ದೊಡ್ಡ ಖಾತೆಯ ಮೇಲೆಯೇ ಕಣ್ಣಿಟ್ಟ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಫೆಬ್ರವರಿ 07: ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಸಿ.ಪಾಟೀಲ್ ಭಾರಿ ದೊಡ್ಡ ಖಾತೆಯ ಮೇಲೆಯೇ ಕಣ್ಣು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, 'ನಾನು ಪೊಲೀಸ್ ಅಧಿಕಾರಿ ಆಗಿದ್ದರಿಂದ ಗೃಹ ಖಾತೆಗೆ ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ' ಎಂದು ಹೇಳಿದ್ದಾರೆ. ಆ ಮೂಲಕ ಗೃಹ ಖಾತೆಯ ಮೇಲೆ ಒಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, 'ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ, ಬೇರೆಯವರ ಖಾತೆಯನ್ನು ಕಿತ್ತು ನನಗೆ ಕೊಡುವುದು ಬೇಡ' ಎಂದು ಪಾಟೀಲ್ ಹೇಳಿದ್ದಾರೆ.

 New Minister BC Patil Eye On Home Minister Post

'ನಾನು ಯಾವುದೇ ಖಾತೆಗೆ ಬೇಡಿಕೆಯನ್ನು ಇಟ್ಟಿಲ್ಲ, ಯಡಿಯೂರಪ್ಪ ಅವರು ಯಾವ ಖಾತೆ ನೀಡುತ್ತಾರೋ ಅದನ್ನು ನಿರ್ವಹಿಸುತ್ತೇನೆ' ಎಂದಿದ್ದಾರೆ.

ತಮ್ಮ ಕುಟುಂಬದ ಸದಸ್ಯ ರೊಂದಿಗೆ ವಿಕಾಸಸೌಧದಲ್ಲಿ ಹಂಚಿಕೆಯಾಗಿ ರುವ ತಮ್ಮ ಕೊಠಡಿಗೆ ಭೇಟಿ ನೀಡಿದ್ದ ಅವರು ಪೂಜೆ ನೆರವೇರಿಸಿದರು.

ಕಾಂಗ್ರೆಸ್‌ ನಲ್ಲಿದ್ದ ಬಿ.ಸಿ.ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪಚುನಾವಣೆ ಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+