• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌

|
Google Oneindia Kannada News

ನವದೆಹಲಿ, ನವೆಂಬರ್‌ 23: ಜಗತ್ತಿನ ಅತಿ ದೊಡ್ಡ ಇ ಕಾಮರ್ಸ್‌ ಕಂಪೆನಿ ಅಮೆಜಾನ್‌ ಉದ್ಯೋಗಿಗಳನ್ನು ಒತ್ತಾಯದಿಂದ ವಜಾ ಮಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕಂಪೆನಿಯ ಅಧಿಕೃತ ಪ್ರತಿನಿಧಿಯನ್ನು ಬೆಂಗಳೂರಿನ ಉಪ ಮುಖ್ಯ ಕಾರ್ಮಿಕ ಆಯುಕ್ತರ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಕಾರ್ಮಿಕ ಸಚಿವಾಲಯವು ಅಮೆರಿಕಾ ಮೂಲದ ಕಂಪೆನಿ ಅಮೆಜಾನ್‌ಗೆ ಭಾರತದ ಅಂಗಸಂಸ್ಥೆಗೆ ಖುದ್ದಾಗಿ ಇಲ್ಲವೇ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗುವಂತೆ ನೋಟಿಸ್‌ ಕಳುಹಿಸಿದೆ. ಉದ್ಯೋಗಿಗಳ ವಜಾ ಕುರಿತು ಮಾಹಿತಿ ನೀಡಲು ಹಾಜರಾಗುವಂತೆ ಸಚಿವಾಲಯದ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಅಮೆಜಾನ್‌ ಕಂಪೆನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ನೇಸೆಂಟ್‌ ಮಾಹಿತಿ ತಂತ್ರಜ್ಞಾನ ನೌಕರರ ಒಕ್ಕೂಟದ ದೂರು ದಾಖಲಿಸಿತ್ತು. ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್‌ ಕಂಪನಿಯು ಹಲವಾರು ಉದ್ಯೋಗಿಗಳನ್ನು ಕಂಪನಿಯಿಂದ ಬಲವಂತವಾಗಿ ತೆಗೆದುಹಾಕುತ್ತಿದೆ ಎಂದು ನೇಸೆಂಟ್‌ ಮಾಹಿತಿ ತಂತ್ರಜ್ಞಾನ ನೌಕರರ ಒಕ್ಕೂಟ ದೂರಿನಲ್ಲಿ ಹೇಳಿದೆ.

ವಜಾಕ್ಕೂ ಮುನ್ನ ಅಮೆಜಾನ್‌ನಿಂದ ಭಾರತೀಯ ಉದ್ಯೋಗಿಗಳಿಗೆ ಆಫರ್‌ವಜಾಕ್ಕೂ ಮುನ್ನ ಅಮೆಜಾನ್‌ನಿಂದ ಭಾರತೀಯ ಉದ್ಯೋಗಿಗಳಿಗೆ ಆಫರ್‌

ಅಮೆಜಾನ್‌ ಕಂಪನಿಯು ನವೆಂಬರ್ 30ರ ಗಡುವಿನೊಂದಿಗೆ ಸ್ವಯಂಪ್ರೇರಿತ ರಾಜೀನಾಮೆ ನೀಡುವಂತೆ ಸುತ್ತೋಲೆಯನ್ನು ನೌಕರರಿಗೆ ಕಳುಹಿಸಿದೆ. ಇದು ಅನೇಕ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ ಎಂದು ಒಕ್ಕೂಟ ತಿಳಿಸಿದೆ.

ಮೈಕ್ರೋಸಾಫ್ಟ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲೂ ವಜಾ

ಮೈಕ್ರೋಸಾಫ್ಟ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲೂ ವಜಾ

ಸರ್ಕಾರದ ಅನುಮತಿಯಿಲ್ಲದೆ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ಬರುವುದಿಲ್ಲ ಎಂದು ಅದು ಹೇಳಿದೆ. ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ಅಮೆಜಾನ್ 2023ರ ಅಂತ್ಯದ ವೇಳೆಗೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಇದರೊಂದಿಗೆ ಆರ್ಥಿಕ ಹಿಂಜರಿತದ ಭಯದ ನಡುವೆ ವೆಚ್ಚವನ್ನು ಕಡಿತಗೊಳಿಸಲು ಮತ್ತು ಲಾಭವನ್ನು ಹೆಚ್ಚಿಸಲು ನಿರ್ಧರಿಸಿದ ಮೈಕ್ರೋಸಾಫ್ಟ್, ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಹಲವಾರು ದೈತ್ಯ ಕಂಪೆನಿಗಳೂ ಕೂಡ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾ ಮಾಡಲು ಈಗಾಗಲೇ ಕಾರ್ಯಗತವಾಗಿವೆ.

ಸಾಂಕ್ರಾಮಿಕ ನಂತರ ಬದಲಾವಣೆ ತರಲಾಗಲಿಲ್ಲ

ಸಾಂಕ್ರಾಮಿಕ ನಂತರ ಬದಲಾವಣೆ ತರಲಾಗಲಿಲ್ಲ

ವಜಾ ಪ್ರಕ್ರಿಯೆ ಆರಂಭಿಸಿರುವ ಈ ಕಂಪೆನಿಗಳಲ್ಲಿ ಹೆಚ್ಚಿನವು ಸಾಂಕ್ರಾಮಿಕದ ನಂತರ ಬೇಡಿಕೆಗಳನ್ನು ಪೂರೈಸಲು ಕ್ಷಿಪ್ರ ನೇಮಕಾತಿಯನ್ನು ಮಾಡಿದ್ದವು. ಆದರೆ ಅವರ ಮಾರುಕಟ್ಟೆಗಳು ಕಂಪೆನಿ ನಿರೀಕ್ಷಿಸಿದಂತೆ ಸಾಂಕ್ರಾಮಿಕ ನಂತರದ ಬದಲಾವಣೆಯನ್ನು ತರಲಿಲ್ಲ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ರಷ್ಯಾ- ಉಕ್ರೇನ್ ಯುದ್ಧದಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದ್ದರಿಂದ ಜಗತ್ತು ಆರ್ಥಿಕ ಕುಸಿತದತ್ತ ಸಾಗುತ್ತಿದೆ.

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವುLargest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

ಹಣಕಾಸಿನ ಕೊರತೆಯ ಆರೋಪ

ಹಣಕಾಸಿನ ಕೊರತೆಯ ಆರೋಪ

ಏರುತ್ತಿರುವ ಹಣದುಬ್ಬರದಿಂದಾಗಿ ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕಾ ಮತ್ತು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ದರಗಳು ಹೆಚ್ಚಳಗೊಂಡಿವೆ. ಇದರ ಪರಿಣಾಮವಾಗಿಯೇ ಬೈಜುಸ್ ಸೇರಿದಂತೆ ಹಲವು ಭಾರತೀಯ ಸ್ಟಾರ್ಟ್‌ಅಪ್‌ಗಳು ಹಣಕಾಸಿನ ಕೊರತೆಯ ನೆಪವೊಡ್ಡಿ ನೌಕರರನ್ನು ವಜಾಗೊಳಿಸಿವೆ. ಅನೇಕ ಸ್ಟಾರ್ಟ್ಅಪ್‌ಗಳು ದೀರ್ಘಾವಧಿಯ ಹೂಡಿಕೆಯ ಭಯದಿಂದ ಉದ್ಯೋಗಿಗಳನ್ನು ವಜಾಗೊಳಿಸಿವೆ.

ಕಂಪೆನಿ ತ್ಯಜಿಸಿದರೆ ಹೊಸ ಆಫರ್‌

ಕಂಪೆನಿ ತ್ಯಜಿಸಿದರೆ ಹೊಸ ಆಫರ್‌

ಇ ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಜಗತ್ತಿನಾದ್ಯಂತ ಬರೋಬ್ಬರಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವಾಗಲೇ ಭಾರತೀಯ ಉದ್ಯೋಗಿಗಳಿಗೆ ಆಫರ್‌ ನೀಡಿದ್ದು, ತಾವೇ ಸ್ವಯಂ ಆಗಿ ಕಂಪೆನಿ ತ್ಯಜಿಸಿದರೆ ಈ ಆಫರ್‌ ನೀಡುವುದಾಗಿದೆ ತಿಳಿಸಿತ್ತು. ಭಾರತದ ಉದ್ಯೋಗಿಗಳಿಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವ ಕಾರ್ಯಕ್ರಮದ ಪ್ರಕಾರ ಭಾರತೀಯ ಉದ್ಯೋಗಿಗಳಿಗೆ 22 ವಾರಗಳ ಮೂಲ ವೇತನಕ್ಕೆ ಸಮಾನವಾದ ವೇತನವನ್ನು ನೀಡುವುದಾಗಿ ಘೋಷಿಸಿತ್ತು. ಅಲ್ಲದೆ ಪ್ರತಿ ಆರು ತಿಂಗಳ ಸೇವೆಗೆ ಒಂದು ವಾರದ ಮೂಲ ವೇತನ ಹಾಗೂ ಆರು ತಿಂಗಳವರೆಗೆ ವೈದ್ಯಕೀಯ ವಿಮೆ ಹಾಗೂ ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ನೋಟಿಸ್‌ ಅವಧಿ ಬದಲು ಹಣ ಪಾವತಿಸಿ ಹೊರಹೋಗುವ ಅವಕಾಶ ನೀಡಿತ್ತು.

English summary
The official representative of the company has been instructed to appear before the Deputy Chief Labor Commissioner, Bengaluru, in the wake of reports that Amazon, the world's largest e-commerce company, is forcibly laying off employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X