ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ
ಬೆಂಗಳೂರು, ನವೆಂಬರ್ 25: ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ನವೆಂಬರ್ 26 ರಂದು ಬೆಂಗಳೂರಿನಲ್ಲಿ ಭಾರತದಲ್ಲಿ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರ 101ನೇ ಜನ್ಮದಿನದ ಸ್ಮರಣಾರ್ಥ 'ರಾಷ್ಟ್ರೀಯ ಹಾಲು ದಿನ'ವನ್ನು ಆಚರಿಸಲಿದೆ.
'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಶುಸಂಗೋಪನಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಗೋಪಾಲ್ ರತ್ನ ಪ್ರಶಸ್ತಿ 2022 ಅನ್ನು ಸಹ ನೀಡಲಾಗುತ್ತದೆ. ಬೆಂಗಳೂರಿನ ಹೆಸರಘಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಭಾಗವಾಗಿ ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್ ಅವರು ಪಶು ಕ್ವಾರಂಟೈನ್ ಪ್ರಮಾಣೀಕರಣ ಸೇವೆಗಳನ್ನು (ಎಕ್ಯೂಸಿಎಸ್) ಉದ್ಘಾಟಿಸಲಿದ್ದಾರೆ.
ಲೀಟರ್ ಹಾಲಿಗೆ 6 ರೂಪಾಯಿ ಏರಿಕೆ ಮಾಡಿದ ಕೇರಳ
ಎಕ್ಯೂಸಿಎಸ್ ಜಾನುವಾರು ಉತ್ಪನ್ನಗಳು ಮತ್ತು ಜಾನುವಾರುಗಳನ್ನು ಆಮದು ಮಾಡಿಕೊಳ್ಳಲು ಆನ್‌ಲೈನ್ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಹೊಂದಿದ್ದು, ಸ್ಥಳೀಯ ಆರ್ಥಿಕತೆಗೆ ಗೇಮ್ ಚೇಂಜರ್ ಆಗಲಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಹೆಸರಘಟ್ಟದಲ್ಲಿರುವ ಸೆಂಟ್ರಲ್ ಫ್ರೋಜನ್ ಸೆಮೆನ್ ಪ್ರೊಡಕ್ಷನ್ ಮತ್ತು ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಸುಧಾರಿತ ತರಬೇತಿ ಸೌಲಭ್ಯಕ್ಕೆ ಮತ್ತು ಹೆಸರಘಟ್ಟದಲ್ಲಿರುವ ಸೆಂಟ್ರಲ್ ಕ್ಯಾಟಲ್ ಬ್ರೀಡಿಂಗ್ ಫಾರ್ಮ್‌ನಲ್ಲಿ ಕರ್ನಾಟಕ ಗೋವಿನ ಐವಿಎಫ್ (ಇನ್ವಿಟ್ರೋ-ಫರ್ಟಿಲೈಸೇಶನ್) ಕಾರ್ಯಕ್ರಮಗಳಿಗೆ ಬಲ್ಯಾನ್ ಅವರು ಅಡಿಪಾಯ ಹಾಕಲಿದ್ದಾರೆ.
ಕೇಂದ್ರ, ಕರ್ನಾಟಕ ಸರ್ಕಾರ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಹಾಲು ಒಕ್ಕೂಟ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವರ್ಗೀಸ್ ಕುರಿಯನ್ ಅವರ ಜೀವನ ಪುಸ್ತಕ ಮತ್ತು ಹಾಲಿನ ಕಲಬೆರಕೆ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಬಿ ಚೌಹಾಣ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಎಲ್ ಜಾರಕಿಹೊಳಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತಮಿಳುನಾಡಿನಲ್ಲಿ ಹಾಲಿನ ಬೆಲೆ ಏರಿಕೆ: ಮಾರಾಟದಲ್ಲಿ ಶೇ. 5ರಷ್ಟು ಕುಸಿತ