ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ

ಬೆಂಗಳೂರು, ಮಾರ್ಚ್ 26: 'ನಮ್ಮ ಬೆಂಗಳೂರು' ಪ್ರಶಸ್ತಿಯ ಒಂಬತ್ತನೇ ಅವತರಣಿಕೆಯಲ್ಲಿ ಸರಕಾರಿ ಅಧಿಕಾರಿಗಳ ವರ್ಗದಿಂದ ನಾಮ ನಿರ್ದೇಶನಗೊಂಡಿದ್ದ ಒಬ್ಬರ ಅನುಚಿತ ವರ್ತನೆಯಿಂದ ನಮಗೆ ದುಃಖ ಹಾಗೂ ಆಘಾತ ಆಗಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರಶಸ್ತಿ ವಿಚಾರದಲ್ಲಿ ಇಷ್ಟು ದೀರ್ಘ ಇತಿಹಾಸ ಹೊಂದಿರುವ ಪ್ರತಿಷ್ಠಾನದ ತೀರ್ಪುಗಾರರಿಗೆ ಈ ಹಿಂದೆ ಎಂದೂ ಇಂಥ ಲಾಬಿ ಅನುಭವಕ್ಕೆ ಬಂದಿರಲಿಲ್ಲ. ಆ ನಂತರ ಪ್ರಶಸ್ತಿಗೆ ಅಂತಿಮ ವಿಜಯಿಯಾಗಿ ಹೆಸರು ಕೇಳಿಬರದವರಿಂದ ಇಂಥ ಅಪ್ರಬುದ್ಧ ನಡವಳಿಕೆಯೂ ನಮಗೆ ಅನುಭವಕ್ಕೆ ಬಂದಿಲ್ಲ.

ನಮ್ಮ ಬೆಂಗಳೂರು ಪ್ರತಿಷ್ಠಾನದ ತಂಡ, ಟ್ರಸ್ಟಿ ಹಾಗೂ ತೀರ್ಪುಗಾರರ ಜತೆಗೆ ಈ ನಾಮನಿರ್ದೇಶನಗೊಂಡವರು ಹಲವು ಬಗೆಯ ಸಂವಹನದ ಮೂಲಕ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೆ ನಮ್ಮ ತೀರ್ಪುಗಾರರ ಪ್ರಕಾರ, ನಾಮನಿರ್ದೇಶನ ಆದವರು, ಹೆಸರು ಅಂತಿಮ ಪಟ್ಟಿಯಲ್ಲಿ ಇರುವ ಪ್ರತಿಷ್ಠಿತ ಬೆಂಗಳೂರಿಗರು ಎಲ್ಲರೂ ವಿಜಯಿಗಳೇ.

NBF on inappropriate conduct of a nominee

ನಿಸ್ವಾರ್ಥ ಹಾಗೂ ನಿರಂತರ ಸೇವೆ ಸಲ್ಲಿಸುತ್ತಿರುವ ನಾಗರಿಕರು ಹಾಗೂ ಸಂಸ್ಥೆಗಳ ಬಗ್ಗೆ ತೀರ್ಪುಗಾರರು ಆ ಗೌರವ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು ಈ ವಿಚಾರದ ಬಗ್ಗೆ ಕೆಲ ವಾಸ್ತವಾಂಶಗಳು ಎಂದು ತಿಳಿಸಲಾಗಿದೆ.

* ಈ ವ್ಯಕ್ತಿ ತೀರ್ಪುಗಾರರ ಜತೆ ಸುದೀರ್ಘ ಮಾತುಕತೆ ನಡೆಸಿದ್ದು, ಈ ಹೊಸದಾಗಿ ಕಂಡುಕೊಂಡ 'ದೃಷ್ಟಿಕೋನ'ವನ್ನು ತಮ್ಮ ಮಾತುಕತೆಯ ಯಾವ ಹಂತದಲ್ಲೂ ತಿಳಿಸಿಲ್ಲ

* ಇದರ ಬದಲಿಗೆ, ಆಕೆಯ ಪತ್ರ, ವಾಟ್ಸಾಪ್ ಸಂದೇಶ ಸೇರಿದಂತೆ ಹಲವು ಸಂವಹನದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಬಗ್ಗೆ ಗೌರವದ ಬಗ್ಗೆ ತಿಳಿಸಿದ್ದಾರೆ

* ಅಂತಿಮ ವಿಜಯಿಗಳು ಯಾರು ಎಂದು ತೀರ್ಪುಗಾರರು ನಿರ್ಧರಿಸಿದ ನಂತರ ಆಕೆಯ ದೃಷ್ಟಿಕೋನವು ಗೊತ್ತಾಗಿದೆ

* ಆಕೆಗೆ ಪ್ರಶಸ್ತಿಯನ್ನು ನೀಡಿಲ್ಲವಾದ್ದರಿಂದ ಅದನ್ನು ನಿರಾಕರಿಸುವ ಮಾತೇ ಬರುವುದಿಲ್ಲ.

* ವಿಜಯಿಗಳನ್ನು ತುಂಬ ಕಠಿಣವಾದ ಪ್ರಕ್ರಿಯೆಗಳ ಮೂಲಕ ನಮ್ಮ ಪ್ರತಿಷ್ಠಾನ ಆರಿಸುತ್ತದೆ. ಆ ಕಾರಣಕ್ಕೆ ಪ್ರಶಸ್ತಿಯು ಗೌರವ ಹಾಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ

ಈ ಎಲ್ಲ ನಾಟಕದ ಸನ್ನಿವೇಶ ಆಕೆಯ ನಿರಾಶೆಯಿಂದ ಎಂಬುದು ಸಹಜ. ದುಃಖದ ವಿಚಾರ ಅಂದರೆ, ಇವೆಲ್ಲ ಆಕೆಗೆ ತಿಳಿಸಲು ಆಗುತ್ತಿಲ್ಲ: ಎಲ್ಲ ನಾಮಾಂಕಿತರು ವಿಜಯಿಗಳೇ ಎಂಬುದು ನಮ್ಮ ದೃಷ್ಟಿಕೋನ.

ಬೆಂಗಳೂರಿಗೆ ನೀಡಿದ ಅದ್ಭುತ ಮತ್ತು ಧೈರ್ಯವಾದ ಕೊಡುಗೆಯನ್ನು ಪರಿಗಣಿಸಿ ತೀರ್ಪುಗಾರರು ವಿಜಯಿಗಳನ್ನು ಆರಿಸುತ್ತಾರೆ. ಈ ವರೆಗೆ ನಮ್ಮ ಬೆಂಗಳೂರು ಪ್ರಶಸ್ತಿ ಪುರಸ್ಕೃತರು ಯಾರೂ ಈ ರೀತಿಯಾಗಿ ನೋಡಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಬೆಂಗಳೂರು ಫೌಂಡೇಷನ್ ಸ್ಥಾಪಕರು ಹಾಗೂ ಬೆಂಬಲಿಗರು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಬೆಂಗಳೂರನ್ನು ಮಾದರಿ ನಗರವಾಗಿ ರೂಪಿಸಲು ಈ ಸಂಸ್ಥೆ ಶ್ರಮಿಸುತ್ತಿದೆ. ಸಾಮಾನ್ಯ ನಾಗರಿಕರಾಗಿ ಬೆಂಗಳೂರಿನ ಉದ್ಧಾರಕ್ಕಾಗಿ ಅಸಾಮಾನ್ಯ ಕೆಲಸ ಮಾಡುತ್ತಿರುವವರಿಗೆ ಈ ಫೌಂಡೇಷನ್ ನಿಂದ ಪ್ರಶಸ್ತಿ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+