• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ನಗರ ನಮ್ಮ ಹೆಮ್ಮೆ. ಬೆಂಗಳೂರಿನಲ್ಲೊಂದು 'ಬೈಕ್‌ ಜಾಥಾ'

|

ಬೆಂಗಳೂರು, ಮಾ 25: ಅತ್ಯಂತ ಕಡಿಮೆ ಅವಧಿಯಲ್ಲಿ ಬೆಂಗಳೂರು ಒಂದು ಸಣ್ಣ ನಗರದಿಂದ ಬೃಹತ್‌ ನಗರವಾಗಿ ಬೆಳೆಯಿತು. ಇದಕ್ಕೆ ಮೂಲ ಕಾರಣವೇ ನಗರದ ಜನರು. ಇದೇ ಪ್ರೀತಿ ಮತ್ತು ಪರಿಶ್ರಮಕ್ಕಾಗಿ 'ನಮ್ಮ ಬೆಂಗಳೂರು ನಮ್ಮ ಹೆಮ್ಮೆ' ಎಂಬ ಬೈಕ್ ಜಾಥಾವನ್ನು ಶನಿವಾರ (ಮಾ 24) ಆಯೋಜಿಸಲಾಗಿತ್ತು.

ಕರ್ನಾಟಕಕ್ಕೆ ಬೆಂಗಳೂರು ನಗರ ಹೆಮ್ಮೆ ಎಂಬುದು ಹೊಸ ಸಂಗತಿಯೇನೂ ಅಲ್ಲ. ವಿಶ್ವದಲ್ಲೇ ಅತ್ಯಂತ ಡೈನಾಮಿಕ್ ನಗರ ಎಂದು ಹೆಸರಾಗಿರುವ ಬೆಂಗಳೂರು, ಕಲೆ, ಸಂಸ್ಕೃತಿ, ತಂತ್ರಜ್ಞಾನ, ಆಹಾರ, ಭಾಷೆಗಳ ತಾಣವಾಗಿದೆ. ಜನರೇ ಈ ನಗರವನ್ನು ಕಾಸ್ಮೋಪಾಲಿಟನ್‌ ಆಗಿಸಿದ್ದಾರೆ.

ಭರ್ಜರಿ ಚಪ್ಪಾಳೆ ತಟ್ಟುವ ಜನ ಯಾವ ಪಕ್ಷಕ್ಕೆ ವೋಟ್ ಹಾಕ್ತಾರೆ?

ನಾಗರಿಕರ ಪರಿಶ್ರಮವನ್ನು ಹೈಲೈಟ್ ಮಾಡುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳ ಸರಣಿಯಲ್ಲಿ ಬೈಕ್‌ ಜಾಥಾ ಕೂಡಾ ಒಂದಾಗಿದ್ದು, ದೊಮ್ಮಲೂರು ಗಣೇಶ ದೇಗುಲದಿಂದ ಆರಂಭವಾಗಿ, ಶಾಂತಿನಗರ ವಿದಾನಸಭೆ ಕ್ಷೇತ್ರದ 7ನೇ ವಾರ್ಡ್‌ ಮೂಲಕ ಸಾಗಿ ಆಸ್ಟಿನ್‌ ಟೌನ್‌ಗೆ ಜಾಥಾ ತೆರಳಿತು.

ಒಂದು ಕಾರಣಕ್ಕಾಗಿ ಸ್ನೇಹಿತರು ಒಟ್ಟಾಗುವ ಸನ್ನಿವೇಶವಿದು. ಬೆಂಗಳೂರಿನ ನಾಗರಿಕರು ಮತ್ತು ನಿವಾಸಿಗಳಿಗೆ ಇದೊಂದು ಕರೆಯಾಗಿದ್ದು, ನಗರದಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅವಕಾಶವಾಗಿದೆ. ಹಳೆಯ ಸ್ನೇಹಿತರು ಮತ್ತು ಹೊಸ ಸ್ನೇಹಿತರೊಂದಿಗೆ ಕಾಲ ಕಳೆಯುವುದಕ್ಕಾಗಿ ಇಲ್ಲಿ ಅವಕಾಶ ಇದಾಗಿದೆ ಎಂದು ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ದೊಮ್ಮಲೂರು ಗಣೇಶ ದೇಗುಲದಿಂದ ಬೆಳಗ್ಗೆ 10 ಗಂಟೆಗೆ ಆರಂಭವಾದ ಜಾಥಾ, ಆಸ್ಟಿನ್‌ ಟೌನ್‌ನ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯ ಎದುರು ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಕೆ.ಜೆ.ಜಾರ್ಜ್‌, ಗೃಹ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಬೆಂಗಳೂರು ಉಸ್ತುವಾರಿ ಸುದರ್ಶನ್‌, ಶಾಸಕ ನಾರಾಯಣಸ್ವಾಮಿ, ಹ್ಯಾರಿಸ್ ಮುಂತಾದವರು ಜಾಥಾದಲ್ಲಿ ಭಾಗವಹಿಸಿದ್ದರು.

ನಗರದ ಆಡಳಿತದ ಬಗ್ಗೆ ಜನರು ಹೊಂದಿರಬಹುದಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಜಾಥಾ ಹಮ್ಮಿಕೊಳ್ಳಲಾಗಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿಯ ಅವ್ಯವಹಾರಗಳನ್ನು ಈ ಹಿಂದೆ ಅನಾವರಣಗೊಳಿಸಿದ್ದೇವೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರವೇ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ಎಂದು ಸಚಿವ ಜಾರ್ಜ್ ಹೇಳಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Our City, Our Pride. Bike rally from Domlur to Austin town in Bengaluru organized in on Saturday March 24. The Bike Rally, part of a long series of events, is aimed at highlighting the efforts of the citizens, and the city and state government of Karnataka led by Hon’ble Chief Minister Shri Siddaramaiah, and to chalk a plan for the future.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more