ನಮೋ ಸತ್ಯನಾರಾಯಣ ಟಿಫನ್ ಸೆಂಟರ್ ನಲ್ಲಿ ಎಲ್ಲವೂ ಸಸ್ತಾ!

ನಮೋ ಸತ್ಯನಾರಾಯಣ ಟಿಫಿನ್ ಸೆಂಟರ್ ನ ವಿಶೇಷ ಏನು ಗೊತ್ತಾ? ಎಲ್ಲದರ ಬೆಲೆಯೂ ಸಸ್ತಾ. ಇನ್ನು ಇಲ್ಲಿನ ತಿಂಡಿಗಳು ಬಹಳ ಹೆಸರುವಾಸಿ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟು, ಹೇಗಿತ್ತು ಅಂತ ನಿಮ್ಮ ಅಭಿಪ್ರಾಯ ತಿಳಿಸಿ

ಬೆಂಗಳೂರು, ಏಪ್ರಿಲ್ 22: ಈ ಹೋಟೆಲ್ ನ ನಿಮಗೆ ಪರಿಚಯ ಮಾಡಿಸಲೇ ಬೇಕು ಅನ್ನಿಸೋದಕ್ಕೆ ಇದಕ್ಕಿಟ್ಟಂಥ ಹೆಸರು ಒಂದು ಕಾರಣ ಅಷ್ಟೇ. ಕಡಿಮೆ ಬೆಲೆಗೆ ಬಾಯಲ್ಲಿ ನೀರೂರಿಸುವಂಥ ತಿಂಡಿ, ರೈಸ್ ಬಾತ್ ಹಾಗೂ ಕಾಫಿ ಸಿಗುವ ಈ ಹೋಟೆಲ್ ನ ಹೆಸರು ನಮೋ ಸತ್ಯನಾರಾಯಣ ಟಿಫನ್ ಸೆಂಟರ್.

ಗುಟ್ಟಹಳ್ಳಿ ಲಕ್ಷ್ಮೀಪುರಂನ ಕೆಂಪೇಗೌಡ ಈಜುಕೊಳ ರಸ್ತೆಯಲ್ಲಿ ಈ ಟಿಫನ್ ಸೆಂಟರ್ ಇದೆ. ನಮೋ ಟಿಫನ್ ಸೆಂಟರ್ ಎಂಬುದು ದಪ್ಪಕ್ಷರಗಳಲ್ಲಿ ಕಾಣುತ್ತದೆ. ಅದೇ ಕಣ್ರೀ ಗವಿಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಕೆಂಪೇಗೌಡ ಪುತ್ಥಳಿ ನಿಲ್ಲಿಸಿರುವ ವೃತ್ತ ಇದೆಯಲ್ಲ, ಅಲ್ಲಿಂದ ಬಲಕ್ಕೆ ಕೆಂಪೇಗೌಡ ಈಜುಕೊಳದ ಕಡೆಗೆ ಹೋಗವ ರಸ್ತೆಯಲ್ಲಿ ಈ ಹೋಟೆಲ್ ಇದೆ.[ಜಯನಗರದ ಹುಡ್ಗಿ ಜತೆ ತಿಂಡಿಪೋತರ ಸ್ವರ್ಗ ಬೆಂಗ್ಳೂರಲ್ಲಿ ಸುತ್ತಾಟ]

Namo Satyanaraya tiffin centre, unique hotel with lesser price

ಎರಡು-ಎರಡೂವರೆ ವರ್ಷದ ಆರಂಭವಾಗಿದೆ. ಇದರ ಮಾಲೀಕರು ರಾಘವೇಂದ್ರ ಭಟ್ ಕುಂದಾಪುರದ ಕಡೆಯವರು. ನಾವು ಅಲ್ಲಿಗೆ ಹೋದಾಗ ಮಾಲೀಕರು ಇರಲಿಲ್ಲ. ಅವರ ತಾಯಿಗೆ ಹುಷಾರಿಲ್ಲ ಎಂದು ಊರಿಗೆ ತೆರಳಿದ್ದರು. ಗಣೇಶ್ ಎಂಬುವವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇಡ್ಲಿ, ವಡೆ, ರೈಸ್ ಬಾತ್, ಪೂರಿ ಬೆಳಗ್ಗೆ ವೇಳೆ ಸಿಕ್ಕಿದರೆ, ಸಂಜೆಗೆ ಚಿತ್ರಾನ್ನ, ಇಡ್ಲಿ-ವಡೆ, ಪಡ್ಡು ಜತೆಗೆ ಎರಡೂ ಹೊತ್ತು ಕಾಫಿ ಸಿಗುತ್ತದೆ.

Namo Satyanaraya tiffin centre, unique hotel with lesser price

ಮೂರು ಇಡ್ಲಿಗೆ 18 ರು, ವಡೆ 10, ರೈಸ್ ಬಾತ್ ಅಥವಾ ಪೂರಿಗೆ 20, ಕಾಫಿಗೆ 7, ಚಿತ್ರಾನ್ನ 20, ಇಡ್ಲಿ ಹಾಗೂ ವಡೆಗೆ 28, ಪಡ್ಡುಗೆ 20 ರುಪಾಯಿ ಬೆಲೆ. ಇನ್ನು ಎಷ್ಟು ಹೊತ್ತಿಂದ ಎಷ್ಟು ಹೊತ್ತಿನವರೆಗೆ ತೆರೆದಿರುತ್ತದೆ ಅಂತ ಕೇಳ್ತೀರಾ? ಬೆಳಗ್ಗೆ 6ರಿಂದ ಮಧ್ಯಾಹ್ನ 12.30, ಮಧ್ಯಾಹ್ನ 3.30ರಿಂದ ರಾತ್ರಿ 9. ಆದರೆ ಭಾನುವಾರ ಮಾತ್ರ ಮಧ್ಯಾಹ್ನ ರಜಾ ಇರುತ್ತದೆ.[ದ್ವಾರಕೀಶ್ ಉದ್ಘಾಟಿಸಿದ ಮುತ್ತಹಳ್ಳಿ ವೆಜ್ ಹೋಟೆಲ್ ನ ವಿಶೇಷ ಗೊತ್ತೆ?]

Namo Satyanaraya tiffin centre, unique hotel with lesser price

ಪಡ್ಡು ಇಲ್ಲಿ ತುಂಬ ಚೆನ್ನಾಗಿ ಮಾಡ್ತಾರೆ ಅನ್ನೋದು ಗ್ರಾಹಕರೇ ಕೊಟ್ಟಿರುವ ಶಹಭಾಷ್ ಗಿರಿ. ಉಳಿದದ್ದೂ ಚೆನ್ನಾಗಿರುತ್ತದೆ. ಆದರೆ ಪಡ್ಡು ಮಾತ್ರ ಸ್ವಲ್ಪ ವಿಶೇಷ. ಹೋಟೆಲ್ ಗೆ ಈ ರೀತಿ ಏಕೆ ಹೆಸರಿಟ್ಟಿದ್ದೀರಿ ಎಂದು ಕೇಳಿದರೆ ತುಂಬ ನಿರ್ಲಿಪ್ತವಾಗಿ ಉತ್ತರಿಸಿದರು ಗಣೇಶ್. "ಇದು ಮಾಲೀಕರಿಗೆ ಹೊಳೆದದ್ದು. ದೇವರಿಗೆ ನಮೋ ಅಂತೀವಲ್ಲ ಹಾಗೆ. ಇದರಲ್ಲಿ ಯಾವ ರಾಜಕೀಯ ನಾಯಕರ ಹೆಸರು ಅಂತೇನಿಲ್ಲ" ಎಂದರು.[ಉಮಾ ಥಿಯೇಟರ್ ಎದುರಿನ ಸಂತೋಷ್ ಸಾಗರ್ ಚಾಟ್ಸ್ ತಿಂದಿದ್ದೀರಾ?]

Namo Satyanaraya tiffin centre, unique hotel with lesser price

ಇನ್ನು ಬೆಲೆ ಇಷ್ಟು ಕಡಿಮೆ ಇಟ್ಟಿದ್ದೀರಲ್ಲಾ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಕೂಡ ಅಷ್ಟೇ ನಿರ್ಲಿಪ್ತವಾದ ಉತ್ತರ ಅವರದು. ಇದು ಗ್ರಾಹಕರನ್ನು ಸೆಳೆಯುವುದಕ್ಕೆ ನಾವು ಕಂಡುಕೊಂಡ ಮಾರ್ಗ. ಲಾಭ ತೀರಾ ಹೆಚ್ಚಿಗೆ ಇಟ್ಟುಕೊಳ್ಳೋದು ಬೇಡ ಎಂಬ ನಿರ್ಧಾರ ಅಷ್ಟೇ. ಮಾಲೀಕರಾದ ರಾಘವೇಂದ್ರ ಭಟ್ ಇಲ್ಲೇ ಇದ್ದಿದ್ದರೆ ಇನ್ನೂ ಚೆನ್ನಾಗಿ ವಿವರಿಸುತ್ತಿದ್ದರು ಎಂದರು. ಅಂದಹಾಗೆ ಇಲ್ಲಿ ನೀವೂ ಒಮ್ಮೆ ತಿಂಡಿ ತಿಂದು ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+