟ್, ಪುಟ್ಟೇನಹಳ್ಳಿ, ಕೆಆರ್ ಲೇಔಟ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ
S9: ಪದ್ಮನಾಭನಗರ, ಎಸ್9 ಕಚೇರಿ, ರಿಂಗ್ ರಸ್ತೆ, 27ನೇ ಮುಖ್ಯ ರಸ್ತೆ, ಯಾರಬ್‌ನಗರ ಮುಖ್ಯ ರಸ್ತೆ, ಮಸಿದಿ ರಸ್ತೆ, ಬಿಎಸ್‌ಎನ್‌ಎಲ್ ಕಚೇರಿ, ಸರ್ಕಾರಿ ಆಸ್ಪತ್ರೆ, ಎನ್‌ಪಿಟಿಐ ಸರ್ಕಲ್, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ
S15: ಬನಶಂಕರಿ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ವಿಲೇಜ್, 100 ಅಡಿ ರಿಂಗ್ ರಸ್ತೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ
S18: ಅರೆಹಳ್ಳಿ ಎಂಯುಎಸ್‌ಎಸ್, ಬೃಂದಾವನ ಲೇಔಟ್‌ನಲ್ಲಿ ಬೆಳಿಗ್ಗೆ 9.10ರಿಂದ ಸಂಜೆ 3ರವರೆಗೆ
S18: ಸುಬ್ರಹ್ಮಣ್ಯಪುರ ಎಂಯುಎಸ್‌ಎಸ್, ತುರಹಳ್ಳಿಯಲ್ಲಿ ಬೆಳಿಗ್ಗೆ 9.30ಇಂದ ಸಂಜೆ 3.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾರ್ಯದಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಕಳೆದ ವಾರವೂ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.












Click it and Unblock the Notifications