Get Updates
Get notified of breaking news, exclusive insights, and must-see stories!

ಬೆಂಗಳೂರು ವಿಶ್ವವಿದ್ಯಾಲಯ: ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ಇಲ್ಲ

ಬೆಂಗಳೂರು, ಫೆಬ್ರವರಿ 08 : ಬೆಂಗಳೂರು ವಿಶ್ವವಿದ್ಯಾಲಯದ 53 ನೇ ವಾರ್ಷಿಕ ಘಟಿಕೋತ್ಸವ ಗುರುವಾರ ನಡೆಯಲಿದ್ದು, ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ನೀಡದಿರಲು ವಿವಿ ನಿರ್ಧರಿಸಿದೆ.

ಗೌರವ ಡಾಕ್ಟರೇಟ್ ಪದವಿಗೆ ಗಣ್ಯರ ಹೆಸರನ್ನು ರಾಜಭವನಕ್ಕೆ ತಡವಾಗಿ ಕಳುಹಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಅನುಮೋದನೆ ನೀಡಲಿಲ್ಲ. ಹೀಗಾಗಿ ಈ ಹಂತದಲ್ಲಿ ಗೌರವ ಡಾಕ್ಟರೇಟ್ ಗೆ ಶಿಫಾರಸು ಮಾಡಿದವರ ಹೆಸರನ್ನು ಬಹಿರಂಗಪಡಿಸುವುದು ಕೂಡ ಸರಿಯಲ್ಲ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ವಿ. ಸಂದೇಶ್ ತಿಳಿಸಿದ್ದಾರೆ.

No honorary doctorate by Bengaluru University this year

ಪ್ರಥಮ ರ‍್ಯಾಂಕ್ ವಿಜೇತರಿಗೆ ಚಿನ್ನದ ಪದಕ: ಇಂದು ನಡೆಯುವ ಘಟಕೋತ್ಸವದಲ್ಲಿ ರ‍್ಯಾಂಕ್ ಪಡೆದ 79 ವಿದ್ಯಾರ್ಥಿಗಳಿಗೆ ವಿವಿಯಿಂದಲೇ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ 4 ಲಕ್ಷ ರೂ ಗಳನ್ನು ವೆಚ್ಚ ಮಾಡಲಾಗುತ್ತಿದೆ. ದಾನಿಗಳ ದತ್ತಿಯ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿಗಳಿಗೂ ಕೊರತೆಯ ಹಣವನ್ನು ವಿವಿಯೇ ಭರಿಸಿ 500 ರೂ. ನಗದು ಬಹುಮಾನ ನೀಡಲಾಗುತ್ತದೆ. ಇದರಿಂದ ವಿವಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+