ಗುಜರಾತ್‌ ಮಾದರಿಯನ್ನು ಬೆಂಗಳೂರಿಗೆ ತಂದ ಬಿಜೆಪಿ, ವಿಶ್ಲೇಷಣೆ

ಬೆಂಗಳೂರು, ಮೇ 03; ಕರ್ನಾಟಕದ ಚುನಾವಣಾ ಪ್ರಚಾರದ ಕಾವು ಏರಿದೆ. ಮೇ 8ರಂದು ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಬಿಜೆಪಿ ಬೆಂಗಳೂರಿನಲ್ಲಿ ಬೃಹತ್ ರೋಡ್‌ ಶೋ ಆಯೋಜನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಒಂದೇ ದಿನ ನಗರದಲ್ಲಿ ಎರಡು ರೋಡ್ ಶೋ ನಡೆಸಲಿದ್ದಾರೆ.

ಮೇ 6ರ ಶನಿವಾರ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ 2 ರೋಡ್ ಶೋ ನಡೆಸಲಿದ್ದಾರೆ. 'ಕರ್ನಾಟಕ ಸಂಕಲ್ಪ' ಎಂಬ ಹೆಸರಿನಲ್ಲಿ ಈ ರೋಡ್ ಶೋ ನಡೆಯಲಿದ್ದು, ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯುವ ಗುರಿಯೊಂದಿಗೆ ಪ್ರಚಾರ ನಡೆಸಲಾಗುತ್ತದೆ.

Narendra Modi Road Show BJP Brings Gujarat Model To Bengaluru

ಏಪ್ರಿಲ್ 29ರಂದು ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆಸಿದ ಸುಮಾರು 5 ಕಿ. ಮೀ. ರೋಡ್ ಶೋ ವೇಳೆ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ನಡೆಯಲಿರುವ ರೋಡ್ ಶೋ ಒಂದು 10.1 ಕಿ. ಮೀ. ಮತ್ತೊಂದು ಸುಮಾರು 28 ಕಿ. ಮೀ. ಯದ್ದು.

ಗುಜರಾತ್ ಮಾಡೆಲ್; ಎಲ್ಲದಕ್ಕೂ ಗುಜರಾತ್ ಮಾದರಿ ಎಂದು ಹೇಳುವ ಬಿಜೆಪಿ ಈಗ ರಾಜ್ಯದ ಚುನಾವಣಾ ಪ್ರಚಾರಕ್ಕೂ ಅದನ್ನೇ ತಂದಿದೆ. ಹೌದು, ಗುಜರಾತ್ ಚುನಾವಣೆ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಮೆಗಾ ರೋಡ್ ಶೋ ನಡೆಸಿದ್ದರು. ಅದು ಚುನಾವಣೆಯಲ್ಲಿ ಫಲ ಕೊಟ್ಟಿತ್ತು. 13 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು 50 ಕಿ. ಮೀ. ರೋಡ್ ಶೋ ನಡೆಸಲಾಗಿತ್ತು.

Narendra Modi Road Show BJP Brings Gujarat Model To Bengaluru

ಈಗ ಬೆಂಗಳೂರಿನಲ್ಲಿ 23 ವಿಧಾನಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸುಮಾರು 28 ಕಿ. ಮೀ. ರೋಡ್ ಶೋ ಆಯೋಜನೆ ಮಾಡಲಾಗಿದೆ. ಮೇ 6ರ ಶನಿವಾರ ಸಂಜೆ 6 ಗಂಟೆಯಿಂದ 10 ಗಂಟೆಯ ತನಕ ಈ ರೋಡ್ ಶೋ ನಡೆಯಲಿದೆ. ಕೋಣನಕುಂಟೆ ಕ್ರಾಸ್‌ನಿಂದ ಆರಂಭವಾಗುವ ರೋಡ್‌ ಶೋ ಮಲ್ಲೇಶ್ವರದಲ್ಲಿ ಅಂತ್ಯಗೊಳ್ಳಲಿದೆ.

ಗುಜರಾತ್‌ನಲ್ಲಿಯೂ ಚುನಾವಣೆಗೆ ನಾಲ್ಕು ದಿನ ಇರುವಾಗ ಅಹಮದಾಬಾದ್‌ನಲ್ಲಿ ದೊಡ್ಡ ರೋಡ್ ಶೋ ನಡೆದಿತ್ತು. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲಿ ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಯಲಿದೆ. ಮೋದಿ ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ರೋಡ್ ಶೋ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಮೇ 8ರಂದು ಕೊನೆಗೊಳ್ಳಲಿದೆ. ಮೇ 6ರಂದು ಮೋದಿ ಕೊನೆಯ ಬಾರಿಗೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಆದ್ದರಿಂದ ಅಂದು ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಆಯೋಜನೆ ಮಾಡಲಾಗಿದೆ. ಶನಿವಾರ ಸಂಜೆ ವಾಹನ ಸವಾರರು ಈ ಕುರಿತು ತಿಳಿದು ಸಂಚಾರ ನಡೆಸುವುದು ಉತ್ತಮ.

ನರೇಂದ್ರ ಮೋದಿ ಎಸ್‌ಪಿಜಿ ಭದ್ರತೆ ಹೊಂದಿರುವ ನಾಯಕ. ಅವರ ರೋಡ್ ಶೋ ಇದ್ದರೆ ಅದು ಸಾಗುವ ಮಾರ್ಗದಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತದೆ. ಮುಖ್ಯ ರಸ್ತೆಗೆ ಬಂದು ಸೇರುವ ಮಾರ್ಗಗಳನ್ನು ಮುಚ್ಚಲಾಗುತ್ತದೆ. ಮೋದಿ 26 ಕ್ಕೂ ಅಧಿಕ ಕಿ. ಮೀ. ರೋಡ್ ಶೋ ನಡೆಸಲಿದ್ದಾರೆ ಎಂದರೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯಾಗಲಿದೆ.

ನಿರ್ದೇಶಕರ ಟ್ವೀಟ್; ಕನ್ನಡ ಚಿತ್ರ ನಿರ್ದೇಶಕಕ ಮಂಸೋರೆ ಮೋದಿ ರೋಡಿ ಶೋ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಮೇ 6ನೇ ತಾರೀಖು ಮತ್ತೆ ಬೆಂಗಳೂರಿನಲ್ಲಿ ರೋಡ್‌ಶೋ ಅಂತೆ. ಮೊನ್ನೆ ಆದ ಸಮಸ್ಯೆ ಇನ್ನು ಜನ ಮರೆತಿಲ್ಲಾ. ಈಗ ಮತ್ತೆ ಸುಮಾರು 35km ರೋಡ್‌ಶೋ ಅಂತೆ. ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ? @ceo_karnataka ದಯವಿಟ್ಟು ಅನುಮತಿ ಕೊಡಬೇಡಿ. ಅವರು ಅಭಿವೃದ್ಧಿ ಮಾಡಿದ್ದರೆ ಜನರೇ ಓಟು ಹಾಕ್ತಾರೆ" ಎಂದು ಟ್ವೀಟ್ ಮಾಡದ್ದಾರೆ. #No_road_show_in_Bengaluru ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+