ನ್ಯೂ ಇಯರ್ ಪಾರ್ಟಿ: ಪಬ್, ಬಾರ್‌ಗಳಲ್ಲಿ ಲೇಡಿ ಬೌನ್ಸರ್ ಕಡ್ಡಾಯ
ಬೆಂಗಳೂರು, ಡಿಸೆಂಬರ್ 27: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇನ್ನು ನಾಲ್ಕೇ ದಿನಗಳು ಬಾಕಿ ಇವೆ. ನ್ಯೂ ಇಯರ್ ದಿನ ಪಬ್ ಹಾಗೂ ಬಾರ್‌ಗಳು ತೆರೆದಿರಬೇಕೆಂದರೆ ಪ್ರತಿ ಬಾರ್, ಕ್ಲಬ್‌ನಲ್ಲಿ ಲೇಡಿ ಬೌನ್ಸರ್‌ಗಳನ್ನು ಕಡ್ಡಾಯವಾಗಿ ನೇಮಕ ಮಾಡಬೇಕು ಎಂದು ಪೊಲೀಸರು ಷರತ್ತು ವಿಧಿಸಿದ್ದಾರೆ.
ಪಬ್, ಬಾರ್‌ಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಆದರೆ ಮೂರ್ನಾಲ್ಕು ದಿನಗಳಿರುವಾಗ ಲೇಡಿ ಬೌನ್ಸರ್‌ಗಳನ್ನು ಎಲ್ಲಿ ಹುಡುಕೋದು ಎಂದು ಮಾಲೀಕರು ಗೊಂದಲದಲ್ಲಿದ್ದಾರೆ. ಹೊರ ರಾಜ್ಯಗಳಿಂದ ಬೌನ್ಸರ್‌ಗಳನ್ನು ಕರೆತರಲು ಚಿಂತನೆ ನಡೆಸುತ್ತಿದ್ದಾರೆ.

ಕಠಿಣ ಕಾನೂನುಗಳು ಜಾರಿಯಾದಷ್ಟು ಹೊಸ ವರ್ಷ ಆಚರಣೆ ಶಾಂತಿಯುತವಾಗಿರುತ್ತದೆ ಎನ್ನುವುದು ಮಾತ್ರ ಸತ್ಯ, ಪೊಲೀಸರ ಈ ನಿರ್ಧಾರದಿಂದ ಬೆಂಗಳೂರಿಗರಿಗೆ ಸಹಕಾರಿಯಾಗಲಿದೆ.












Click it and Unblock the Notifications