• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ವರ್ಷಕ್ಕೆ ಕರ್ನಾಟಕಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ

|
   ಹೊಸ ವರ್ಷಕ್ಕೆ ಕರ್ನಾಟಕಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ | NARENDRA MODI | NEAW YEAR | BENGALURU

   ತುಮಕೂರು, ಡಿಸೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 02 ರಂದು ತುಮಕೂರಿಗೆ ಆಗಮಿಸಲಿದ್ದಾರೆ.

   ಮೋದಿ ಅವರು ಪ್ರಧಾನಿ ಹುದ್ದೆಗೆ ಪುನರಾಯ್ಕೆ ಆದ ಬಳಿಕ ಎರಡನೇ ಬಾರಿ ಬಾರಿಗೆ ಕರ್ನಾಟಕಕ್ಕೆ ಬರುತ್ತಿದ್ದು, ಜನವರಿ 2 ರಂದು ತುಮಕೂರಿನಲ್ಲಿ ಆಯೋಜಿಸಿರುವ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

   ಜನವರಿ 2 ರ ಸಂಜೆ ಅಥವಾ ಜನವರಿ 3 ರ ಬೆಳಿಗ್ಗೆ ಮೋದಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳಿಗೆ ಗೌರವ ಸಮರ್ಪಿಸಲಿದ್ದಾರೆ. ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗ ಮೋದಿ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ.

   ಜನವರಿ 3 ರಂದು ಬೆಂಗಳೂರಿಗೆ ಆಗಮಿಸಲಿರುವ ಮೋದಿ ಜಿಕೆವಿಕೆ ಗೆ ಭೇಟಿ ನೀಡಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆ ಮಾಡಲಿದ್ದಾರೆ. ನಂತರ ಜಿಗಣಿಯಲ್ಲಿ ನಡೆಯಲಿರುವ ಯೋಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುವವರಿದ್ದಾರೆ.

   ಎರಡನೇ ಅವಧಿಗೆ ಪ್ರಧಾನಿ ಆಗಿ ಪುನರಾಯ್ಕೆ ಆದ ನಂತರ ಎರಡನೇ ಬಾರಿಗೆ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಮೊದಲು ಚಂದ್ರಯಾನ-2 ನೋಡಲು ಅವರು ಬೆಂಗಳೂರಿಗೆ ಬಂದಿದ್ದರು. ಆದರೆ ಅದು ಯಶಸ್ವಿ ಆಗದ ಕಾರಣ ನಿರಾಸೆಯಿಂದ ವಾಪಸ್ಸಾಗಬೇಕಾಗಿ ಬಂದಿತ್ತು.

   English summary
   PM Narendra Modi coming to Tumkuru on January 2nd. On January 3rd he will visit GKVK Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X