Karnataka Next CM: ಮುಂದಿನ ಮುಖ್ಯಮಂತ್ರಿ ಯಾರು ಅಂದ್ರೆ ಖರ್ಗೆ ಹಿಂಗಾ ಹೇಳೋದು!

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಜೋರಾಗಿದೆ. ಸಮೀಕ್ಷೆಗಳೆಲ್ಲವೂ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದು, ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸದೆ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಚುನಾವಣಾ ಪೂರ್ವ ಮತ್ತು ಚುನಾವೋಣತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಸರ್ಕಾರ ರಚನೆ ಮಾಡುವ ಸೂಚನೆ ನೀಡಿವೆ. ಈ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುನಮಾರ್ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು, ಸಭೆಯ ನಂತರ ಮಾತನಾಡಿದ ಖರ್ಗೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

Mallikarjun Kharge

ಇದುವರೆಗೂ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ಎಂದು ಸಮೀಕ್ಷೆಗಳು ಹೇಳುತ್ತಿವೆ, ಆದರೆ ನಾವು ಅದನ್ನೇ ಹೇಳುತ್ತಾ ಕೂರಲು ಆಗುವುದಿಲ್ಲ, ಫಲಿತಾಂಶ ಬರುವವರೆಗೂ ಕಾಯುತ್ತೇವೆ. ಬಿಜೆಪಿಯವರು ನಾವೇ ಸರ್ಕಾರ ರಚನೆ ಮಾಡುತ್ತೇವೆ ಎನ್ನುತ್ತಿವೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೇರೆ ಪಕ್ಷಗಳ ವಿಚಾರ ನಮಗೆ ಬೇಕಾಗಿಲ್ಲ, ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರೆ ಮುಂದಿನ ಸಿಎಂ ಯಾರು ಎಂದು ಕೇಳಿದ್ದಕ್ಕೆ ಉತ್ತರ ನೀಡಿದ ಅವರು, ನಮ್ಮ ಕಡೆ ಒಂದು ಗಾದೆ ಇದೆ, ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲೆಸಿದರು ಅಂತಾ, ಮಗು ದಪ್ಪ ಇರ್ತದೋ, ಸಣ್ಣ ಇರ್ತದೋ ಗೊತ್ತಿಲ್ಲ, ಮೊದಲು ಕೂಸು ಹುಟ್ಟಲಿ ಆಮೇಲೆ ಕುಲಾವಿ ಚಿಂತೆ ಮಾಡಣ ಎಂದು ಸೂಚ್ಯವಾಗಿ, ಇನ್ನೂ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಿಲ್ಲ ಎಂದರು.

ಮುಂದಿನ ಸಿಎಂ ಡಿಕೆಶಿ? ಟ್ವಿಟರ್ ನಲ್ಲಿ ಟ್ರೆಂಡ್

ಇನ್ನು ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿಗೆ ರೇಸ್ ಶುರುವಾಗಿದೆ. ಪರಮೇಶ್ವರ್ ಕೂಡ ಹೈಕಮಾಂಡ್ ಸಿಎಂ ಸ್ಥಾನ ಕೊಟ್ರೆ ಯಾರ್ ಬೇಡ ಅಂತಾರೆ ಎನ್ನುವ ಮೂಲಕ ತಾನು ಸಿಎಂ ರೇಸ್‌ನಲ್ಲಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಪ್ರಿಯಾಂಕ್ ಖರ್ಗೆ ಮುಂದಿನ ಸಿಎಂ ಆಗಲಿ ಎನ್ನುವ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಟ್ವಿಟರ್ ನಲ್ಲಿ ಮುಂದಿನ ಸಿಎಂ ಡಿಕೆಶಿ ಎನ್ನುವ ಟ್ರೆಂಡ್ ಕೂಡ ಆಗಿದೆ. ಡಿಕೆ ಶಿವಕುಮಾರ್ ಕೂಡ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಕಾಂಗ್ರೆಸ್ ರಚನೆ ಮಾಡಿದರೆ ಸಿಎಂ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಬಗ್ಗೆ ಸದ್ಯ ವ್ಯಾಪಕ ಚರ್ಚೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+