• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿ ಸೀಟಿ ಹೊಡೆಯಲು ಬ್ರೇಕ್

|
   ಇನ್ಮುಂದೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸೀಟಿ ಹೊಡೆಯೋದು ಬ್ಯಾನ್ | Oneindia Kannada

   ಬೆಂಗಳೂರು, ಫೆಬ್ರವರಿ 26 : ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ಹಾಗೂ ಸರಿಯಾದ ಸ್ಥಳದಲ್ಲಿ ನಿಲ್ಲುವಂತೆ ಸೂಚಿಸುತ್ತಿದ್ದ ವಿಶಲ್ ನ್ನು ಸಿಬ್ಬಂದಿಗಳು ಇನ್ನುಮುಂದೆ ಬಳಸುವಂತಿಲ್ಲ.

   ನಮ್ಮ ಮೆಟ್ರೋದ ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿವಹಿಸುವ ಸಿಬ್ಬಂದಿ ಇನ್ನುಮುಂದೆ ವಿಶಲ್ ಹೊಡೆಯುವಂತಿಲ್ಲ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈ ಹೊಸ ನಿಯಮವನ್ನು ಬಿಎಂಆರ್ ಸಿಎಲ್ ಅನುಷ್ಠಾನಕ್ಕೆ ತಂದಿದೆ. ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹಳದಿ ಪಟ್ಟಿ ಬಿಡಿಸಿದ್ದು, ರೈಲು ಬಂದು ನಿಲ್ಲುವವರೆಗೂ ಈ ಪಟ್ಟಿ ದಾಟಿ ಮುಂದಕ್ಕೆ ಹೋಗುವಂತಿಲ್ಲ. ಹಳಿ ಪಕ್ಕದ ಥರ್ಡ್ ರೇಲ್ ನಲ್ಲಿ ಹರಿಯುವ ವಿದ್ಯುತ್ ಅಪಾಯಕಾರಿಯಾಗಿರುವುದರಿಂದ ಹಳದಿ ಪಟ್ಟಿ ದಾಟದಂತೆ ಎಚ್ಚರವಹಿಸಲಾಗುತ್ತದೆ.

   ಮೆಟ್ರೋ ನಿಲ್ದಾಣಗಳಲ್ಲಿ ಯೂನಿಸೆಕ್ಸ್ ಹೇರ್ ಸಲೂನ್!

   ಪ್ರಯಾಣಿಕರ ಒತ್ತಾಯದ ಮೇರೆಗೆ ವಿಶಲ್ ಬ್ರೇಕ್

   ಪ್ರಯಾಣಿಕರ ಒತ್ತಾಯದ ಮೇರೆಗೆ ವಿಶಲ್ ಬ್ರೇಕ್

   ಮೆಟ್ರೋ ಆರಂಭವಾದಾಗಿನಿಂದಲೇ ಪ್ಲಾಟ್‌ಫಾರಂ ನಲ್ಲಿ ಎರಡು ಬದಿ ನಿಲ್ಲುವ ಭದ್ರತಾ ಸಿಬ್ಬಂದಿ ವಿಶಲ್ ನಿಷೇಧಿಸಲು ಮತ್ತೊಂದು ಕಾರಣವೂ ಇದೆ. ಮೆಟ್ರೋ ರೈಲು ಸಂಚಾರ ಆರಂಭದ ದಿನಗಳಲ್ಲಿ , ಹಳದಿ ಪಟ್ಟಿಯಿಂದ ಮುಂದಕ್ಕೆ ಹೋಗಬಾರದು ಎಂಬುದು ಹೆಚ್ಚಿನವರಿಗೆ ಅರಿವು ಇರಲಿಲ್ಲ. ಆ ಸಂದರ್ಭದಲ್ಲಿ ಹಳದಿ ಪಟ್ಟಿ ಮೇಲೆ ನಿಂತರೆ ಅಥವಾ ದಾಟಿದರೆ ಕೂಡಲೇ ವಿಶಲ್ ಹೊಡೆದು ದೂರ ಹೋಗುವಂತೆ ಸೂಚಿಸಲಾಗುತ್ತಿತ್ತು.

   ಪ್ರಯಾಣಿಕರನ್ನು ಸರಿದಾರಿಗೆ ತರುವುದು ಕಷ್ಟ

   ಪ್ರಯಾಣಿಕರನ್ನು ಸರಿದಾರಿಗೆ ತರುವುದು ಕಷ್ಟ

   ಅಧಿಕಾರಿಗಳ ಈ ಸೂಚನೆಯಿಂದಾಗಿ ಸಿಬ್ಬಂದಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ಸಿಬ್ಬಂದಿ ವಲಯದಲ್ಲಿ ಕೇಳಿಬಂದಿದೆ. ಮೆಟ್ರೋದ 40 ನಿಲ್ದಾಣಗಳಲ್ಲಿ ಭದ್ರತೆಗೆಂದು 746 ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸದ್ಯಕ್ಕೆ ಸುಮಾರು 400 ಸಿಬ್ಬಂದಿಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಇಷ್ಟು ಸಿಬ್ಬಂದಿಯಲ್ಲಿ ಸಾಮಾನ್ಯ ಭದ್ರತಾ ಸಿಬ್ಬಂದಿಯನ್ನು ಪ್ಲಾಟ್ ಫಾರಂಗಳಲ್ಲಿ ನಿಯೋಜಿಸಲಾಗಿದೆ. ಪ್ಲಾಟ್ ಫಾರಂನ ಎರಡು ಬದಿಗೆ ಇಬ್ಬರಂತೆ ಒಂದು ನಿಲ್ದಾಣದಲ್ಲಿ ನಾಲ್ಕು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

   ಹೆಚ್ಚು ಬ್ಯಾರಿಕೇಡ್ ಬೇಕು

   ಹೆಚ್ಚು ಬ್ಯಾರಿಕೇಡ್ ಬೇಕು

   ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಮುಂಭಾಗ ಬ್ಯಾರಿಕೇಡ್ ಅಳವಡಿಸುವ ಕುರಿತು ಹಿಂದೆ ಚರ್ಚೆಯಾಗಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಬ್ಯಾರಿಕೇಡ್ ಅಳವಡಿಸಿದರೆ ಪ್ರಯಾಣಿಕರು ಶಿಸ್ತಾಗಿ ಸಾಲು ನಿಇಲ್ಲಬಹುದು. ಮೆಟ್ರೋ ಬಾಗಿಲು ತೆರೆದಾಗ ಪ್ರಯಾಣಿಕರು ಒತ್ತಿಕೊಂಡು ಒಳನುಗ್ಗುವುದನ್ನು ಬ್ಯಾರಿಕೇಡ್ ತಡೆಯುತ್ತದೆ. ಇದರಿಂದ ಸಿಬ್ಬಂದಿಯೂ ಸ್ವಲ್ಪಮಟ್ಟಿಗೆ ನಿರಾಳರಾಗುತ್ತಾರೆ.

   ಇಂದಿನಿಂದ ನಮ್ಮ ಮೆಟ್ರೋದ ಎರಡು ಬಾಗಿಲು ಮಹಿಳೆಯರಿಗಾಗಿ

   ಹೋಮ್‌ ಗಾರ್ಡ್ಸ ನಿಯೋಜನೆ

   ಹೋಮ್‌ ಗಾರ್ಡ್ಸ ನಿಯೋಜನೆ

   ಮೆಜೆಸ್ಟಿಕ್ , ವಿಧಾನಸೌಧ ಹಾಗೂ ಕೆಲ ಟರ್ಮಿನಲ್ ನಿಲ್ದಾಣಗಳಲ್ಲಿ ಮಾತ್ರ ಪ್ಲಾಟ್ ಫಾರಂ ನಲ್ಲಿ ಹೋಮ್ ಗಾರ್ಡ್ಸ್ ಗಳನ್ನೂ ನಿಯೋಜಿಸಲಾಗಿದೆ. ಎಲ್ಲ ಸಿಬ್ಬಂದಿ ಒಟ್ಟು ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

   ನಿಲ್ದಾಣಗಳಲ್ಲಿ ಹೆಚ್ಚು ಪ್ರಯಾಣಿಕರಿರುವಾಗ ನಿರ್ವಹಣೆ ಕಷ್ಟ

   ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಪ್ರಯಾಣಿಕರಿರುವಾಗ ನಿರ್ವಹಣೆ ಕಷ್ಟವಾಗುತ್ತದೆ. ಇನ್ನು ಆರು ಬೋಗಿಯ ರೈಲು ಬಾರದಿರುವುದರಿಂದ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಅದರಲ್ಲೂ ಬೆಳಗ್ಗೆ 9 ರಿಂದ 10.30 ಗಂಟೆ ಅವಧಿಯಲ್ಲಿ ನಿರ್ವಹಣೆ ಕಷ್ಟಕರವಾಗಿದೆ.

   ಪ್ರಯಾಣಿಕರಿಗೆ ಸೂಚನೆ ನೀಡಲು ವಿಶಲ್ ಸಹಾಯಕಾರಿ

   ಪ್ರಯಾಣಿಕರಿಗೆ ಸೂಚನೆ ನೀಡಲು ವಿಶಲ್ ಸಹಾಯಕಾರಿ

   ಮಹಿಳೆಯರನ್ನು ಪ್ರತ್ಯೇಕವಾಗಿ ನಿಲ್ಲಿಸುವುದು ಹಾಗೂ ಪುರುಷರು ಅತ್ತ ಕಡೆ ಹೋಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ನಿತ್ಯ ಪ್ರಯಾಣಿಕರು ಈ ವ್ಯವಸ್ಥೆಗೆ ಪೂರ್ಣವಾಗಿ ಹೊಂದಿಕೊಳ್ಳುವವರೆಗೂ ಈ ಸಮಸ್ಯೆ ಮುಂದುವರೆಯಲಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಸದಾ ದಟ್ಟಣೆ ಇರುವುದರಿಂದ ಪ್ರಯಾಣಿಕರನ್ನು ರೈಲಿನೊಳಗೆ ಕಳುಹಿಸುವುದು ದೊಡ್ಡ ಸವಾಲಾಗಿದೆ. ಇಂತಹ ನಿಲ್ದಾಣಗಳಲ್ಲಿ ವಿಶಲ್ ಅಗತ್ಯವಿರುತ್ತದೆ.

   ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನೆಮ್ಮದಿಯ ನಡೆ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   The BMRCL has come up with a no whistle blower policy of a different kind. Security persons manning the Namma metro platforms have been asked to do away with whistle to control crowd behaviour and rely instead on verbal instructions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more