ಕೆಂಪೇಗೌಡ ಏರ್‌ಪೋರ್ಟ್‌ನಿಂದ ವೈಟ್‌ಫೀಲ್ಡ್‌ಗೆ ವಾಯುವಜ್ರ ಬಸ್ ಸೇವೆ
ಬೆಂಗಳೂರು, ಫೆಬ್ರವರಿ 16: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೈಟ್‌ಫೀಲ್ಡ್‌ಗೆ ಹೊಸ ವಾಯುವಜ್ರ ಬಸ್ ಸೇವೆಯನ್ನು ಆರಂಭಿಸಲಿದೆ.
ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾರ್ಗಸಂಖ್ಯೆ ಕೆಐಎಎಸ್- ವಾಯುವಜ್ರ ಬಸ್ ಫೆ.18ರಿಂದ ಸೇವೆ ಆರಂಭಗೊಳ್ಳಲಿದೆ.

ವೈಟ್‌ಫೀಲ್ಡ್ ಟಿಟಿಎಂಸಿಯಿಂದ ಹೊರಡುವ ಈ ಬಸ್ ವೈದೇಹಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಬಸ್ ನಿಲ್ದಾಣ, ಸೀಗೆಹಳ್ಳಿ, ಕಾಟಮ್ ನಲ್ಲೂರು ಗೇಟ್, ಬೂದಿಗೆರೆ ಕ್ರಾಸ್, ಮಂಡೂರು, ಹಂಚನಹಳ್ಳಿ, ತಿರುಮೆನಹಳ್ಳಿ ಕ್ರಾಸ್, ಮಂಚಪ್ಪನಹಳ್ಳಿ, ಬೇಗೂರು ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.
ವೈಟ್‌ಫೀಲ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವವರು ನೇರವಾಗಿ ಬಸ್‌ಗಳಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ.
ಎಲ್ಲಿಯ ವರೆಗೆ ಬಸ್ ಬರುತ್ತೋ ಅಲ್ಲಿಯವರೆಗೆ ಕಾರು ಅಥವಾ ಇನ್ನಿತರೆ ವಾಹನಗಳಲ್ಲಿ ಬಂದು ಬರಬೇಕಿತ್ತು. ಇದೀಗ ವೈಟ್‌ಫೀಲ್ಡ್‌ನಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಬರಬಹುದಾಗಿದೆ.
ಏರ್‌ಫೋರ್ಟ್ ಟ್ಯಾಕ್ಸಿ, ಓಲಾ, ಊಬರ್ ಇನ್ನಿತರೆ ಸೇವೆಗಳಿಗಾಗಿ ಕಾಯದೆ ಸುಲಭವಾಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.












Click it and Unblock the Notifications