ಮೋದಿ ಕೋಟಿನ ಬಗ್ಗೆ ಮಾತಾಡಿದ್ದವರಿಗೆ ಸಿದ್ದು ಸೀರೆ ಕಾಣಿಸಲಿಲ್ವೆ?

ಬೆಂಗಳೂರು, ಜನವರಿ, 21: ಅಂದು ಮೋದಿ ಧರಿಸಿದ್ದ ಕೋಟಿನ ದರದ ಬಗ್ಗೆ ಮಾತನಾಡಿದ್ದ ಮಂದಿ ಇಂದು ಯಾಕೆ ಬಾಯಿ ಬಿಡುತ್ತಿಲ್ಲ. ಹೌದು.. ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸಿದ್ದ ಕೋಟಿನ ಬೆಲೆ ಅಷ್ಟು... ಇಷ್ಟು ಎಂದು ಬೊಬ್ಬಿಟ್ಟವರು ಇಂದು ಎಲ್ಲಿಗೆ ಹೋಗಿದ್ದಾರೆ? ಉತ್ತರ ಮಾತ್ರ ಇಲ್ಲ.

ದಾವಣಗೆರೆಯಲ್ಲಿ ನಮ್ಮ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಡದಿಗಾಗಿ ಸೀರೆ ಖರೀದಿ ಮಾಡಿದ್ದು ಸುದ್ದಿಯಾಗಿತ್ತು. ಸಿದ್ದರಾಮಯ್ಯ ಹೆಂಡತಿಗೆ ಸೀರೆ ಖರೀಸಿದರೆ ನಮಗೇನು ಎಂಬ ಮಾತನ್ನು ಕೇಳಬಹುದು. ಆದರೆ ನಿಜಕ್ಕೂ ಸಿದ್ದರಾಮಯ್ಯ ಖರೀದಿ ಮಾಡಿದ್ದು ಬರೋಬ್ಬರಿ 1,09,385 ರು. ಮೌಲ್ಯದ ಸೀರೆ! ಅದರಲ್ಲಿ 27,436 ರು. ಡಿಸ್ಕೌಂಟ್ ಕಳೆದು ಸಿದ್ದರಾಮಯ್ಯ ನೀಡಿದ್ದು 82,039 ರು.[ಹೆಲ್ಮೆಟ್ ಕಡ್ಡಾಯ, ಸಿದ್ದರಾಮಯ್ಯ ಸ್ಪಷ್ಟನೆಗಳು]

Narnendra Modi Suit VS Siddaramaiah sari

ಸಿದ್ದರಾಮಯ್ಯ ತಮ್ಮ ಕೈನಿಂದಲೇ ಹಣ ನೀಡಿರಬಹುದು. ಆದರೆ ಅದ್ದೂರಿ ಮದುವೆ ಮೇಲೆಯೂ ನಿರ್ಭಂಧ ಹೇರಿದ್ದ ಸಿದ್ದರಾಮಯ್ಯ ತಮ್ಮ ಹೆಂಡತಿಗೆ ಭಾರೀ ಮೊತ್ತದ ಸೀರೆ ಖರೀದಿ ಮಾಡಬಹುದಿತ್ತೆ? ಮದುವೆಯಾದ ನಂತರ ಇದೆ ಮೊದಲ ಬಾರಿಗೆ ಪತ್ನಿಗೆ ಸೀರೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಹೇಳಿದ್ದರು. ಅದು ಏನೇ ಇರಲಿ ದುಬಾರಿ ವೆಚ್ಚ ಮಾಡಬೇಡಿ ಎಂದು ಕಾನೂನು ಮಾಡುವ, ಹೇಳಿಕೆ ನೀಡುವ ಸಿದ್ದರಾಮಯ್ಯ ತಾವು ಮಾತ್ರ ದುಬಾರಿ ವೆಚ್ಚ ಮಾಡಿದ್ದು ಎಷ್ಟು ಸರಿ.[ಮೇಕೆದಾಟು ಯೋಜನೆ ವಿವಾದವೇನು?]

ಮೋದಿ ಕೋಟಿನ ಬಗ್ಗೆ ಮಾತನಾಡಿದ್ದ ಎಷ್ಟೋ ಜನರಿಗೆ ಒಂದು ಸಂಗತಿ ಗೊತ್ತಿಲ್ಲ. ಮೋದಿ ಧರಿಸಿದ್ದು 7000 ರೂಪಾಯಿ ಬೆಲೆಯ ಕೋಟು, ಆದರೆ ನಮ್ಮ ಮಾಧ್ಯಮಗಳು ಬೊಬ್ಬಿಟ್ಟಿದ್ದು 10 ಲಕ್ಷ ರು. ಎಂದು. ಮುಂದಿನ ಕತೆ ಮಾಧ್ಯಮಗಳಿಗೆ ಬೇಕಿಲ್ಲ. ಮೋದಿ ಅವರ ಕೋಟು 4.5 ಕೋಟಿ ರು. ಗೆ ಹರಾಜಾಗಿ ಆ ಹಣ ಗಂಗಾ ನದಿ ಸ್ವಚ್ಛತೆಗೆ ವಿನಿಯೋಗವಾದ್ದನ್ನು ಮರೆತೆ ಬಿಟ್ಟಿವೆ.

ಧರಿಸುವ ಬಟ್ಟೆ, ಕೊಳ್ಳುವ ಬಟ್ಟೆ ಅವರ ಖಾಸಗಿ ಬದುಕು ಎಂದು ನೀವು ವಾದ ಮಾಡಬಹುದು. ಆದರೆ ಒಬ್ಬ ಜನಪ್ರತಿನಿಧಿ ಆತ ಸಮಾಜದ ಆಸ್ತಿ. ಅದರಲ್ಲೂ ಪ್ರಮುಖ ಹುದ್ದೆಯಲ್ಲಿರುವವರ ನಡವಳಿಕೆ ಸುದ್ದಿಯಾಗುತ್ತದೆ. ಮೋದಿ ಕೋಟಿನ ಬಗ್ಗೆ ಮಾತನಾಡಿ ಪುಕ್ಕಟೆ ಅಪಪ್ರಚಾರ ನೀಡಿದ್ದವರು ಇಂದು ಯಾವ ಮೂಲೆಯಲ್ಲಿ ಅಡಗಿ ಕುಳಿತುಕೊಂಡಿದ್ದಾರೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+