ವಿಪ್ರೋ ಉದ್ಯೋಗಿಗಳ ಕೆಲಸಕ್ಕೆ ಕತ್ತರಿಯಿಲ್ಲ: ಸ್ಪಷ್ಟನೆ

ಬೆಂಗಳೂರು, ಜುಲೈ 13: ಕೊರೊನಾ ನೆಪವಿಟ್ಟುಕೊಂಡು ಬೇರೆ ಕಂಪನಿಗಳ ರೀತಿಯಲ್ಲಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕುವುದಿಲ್ಲ ಎಂದು ವಿಪ್ರೋ ತಿಳಿಸಿದೆ.

Recommended Video

      CPL starts midst Corona | ಕೊರೊನ ನಡುವೆಯೇ ಶುರುವಾಗಲಿದೆ CPL | Oneindia Kannada

      ಕೊರೊನಾ ನಡುವೆ ಉದ್ಯೋಗಗಳಿಗೆ ಈವರೆಗೂ ಕತ್ತರಿ ಹಾಕಿಲ್ಲ, ಇನ್ನು ಮುಂದೆ ಹಾಕುವ ಯೋಜನೆಯೂ ಇಲ್ಲ ಎಂದು ಜಾಗತಿಕ ಸಾಫ್ಟ್ ವೇರ್ ದೈತ್ಯ ವಿಪ್ರೋ ಸ್ಪಷ್ಟಪಡಿಸಿದೆ.

      ಮಹಿಳಾ ಷೇರುದಾರರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಪ್ರೇಮ್ ಜಿ "ಈ ಕ್ಷಣದವರೆಗೂ ಉದ್ಯೋಗ ಕಡಿತದ ಬಗ್ಗೆ ಯಾವ ಯೋಜನೆಯೂ ಇಲ್ಲ ಎಂದು ಹೇಳಿದ್ದಾರೆ.

      No Lay-Offs By Wipro Amid Corona Crisis

      ಯಾವೊಬ್ಬ ಉದ್ಯೋಗಿಯನ್ನೂ ತೆಗೆಯುವ ಕುರಿತು ಆಲೋಚನೆ ಮಾಡಿಲ್ಲ.ಕಾರ್ಯನಿರ್ವಹಣೆ ಹಾಗೂ ಬೇರೆ ಮಾರ್ಗಗಳ ಮೂಲಕ ನಾವು ವೆಚ್ಚಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ ಎಂದು ರಿಷದ್ ಪ್ರೇಮ್ ಜಿ ಹೇಳಿದ್ದಾರೆ. ಬೆಂಗಳೂರು ಮೂಲದ ಐಟಿ ಸಂಸ್ಥೆಯಾಗಿರುವ ವಿಪ್ರೋ, ಜಾಗತಿಕ ಮಟ್ಟದಲ್ಲಿ 1.75 ಲಕ್ಷ ಜನರಿಗೆ ಉದ್ಯೋಗ ನೀಡಿದೆ.

      ಸಂಸ್ಥೆಯ 74 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ವಿಡಿಯೋ ಸಭೆಯಲ್ಲಿ ಮಾತನಾಡಿರುವ ಸಂಸ್ಥೆಯ ರಿಷದ್ ಪ್ರೇಮ್ ಜಿ, ಕೊರೊನಾ ಎದುರಾದ ನಂತರ ಸಂಸ್ಥೆಯಿಂದ ಒಬ್ಬನೇ ಒಬ್ಬ ಉದ್ಯೋಗಿಯನ್ನೂ ತೆಗೆದುಹಾಕಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+