ಹೊಸ ವರ್ಷಾಚರಣೆಗೆ ವಾಹನ ಸಂಚಾರದ ಮೇಲೂ ನಿರ್ಬಂಧ
ಬೆಂಗಳೂರು, ಡಿಸೆಂಬರ್ 29: ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು,ಇದೀಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸಂಚಾರದ ಮೇಲೂ ನಿರ್ಬಂಧ ವಿಧಿಸಿದ್ದಾರೆ. ನಗರದ 44 ಮೇಲ್ಸೇತುವೆಗಳ ಪ್ರವೇಶ ಕೂಡ ಬಂದ್ ಮಾಡಲಾಗುತ್ತಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 1, 2021 ಬೆಳಗಿನ ಜಾವ ಎರಡು ಗಂಟೆ ವರೆಗೂ ವಾಹನ ಸಂಚಾರದ ಮೇಲಿನ ನಿರ್ಬಂಧಗಳು ಚಾಲನೆಯಲ್ಲಿರಲಿವೆ. ನಗರದ ಸುಮಾರು ಹದಿನೈದು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಂಚಾರ ನಿರ್ಬಂಧದ ವಿವರಗಳು ಈ ಕೆಳಕಂಡಂತಿವೆ.

ವಾಹನ ನಿಷೇಧ:
ನಗರದ ಆರು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ತುರ್ತು ವಾಹನ ಹಾಗೂ ಪೊಲೀಸ್ ವಾಹನ ಹೊರತು ಪಡಿಸಿ ಉಳಿದ ಯಾವುದೇ ವಾಹನಗಳು ಈ ಕೆಳಕಂಡ ಆರು ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ವಾಹನ ಪ್ರವೇಶ ನಿರ್ಬಂಧದ ಸಮಯ. ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 01, 2021, ಬೆಳಗಿನ ಜಾವ 2 ಗಂಟೆ ವರೆಗೆ ವಾಹನ ನಿಷೇಧಿಸಲಾಗಿದೆ.
ಎಂ.ಜಿ. ರಸ್ತೆ- ಅನೀಲ್ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ವರೆಗೆ, ಬ್ರಿಗೇಡ್ ರಸ್ತೆ- ಕಾವೇರಿ ಎಂಪೋರಿಯಂ ನಿಂದ ಅಫೇರಾ ಜಂಕ್ಷನ್ ವರೆಗೆ , ಚರ್ಚ್ ಸ್ಟ್ರೀಟ್- ಬ್ರಿಗೇಡ್ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ. ಮ್ಯೂಸಿಯಂ ರಸ್ತೆ- ಎಂ.ಜಿ. ರಸ್ತೆ ಜಂಕ್ಷನ್ ನಿಂದ ಹಳೇ ಪೋಸ್ಟ್ ಆಫೀಸ್. ರೆಸ್ಟ್ ಹೌಸ್ ಪಾರ್ಕ್- ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ. ರೆಸಿಡೆನ್ಸಿ ರಸ್ತೆ- ಆಶೀರ್ವಾದ ಜಂಕ್ಷನ್ ನಿಂದ ಮೇಯೋ ಹಾಲ್ ವರೆಗೆ.

ಮೇಲ್ಸೇತುವೆ ವಾಹನ ಸಂಚಾರ ನಿಷೇಧ:
ಹೊಸ ವರ್ಷಾಚರಣೆ ವೇಳೆ ಹೆಚ್ಚು ಅಪಘಾತ ಸಂಭವಿಸುವ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಾತ್ರಿ ಹತ್ತು ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆ ವರೆಗೂ ನಗರದ 44
ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮಡಿವಾಳ ಎಲಿವೇಟೆಡ್ ಮೇಲ್ಸೇತುವೆ ಯಿಂದ ಹಿಡಿದು ಎಲ್ಲಾ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬರುವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ರದ್ದು ಪಡಿಸಲಾಗಿದೆ.

ವಾಹನ ನಿಲುಗಡೆ ನಿಷೇಧ:
ಇನ್ನು ನಗರದ ಹದಿನೈದು ರಸ್ತೆಗಳಲ್ಲಿ ಡಿಸೆಂಬರ್ 31 ಸಂಜೆ 4 ಗಂಟೆಯಿಂದ ಜನವರಿ 1 ರ ಬೆಳಗಿನ ಜಾವ 2 ಗಂಟೆ ವರೆಗೂ ಈ ಕೆಳಗಿನ 14 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಎಂಜಿ. ರಸ್ತೆ, ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮಗರತ್ ರಸ್ತೆ, ಕಮೀಷನರೇಟ್ ರಸ್ತೆ, ಮಾರ್ಕನ್ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಂದಿರಾನಗರ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
Recommended Video

ಬದಲಿಮಾರ್ಗ :
ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 1 ರ ಬೆಳಗ್ಗೆ ಎಂಜಿ. ರಸ್ತೆ ಮತ್ತು ಕ್ವೀನ್ಸ್ ರಸ್ತೆ ಕಡೆಯಿಂದ ಹಲಸೂರು ಮತ್ತು ಮುಂದಕ್ಕೆ ಹೋಗುವ ವಾಹನಗಳು ಅನೀಲ್ ಕುಂಬ್ಳೆ ವೃತ್ತದ ಬಳಿ ಎಡ ತಿರುವು ಪಡೆದು, ಬಿಆರ್ ವಿ ಜಂಕ್ಷನ್ ಮೂಲಕ ಎಂ.ಜಿ. ರಸ್ತೆ ತಲುಪಿ ಮುಂದೆ ಹೋಗಬೇಕು. ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳೂ, ವೆಬ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಮಣಿಪಾಲ್ ಬಳಿ ಎಡ ತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಮುಂದೆ ಸಾಗಬಹುದು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗಳಿಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳು ಹಲಸೂರು ರಸ್ತೆ, ಡಿಕನ್ಸನ್ ರಸ್ತೆ ಮಾರ್ಗವಾಗಿ ಸಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು. ಹಳೇ ಪಿಎಸ್ ಮತ್ತು ಆಶೀರ್ವಾದಂ ವೃತ್ತದ ಮೂಲಕ ಬರುವ ವಾಹನಗಳು ಮ್ಯೂಸಿಯಂ ರಸ್ತೆ ಮೂಲಕ ಎಸ್‌ಬಿಐ ಜೆಂಕ್ಷನ್ ತಲುಪಿ, ಅನೀಲ್ ಕುಂಬ್ಳೆ ವೃತ್ತದ ಮೂಲಕ ಮುಂದೆ ಸಾಗಬಹುದು.
ಮೋಟಾರು ವಾಹನ ಕಾಯ್ಧೆ ನಿಯಮ ಹದಿನೈದರ ಅಡಿ ಈ ನಿರ್ಬಂಧ ವಿಧಿಸಿದ್ದು, ಹೊಸ ವರ್ಷಾಚರಣೆ ವೇಳೆ ಸಂಚಾರ ಸಮಸ್ಯೆ ಉಂಟಾಗದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ತಿಳಿಸಿದ್ದಾರೆ.
-
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications