ಬೆಂಗಳೂರಲ್ಲಿ ನಾಸ್ಸಾಕಾಂ ಕಾನ್ ಕ್ಲೇವ್ 2013
ಬೆಂಗಳೂರು, ಸೆ.20 : ನಾಸ್ಸಾಕಾಂ ಉತ್ಪನ್ನ ಕಾನ್ ಕ್ಲೇವ್ (ಎನ್ ಸಿಪಿ) (http://productconclave.nasscom.in/) ಮತ್ತೊಮ್ಮೆ ಭಾರತದ ಉತ್ಪನ್ನ ಆಧಾರಿತ ಸಂಸ್ಥೆಗಳು ಹಾಗೂ ಆರಂಭ ಹಂತದ ಸ್ಟಾರ್ ಅಪ್ ಕಂಪನಿಗಳನ್ನು ಒಟ್ಟುಗೂಡಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳ ಪ್ರಮುಖ ಉಪನ್ಯಾಸಕರನ್ನು ಒಂದೇ ವೇದಿಕೆಯಲ್ಲಿ ಕರೆ ತಂದು ಉತ್ಸಾಹಿಗಳಿಗೆ ಹೊಸ ಚೈತನ್ಯ ತುಂಬುತ್ತಿದೆ.
ಚಮಥ್ ಪಲಿಹಾಪಿತಿಯಾ, ಗೈ ಕವಾಸಾಕಿ, ವಿನೋದ್ ಖೋಸ್ಲಾ, ವಿವೇಕ್ ವಾಧ್ವಾ ಮುಂತಾದ ಭಾಷಣಕಾರರನ್ನು ಒಂದೇ ಕಡೆ ಕಾಣುವ ಯೋಗ ಒದಗಿ ಬರಲಿದೆ.
ಈ ವರ್ಷದ ಕಾರ್ಯಕ್ರಮ ಅಕ್ಟೋಬರ್ 29 ರಿಂದ 30 ರಂದು 'Do it, Right. Big' ಎಂಬ ಅಡಿ ಬರಹದೊಂದಿಗೆ ನಡೆಸಲಾಗುತ್ತಿದೆ, ಆಯೋಜಕರ ಪ್ರಕಾರ ಹಲವು ಸಮ್ಮೇಳನಗಳು ಉದ್ಯಮಿಗಳಿಗೆ ಬರೀ ಮಾಹಿತಿ ನೀಡಿ ಸುಮ್ಮನಾಗುತ್ತದೆ. ಉದ್ಯಮಿಗಳ, ಕೈಗಾರಿಕಾ ತಜ್ಞರ ಅಭಿಪ್ರಾಯ, ಅನುಭವದ ಜತೆಗೆ ಅವಕಾಶಗಳನ್ನು ನೀಡುವುದು ತುಂಬಾ ಮುಖ್ಯ.
ಉದ್ಯಮಶೀಲತೆ ಗುಣ ಹೊಂದಿರುವ ಅರ್ಹ ಉದಯೋನ್ಮುಖ ಕಂಪನಿಗಳನ್ನು ಗುರುತಿಸಿ ಅವುಗಳ ಏಳಿಗೆ ಬೇಕಾದ ಮೂಲ ಇಂಧನ ಒದಗಿಸುವುದು ನಾಸ್ಸಾಕಾಂ ಉತ್ಪನ್ನ ಕಾನ್ ಕ್ಲೇವ್ ನ ಗುರಿಯಾಗಿದೆ.

ಈ ಬಾರಿಯ ಉಪನ್ಯಾಸಕರ ಪಟ್ಟಿ ಹೀಗಿದೆ:
ಈ ಬಾರಿ 10 ನೇ ವಾರ್ಷಿಕೋತ್ಸವದ ಅಂಗವಾಗಿ ಎನ್ ಪಿಸಿ ಸ್ಟಾರ್ ಭಾಷಣಕಾರರನ್ನು ಕರೆಸಿಕೊಳ್ಳುತ್ತಿದ್ದು ಸ್ಟಾರ್ ಅಪ್ ಉದ್ಯಮಿಗಳಿಗೆ ಉಪನ್ಯಾಸ ಕೇಳುವ ಉತ್ತಮ ಅವಕಾಶ ಸಿಗಲಿದೆ.
1. ಫಣೀಂದ್ರ ಸಾಮ (ಸ್ಥಾಪಕ ಹಾಗೂ ಸಿಇಒ, ರೆಡ್ ಬಸ್.ಇನ್)
2. ವಿಎಸ್ಎಸ್ ಮಣಿ (ಸ್ಥಾಪಕ ಹಾಗೂ ಸಿಇಒ, ಜಸ್ಟ್ ಡಯಲ್)
3. ನಂದನ್ ನಿಲೇಕಣಿ (UIDAI)
4. ರಾಜನ್ ಆನಂದನ್ (ಗೂಗಲ್ ಇಂಡಿಯಾ ಮುಖ್ಯಸ್ಥ)
5. ವಿಕ್ರಮ್ ಸಿಂಗ್ ಬೇಡಿ (ಅಮೆಜಾನ್ ಇಂಡಿಯಾ ಮುಖ್ಯಸ್ಠ)
6 ಮುರುಗವೇಲ್ ಜಾನಕಿರಾಮ್ (ಭಾರತ್ ಮ್ಯಾಟಿ ಮೊನಿ ಸ್ಥಾಪಕ, ಸಿಇಒ)
7. ಚೇತನ್ ಕುಲಕರ್ಣಿ (Vizury ಸಹ ಸ್ಥಾಪಕ, ಸಿಇಒ)
8. ಚೇತನ್ ಮೈನಿ (ಮಹೀಂದ್ರಾ ರೇವಾ, ಸ್ಥಾಪಕ, ಸಿಇಒ)
9. ರಾಹುಲ್ ಸೂದ್ (ಮೈಕ್ರೋಸಾಫ್ಟ್ ವೆಂಚರ್ಸ್, ಪ್ರಧಾನ ವ್ಯವಸ್ಥಾಪಕ ಹಾಗೂ ಪಾಲುದಾರ)
10. ನೀಲ್ ಪಟೇಲ್ (KISSmetrics, ಸಹ ಸ್ಥಾಪಕ)
11. ಬ್ರಾಡ್ ಫೆಲ್ಡ್ (ಫಾಂಡ್ರಿ ಸಮೂಹ ವ್ಯವಸ್ಥಾಪಕ ನಿರ್ದೇಶಕ)
12. ಚಾರ್ಲ್ಸ್ ಫಿಲಿಫ್ (infor ಸಿಇಒ)
13, ಸ್ಟೀವ್ ಶೈನ್ (Actian, ಸಿಇಒ, ಅಧ್ಯಕ್ಷ)
14. ಸತ್ಯನ್ ಗಜ್ವಾನಿ (ಟೈಮ್ಸ್ ಇಂಟರ್ನೆಟ್, ಸಿಇಒ)
15. ಕೆವಿನ್ ಮಿತ್ತಲ್ (ಭಾರ್ತಿ ಸಾಫ್ಟ್ ಬ್ಯಾಂಕ್, ಮುಖ್ಯಸ್ಥ ಉತ್ಪನ್ನ ಹಾಗೂ ಕೌಶಲ್ಯ)
16. ಗೌತಮ್ ಗೊಧ್ವಾನಿ (Simply Hired, ಸ್ಥಾಪಕ ಹಾಗೂ ಚೇರ್ಮನ್)
17. ಸೋಮ್ ಮಿತ್ತಲ್ (NASSCOM ಅಧ್ಯಕ್ಷ)
18. ಸಂಜೀವ್ ಬಿ (ನೌಕ್ರಿ.ಕಾಂ ಸಿಇಒ)
19. ನಿಪುಣ್ ಮೆಹ್ತಾ ( ServiceSpace ಸ್ಥಾಪಕ)
20. ಮಾನವ್ ಗಾರ್ಗ್ (ಏಕ ಸಾಫ್ಟ್ ವೇರ್ ಸ್ಥಾಪಕ, ಸಿಇಒ)
21. ವಿವೇಕ್ ಮಾನ್ ಸಿಂಗ್ (ಸಿಸ್ಕೋ ಉಪಾಧ್ಯಕ್ಷ)
[ಭಾಷಣಕಾರರ ಪೂರ್ತಿ ಪಟ್ಟಿ ಇಲ್ಲಿದೆ ನೋಡಿ]
ಎನ್ ಪಿಸಿ ಕಾರ್ಯಕ್ರಮಕ್ಕೆ ಇಎಂಸಿ2, ಗೂಗಲ್, ಇಬೇ, ಸಿಎ ಟೆಕ್ನಾಲಜೀಸ್, ಸಿಸ್ಕೋ, Avangate, ಸೋಣಿ ಹಾಗೂ ಟೆಕ್ ಮಹೀಂದ್ರಾ ಸಂಸ್ಥೆಗಳು ಪ್ರಯೋಜಕರಾಗಿದ್ದಾರೆ. ಎನ್ ಪಿಸಿ ಕಾರ್ಯಕ್ರಮ ಸಂಪೂರ್ಣ ಸ್ವಯಂ ಸೇವಕರಿಂದ ಕೂಡಿದ್ದು ಹಲವು ಸಂಸ್ಥೆಗಳ ಸಿಇಒ, ಇಂಜಿನಿಯರ್, ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಒನ್ ಇಂಡಿಯಾ ಸುದ್ದಿ











Click it and Unblock the Notifications