ಎಲ್ಲೆಂದರಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ: ಗಂಗಾಂಬಿಕೆ

ಬೆಂಗಳೂರು, ಡಿಸೆಂಬರ್ 28: ಎಲ್ಲೆಂದರಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.

ಡಿಸೆಂಬರ್ 31ರ ರಾತ್ರಿ ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಪಾರ್ಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಹೊಸ ವರ್ಷ ಆಚರಣೆಗೆ ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಲೇಬೇಕಾಗಿದೆ. ಎಲ್ಲೆಲ್ಲೋ ಕುಣಿದು ಕುಪ್ಪಳಿಸುವಂತಿಲ್ಲ.

ಹೊಸ ವರ್ಷದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ. ಎಲ್ಲಾ ಮೇಲ್ಸೇತುವೆ ಮೇಲೆ ಡಿ.3ರಂದು ಸಂಜೆ 6ರಿಂದ ಜನವರಿ ಬೆಳಗ್ಗೆ ಗಂಟೆಯವರೆಗೆ ಮುಚ್ಚಲಾಗುತ್ತದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

New year party: strict action to be taken

ನಗರದ ಎಲ್ಲಾ ಮೇಲ್ಸೇತುವೆಗಳು ಹಾಗೂ ಎಂಜಿ ರಸ್ತೆ ವ್ಯಾಪ್ತಿ ಡಿಸೆಂಬರ್ 31ರ ಮಧ್ಯಾಹ್ನ 3ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆ.

ಸಂಭ್ರಮಾಚರಣೆ ಮತ್ತಿನಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಇದರಿಂದ ಮೇಲ್ಸೇತುವೆಗಳಲ್ಲಿ ಅಪಘಾತಕ್ಕೂ ಕಾರಣವಾಗಲಿದೆ. ಇನ್ನು ಕೆಲವು ಕಿಡಿಗೇಡಿಗಳು ಆಚರಣೆ ನೆಪದಲ್ಲಿ ಪಾನಮತ್ತರಾಗಿ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿ ನಾಗರಿಕರಿಗೆ ತೊಂದರೆ ಕೊಡುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+