National Highway: ದೊಡ್ಡಬಳ್ಳಾಪುರದ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು: ಇಲ್ಲಿದೆ ಮಾಹಿತಿ
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇನ್ನೂ ಇತ್ತೀಚೆಗಷ್ಟೇ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಸ್ತಾಪಿಸಲಾದ ದೊಡ್ಡಬಳ್ಳಾಪುರದ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ಧಾರಿ ಯಾವುದು ಹಾಗೂ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಇತ್ತೀಚೆಗಷ್ಟೇ ಆರು ತಾಲ್ಲೂಕುಗಳನ್ನೂ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಸ್ತಾಪ ಮಾಡಿದ್ದರು. ಇವುಗಳನ್ನೆಲ್ಲ ಒಂದು ಸೆಕ್ಟರ್ ಆಗಿ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ಕೂಡ ಇದೆ. ಇನ್ನೂ ಈ ಮಾರ್ಗದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದು ಹಾದುಹೋಗಿದೆ. ಹಾಗಾದ್ರೆ, ಅದು ಯಾವುದು ಹಾಗೂ ಇದರಿಂದ ಏನೆಲ್ಲಾ ಪ್ರಯೋಜನೆಗಳಿಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ದೊಡ್ಡಬಳ್ಳಾಪುರದ ಮೇಲೆ ಹಾದುಹೋಗಿರುವ ಹೆದ್ದಾರಿ
* ರಾಷ್ಟ್ರೀಯ ಹೆದ್ದಾರಿ-648 (ಹಳೆಯ NH 207): ಈ ರಾಷ್ಟ್ರೀಯ ಹೆದ್ದಾರಿ ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸರ್ಜಾಪುರ, ಹೊಸೂರು ಮಾರ್ಗಗಗಳಲ್ಲಿ ಹಾದುಹೋಗುತ್ತದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊಸಕೋಟೆಗೂ ಇದು ಸಂಪರ್ಕ ಕಲ್ಪಿಸುತ್ತದೆ.
* ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR -NH-948A/NH-648 ಭಾಗ) ಇದು ನಗರವನ್ನು ಸುತ್ತುವರಿಯುವ ಆಕ್ಸೆಸ್ ಕಂಟ್ರೋಲ್ಡ್ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ಉಪನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದೊಡ್ಡಬಳ್ಳಾಪುರ ಭಾಗದಲ್ಲಿ ಇದರ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಸ್ವಲ್ಪ ಭಾಗ ಮಾತ್ರ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ತಿಯಾಗಲಿದೆ.
ಒಟ್ಟಿನಲ್ಲಿ ಹೇಳುವುದಾದ್ರೆ, ರಾಷ್ಟ್ರೀಯ ಹೆದ್ದಾರಿ-648 ಹಾಗೂ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಇರುವ ಕಾರಣದಿಂದ ದೊಡ್ಡಬಳ್ಳಾಪುರ ಒಂದು ಪ್ರಮುಖ ಸಾರಿಗೆ ಹಬ್ ಆಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಈ ಭಾಗದಲ್ಲಿ ರಸ್ತೆಗಳು ಮತ್ತಷ್ಟು ವಿಸ್ತರಣೆಯಾಗಲಿವೆ.
NH-648 ಯಾವೆಲ್ಲಾ ನಗರಗಳ ಮೇಲೆ ಹಾದುಹೋಗಲಿದೆ?
* ದಾಬಸ್‌ಪೇಟೆ
* ದೊಡ್ಡಬಳ್ಳಾಪುರ
* ದೇವನಹಳ್ಳಿ
* ಸರ್ಜಾಪುರ
* ಹೊಸೂರು
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್
* ದಾಬಸ್‌ಪೇಟೆ
* ದೊಡ್ಡಬಳ್ಳಾಪುರ
* ದೇವನಹಳ್ಳಿ
* ಹೊಸಕೋಟೆ
ರಾಷ್ಟ್ರೀಯ ಹೆದ್ದಾರಿ-648ಯಿಂದ ಏನೆಲ್ಲಾ ಪ್ರಯೋಜನ?
* ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸರ್ಜಾಪುರ, ಹೊಸೂರು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುತ್ತದೆ.
* ಬೆಂಗಳೂರು ಉತ್ತರ ಭಾಗ, ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಕ್ಕೆ ಸುಲಭ ಪ್ರಯಾಣ.
* ಪ್ರಯಾಣ ಸಮಯ ಕಡಿಮೆಯಾಗಲಿದ್ದು, ಇದರಿಂದ ಸಂಚಾರಕ್ಕೆ ಸುಗಮ ಆಗುತ್ತದೆ.
* ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ
* ಉದ್ಯೋಗಾವಕಾಶಗಳ ಸೃಷ್ಟಿ
* ಪ್ರವಾಸೋದ್ಯಮ ಮತ್ತು ವ್ಯಾಪಾರ ಸುಗಮ
* ಸಂಚಾರ ದಟ್ಟಣೆ ನಿಯಂತ್ರಣ
* ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ
ದೊಡ್ಡಬಳ್ಳಾಪುರ ಕೈಗಾರಿಕಾ ವಲಯ, ಕೆಐಎಡಿಬಿ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಇದರಿಂದ ಸರಕು ಸಾಗಾಟ ಸುಗಮ ಆಗಲಿದ್ದು, ವೆಚ್ಚ ಕೂಡ ಕಡಿಮೆ ಆಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಹೆಚ್ಚು ಅನುಕೂಲ ಆಗುತ್ತದೆ. ಕೈಗಾರಿಕೆ, ಲಾಜಿಸ್ಟಿಕ್ಸ್, ಸಾರಿಗೆ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಅದರಲ್ಲೂ ಪ್ರಮುಖವಾಗಿ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಂತಾಗಲಿದೆ. ಜೊತೆಗೆ ಹೆದ್ದಾರಿ ಹತ್ತಿರದ ಪ್ರದೇಶಗಳಲ್ಲಿ ಮನೆ, ಆಸ್ತಿಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ಭೂ ಮಾಲೀಕರಿಗೆ ಬಂಪರ್ ಲಾಟರಿ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಆಸ್ತಿ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಮಾಲೀಕರು ಕೋಟ್ಯಾಧಿಪತಿಗಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications