ಪತಿಯ ನಿಧನ: 15 ದಿನಗಳ ಪೆರೋಲ್ ಗೆ ಶಶಿಕಲಾ ಅರ್ಜಿ

ಬೆಂಗಳೂರು, ಮಾರ್ಚ್ 20: ಇಂದು ಬೆಳಗ್ಗಿನ ಜಾವ(1:35) ನಿಧನರಾದ ಶಶಿಕಲಾ ನಟರಾಜನ್ ಅವರ ಪತಿ ನಟರಾಜನ್(75) ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶಶಿಕಲಾ ಅವರು 15 ದಿನಗಳ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ದೋಷಿ ಎಂದು ಪರಿಗಣಿಸಲ್ಪಟ್ಟ ಶಶಿಕಲಾ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿಯ ನಿಧನದ ಹಿನ್ನೆಲೆಯಲ್ಲಿ ಪೆರೋಲ್ ಪಡೆಯಲಿರುವ ಅವರು ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

ಇದಕ್ಕೂ ಮುನ್ನ ಕಳೆದ ಅಕ್ಟೋಬರ್ ನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್ ಅವರನ್ನು ನೋಡಲು ಐದು ದಿನಗಳ ಪೆರೋಲ್ ಪಡೆದಿದ್ದ ಶಶಿಕಲಾ, ಪತಿಯನ್ನು ಭೇಟಿ ಮಾಡಿದ್ದರು.

Natarajans demise: Wife VK Sasikala applies for 15 day parole in Bengaluru

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಎಂ.ನಟರಾಜನ್ ಮಾರುತಪ್ಪ ಚೆನ್ನೈನ ಗ್ಲೆಗ್ಲಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಂದು(ಮಾ.20) ಕೊನೆಯುಸಿರೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+