Bengaluru Metro Phase 3: ನಮ್ಮ ಮೆಟ್ರೋ 3ನೇ ಹಂತ ಯೋಜನೆ, ಇಲ್ಲಿದೆ ಸಂಪೂರ್ಣ ಮಾಹಿತಿ! ತೇಜಸ್ವಿ ಸೂರ್ಯ ಹೇಳಿದ್ದೇನು

Bengaluru Metro Phase 3: ಬೆಂಗಳೂರು ಮೆಟ್ರೋ ಇದೀಗ ಜನ ಸಂಚಾರ ಜೀವನಾಡಿಯಾಗಿದೆ. ಕಳೆದ ಒಂದು 10 ವರ್ಷಗಳ ಹಿಂದೆ ಬಿಎಂಟಿಸಿ ಬಸ್ ಸೇವೆ ಬೆಂಗಳೂರಿನ ಪ್ರಧಾನ ಸಾರಿಗೆಯಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಇದೀಗ ಮೆಟ್ರೋ ಸಾರಿಗೆ ಸೇವೆ ಜನರಿಗೆ ಆಪ್ತವಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಮುಕ್ತಿಗೆ ಮೆಟ್ರೋ ಸಹಕಾರಿಯಾಗಿದೆ. ಇದೀಗ ಮೆಟ್ರೋ ಮೂರನೇ ಹಂತದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಬಿಗ್ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಆಗಸ್ಟ್​ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು. ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯನ್ನು ಮಾಡಲಿದ್ದಾರೆ.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಮೆಟ್ರೋ ಫೇಸ್ 3ಗೆ ಅಡಿಪಾಯ ಹಾಕಲಿದ್ದಾರೆ. ಜೆಪಿ ನಗರ ವೆಗಾಸಿಟಿ ಮಾಲ್​ನಿಂದ ಕಡಬಗೆರೆ ವರೆಗೆ ಮೆಟ್ರೋ ವಿಸ್ತರಣೆಗೆ ಆಗಲಿದೆ. ಈ ಮೂಲಕ ಬೆಂಗಳೂರಿನ ಇನ್ನಷ್ಟು ಮಾರ್ಗಗಳಿಗೆ ನಮ್ಮ ಮೆಟ್ರೋ ವಿಸ್ತರಣೆ ಆಗಲಿದೆ. ಇದರಿಂದ ಬೆಂಗಳೂರಿನ ಹಲವು ಹೊಸ ಪ್ರದೇಶಗಳಲ್ಲಿ ಎಂಡ್‌ ಟು ಎಂಡ್ ಕನೆಕ್ಟಿವಿಟಿ ಕ್ರಿಯೇಟ್ ಆಗಲಿದೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು, ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಸಂಪೂರ್ಣ ವಿವರ ನೋಡೋಣ.

New Metro Project in Bengaluru Phase 3 Details Out

17 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 3ನೇ ಹಂತ: ಇನ್ನು 17 ಸಾವಿರ ಕೋಟಿ ರೂಪಾಯಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಅನುಷ್ಠಾನವಾಗಲಿದೆ. ಮೂರನೇ ಹಂತದ ಮೆಟ್ರೋ ಮಾರ್ಗ ಜೆಪಿ ನಗರ ವೆಗಾಸಿಟಿ ಮಾಲ್​ನಿಂದ ಕಡಬಗೆರೆ ವರೆಗೆ ಬರಲಿದೆ. ಇನ್ನು ಮೂರನೇ ಹಂತದ ನಮ್ಮ ಮೆಟ್ರೋ ಯೋಜನೆಗೆ ಆರೆಂಜ್ ಲೈನ್ ಎಂದು ಹೆಸರಿಲಾಗಿದೆ. 3ನೇ ಹಂತದ ಮೆಟ್ರೋ ಒಟ್ಟು 44.8 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. 3 ಹಂತದ ಮೆಟ್ರೋ 2029ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದು ಬೆಂಗಳೂರಿನ ಮೆಟ್ರೋ ಜಾಲವನ್ನು 222.2 ಕಿಮೀಗೆ ವಿಸ್ತರಿಸಲಿದೆ.

ಒಟ್ಟು 30 ನಿಲ್ದಾಣ: ಇನ್ನು ಮೂರನೇ ಹಂತದ ನಮ್ಮ ಮೆಟ್ರೋ ಒಟ್ಟು 30 ನಿಲ್ದಾಣಗಳನ್ನು ಒಳಗೊಂಡಿದೆ. (ಕಾರಿಡಾರ್ 1 ರಲ್ಲಿ 21 ನಿಲ್ದಾಣಗಳು ಮತ್ತು ಕಾರಿಡಾರ್ 2 ರಲ್ಲಿ 9 ನಿಲ್ದಾಣಗಳು ಇರಲಿವೆ). ಇವುಗಳಲ್ಲಿ ಏಳು ಇಂಟರ್ಚೇಂಜ್ ನಿಲ್ದಾಣಗಳಾಗಿವೆ. ಜೆಪಿ ನಗರ 4 ನೇ ಹಂತ, ಜೆಪಿ ನಗರ, ಮೈಸೂರು ರಸ್ತೆ, ಸುಮನಹಳ್ಳಿ ಕ್ರಾಸ್, ಗೋರಗುಂಟೆಪಾಳ್ಯ, ಹೆಬ್ಬಾಳ ಮತ್ತು ಕೆಂಪಾಪುರ ಸೇರಿವೆ ಎಂದು ಹೇಳಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​​ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ: ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೆಟ್ರೋ ಹಳದಿ ಮಾರ್ಗದಲ್ಲಿ ರಾಜ್ಯ ಸರ್ಕಾರದ ಪಾಲೂ ಇದೆ ಎನ್ನುವ ಡಿಸಿಎಂ ಡಿಕೆ ಶಿವಕುಮಾರ್​​ ಹೇಳಿಕೆಗೆ ರಿಯಾಕ್ಟ್‌ ಮಾಡಿದ್ದಾರೆ. ಈವರೆಗೆ ಮೆಟ್ರೋ ಯಲ್ಲೋ ಲೈನ್ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಲೆಕೆಡಿಸಿ ಕೊಂಡಿರಲಿಲ್ಲ. ಪ್ರಧಾನಿ ಬರುವುದು ಫಿಕ್ಸ್‌ ಆದ ಮೇಲೆ ಟೂರ್ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+