• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಂಡಗ್ರಾಸ ಚಂದ್ರಗ್ರಹಣ: ನೆಹರೂ ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ

|
Google Oneindia Kannada News

ಬೆಂಗಳೂರು, ಜನವರಿ 30 : ಖಂಡಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಲು ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ದೂರದರ್ಶಕದಗಳ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.

ಜನವರಿ 31 ರಂದು ಸಂಜೆ 5.18 ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ ಮತ್ತು ಬೆಂಗಳೂರಿನಲ್ಲಿ ಸಂಜೆ6.15 ಕ್ಕೆ ಸಂದ್ರ ಗ್ರಹಣಸ್ಥವಾಗಿರುತ್ತದೆ. ಇದನ್ನು ಸೂಪರ್ ಬ್ಲಡ್ ಬ್ಲೂ ಮೂನ್ ಎಂದು ಕರೆಯುತ್ತಾರೆ. ಅಂದು ಸಂಜೆ 6.21 ಕ್ಕೆ ಗ್ರಹಣದ ಪೂರ್ಣಾವಸ್ಥೆ ಆರಂಭವಾಗುತ್ತದೆ ಮತ್ತು ರಾತ್ರಿ 7.38 ಕ್ಕೆ ಮುಕ್ತಾಯವಾಗುತ್ತದೆ. ರಾತ್ರಿ 8.42 ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳಿನಿಂದ ಸಂಪೂರ್ಣವಾಗಿ ಹೊರಬರುತ್ತದೆ.

ಜ. 31ರಂದು ಬಾನಂಗಳದಲ್ಲಿ ಅದ್ಭುತ 'ಸೂಪರ್ ಬ್ಲ್ಯೂ ಬ್ಲಡ್ ಮೂನ್'ಜ. 31ರಂದು ಬಾನಂಗಳದಲ್ಲಿ ಅದ್ಭುತ 'ಸೂಪರ್ ಬ್ಲ್ಯೂ ಬ್ಲಡ್ ಮೂನ್'

ಈ ಹುಣ್ಣಿಮೆಯು ತಿಂಗಳ ಎರಡನೇ ಹುಣ್ಣಿಮೆಯಾದ್ದರಿಂದ ಇದನ್ನು ಬ್ಲೂ ಮೂನ್ ಎಂದೂ ಕರೆಯುತ್ತಾರೆ. ಆದರೆ ಚಂದ್ರ ನೀಲಿಯಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ ಈ ಹುಣ್ಣಿಮೆಯ ಸಂದರ್ಭದಲ್ಲಿ ಚಂದ್ರ ಭೂಮಿಗೆ ಅತ್ಯಂತ ಸಮೀಪದ ಬಿಂದುವಿಗೆ ಹತ್ತಿರವಿರುವುದರಿಂದ ತೋರಿಕೆಯ ಗಾತ್ರದಲ್ಲಿ ಸ್ವಲ್ಪ ಹೆಚ್ಚಳವಿರುತ್ತದೆ. ಆದಕಾರಣ, ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಆದರೆ ಈ ಹೆಚ್ಚಳವನ್ನು ಬರಿಗಣ್ಣಿನಿಂದ ಗುರುತಿಸುವುದು ಸಾಧ್ಯವಿಲ್ಲ ಎಂದು ನೆಹರು ತಾರಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಸಾರ್ವಜನಿಕರಿಗಾಗಿ ಜಜವಾಹರ್ ಲಾಲ್ ನೆಹರು ತಾರಾಲಯವು ಸಂಜೆ 6.30 ರಿಂದ ರಾತ್ರಿ 8.30 ಗಂಟೆಯವರೆಗೂ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಸಿದ್ಧತೆಗಳನ್ನು ಮಾಡಿದೆ. ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಈ ಅವಕಾಶದ ಸದುಪಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

English summary
Blood moon in the sky is visible on January 31. Thus, Nehru planetarium in Bengaluru will organise telescope watch on Lunar eclipse on this day and general public can watch the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X