ನರೇಂದ್ರ ಮೋದಿ ಬೆಂಗಳೂರು ಸಮಾವೇಶ ನ.17ಕ್ಕೆ

ಬೆಂಗಳೂರು, ಅ, 24 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರು ಸಮಾವೇಶದ ದಿನಾಂಕ ಬದಲಾವಣೆಯಾಗಿದೆ. ಮೊದಲು ನ.16ರ ಶನಿವಾರ ಸಮಾವೇಶ ನಿಗದಿಪಡಿಸಲಾಗಿತ್ತು. ಸದ್ಯ ಅದನ್ನು ಒಂದು ದಿನ ಮುಂದೂಡಲಾಗಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರು ಘೋಷಣೆಯಾದ ನಂತರ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಮೊದಲು ನ.16 ರ ಶನಿವಾರ ಸಮಾವೇಶ ನಿಗದಿಪಡಿಸಿ ಬಿಜೆಪಿ ಪ್ರಕಟಣೆ ಹೊರಡಿಸಿತ್ತು.

Narendra Modi

ಆದರೆ, ಬುಧವಾರ ಪ್ರಕಟಣೆ ಹೊರಡಿಸಿರುವ ಬಿಜೆಪಿ ನರೇಂದ್ರ ಮೋದಿ ಅವರ ಸಮಾವೇಶವನ್ನು ನ.17ರ ಭಾನುವಾರ ನಡೆಯಲಿದೆ ಎಂದು ಘೋಷಿಸಿದೆ. ಈ ಮೂಲಕ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರು ಸಮಾವೇಶವನ್ನು ಒಂದು ದಿನ ಮುಂಡೂಡಲಾಗಿದೆ.

ನ.16 ಶನಿವಾರವಾಗಿದ್ದು, ನಗರದಲ್ಲಿ ವಾಹನ ಸಂಚಾರ ಹೆಚ್ಚಿರುತ್ತದೆ. ಮೋದಿ ಸಮಾವೇಶಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಟ್ರಾಫಿಕ್‌ ಜಾಂ ಉಂಟಾಗಬಹುದು ಎಂಬ ಕಾರಣಕ್ಕಾಗಿ ಸಮಾವೇಶವನ್ನು ಮುಂದೂಡಲು ಬುಧವಾರ ನಡೆದ ಬಿಜೆಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹೊಸ ದಿನಾಂಕದ ಪ್ರಕಾರ ನ.17ರ ಭಾನುವಾರ ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರ ಸಮಾವೇಶ ನಡೆಯಲಿದೆ. ಆದರೆ, ಸಮಾವೇಶದ ಸ್ಥಳ ಅಂತಿಮಗೊಂಡಿಲ್ಲ. ಹತ್ತು ರೂ.ಶುಲ್ಕ ನೀಡಿ ನೀವು ನರೇಂದ್ರ ಮೋದಿ ಅವರ ಸಮಾವೇಶಲ್ಲಿ ಭಾಗವಹಿಸಬುದಾಗಿದೆ.

ಸಮಾವೇಶ ಎಲ್ಲಿ : ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಸುಮಾರು ಐದು ಲಕ್ಷ ಜನರು ಸೇರಬಹುದೆಂದು ಕರ್ನಾಟಕ ಬಿಜೆಪಿ ಅಂದಾಜಿಸಿದೆ. ಆದ್ದರಿಂದ ಸಮಾವೇಶ ಎಲ್ಲಿ ನಡೆಸಬೇಕು ಎಂಬ ಕುರಿತು ಬಿಜೆಪಿ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಲಕ್ಷಾಂತರ ಜನರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ಸಮಾವೇಶವನ್ನು ಅರಮನೆ ಮೈದಾನದಲ್ಲಿ ನಡೆಸಬೇಕೇ ಅಥವ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಸಬೇಕೇ ಎಂದು ಬಿಜೆಪಿ ನಿರ್ಧರಿಸಿಲ್ಲ.

ಮುಂದಿನ ಎರಡು ಮೂರು ದಿನದಲ್ಲಿ ನರೇಂದ್ರ ಮೋದಿ ಅವರ ಸಮಾವೇಶದ ಸ್ಥಳಗಳನ್ನು ಅಂತಿಮಗೊಳಿಸಿ, ಪ್ರಕಟಣೆ ಹೊರಡಿಸಲಾಗುವುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+