Namma Metro: ಚೀನಾದಿಂದ ನಮ್ಮ ಮೆಟ್ರೋಗೆ ಚಾಲಕ ರಹಿತ ರೈಲು ಬರೋದು ಯಾವಾಗ?

ನಮ್ಮ ಮೆಟ್ರೋದಲ್ಲಿ ಮೊದಲ ಚಾಲಕ ರಹಿತ ರೈಲು ನೋಡುವ ಅವಕಾಶ ಶೀಘ್ರದಲ್ಲೇ ಸಿಗಲಿದೆ. ನಮ್ಮ ಮೆಟ್ರೋಗೆ ಬೋಗಿಗಳ ಪೂರೈಕೆಯನ್ನು ಬೇಗನೆ ಕಾರ್ಯಗತಗೊಳಿಸಲು ಬೆಂಗಳೂರು ಮೆಟ್ರೋ ಅಧಿಕಾರಿಗಳ ತಂಡ ಇತ್ತೀಚೆಗೆ ಚೀನಾಕ್ಕೆ ಪ್ರವಾಸ ಕೈಗೊಂಡ ಬೆನ್ನಲ್ಲೇ ನಮ್ಮ ಮೆಟ್ರೋಗೆ ಮೊದಲ ಚಾಲಕ ರಹಿತ ರೈಲು ಬರಲಿದೆ.

ನವೆಂಬರ್ 20ರಂದು ಚೀನಾದಿಂದ ಚಾಲಕ ರಹಿತ ರೈಲು ಹಡಗಿನಲ್ಲಿ ಭಾರತದಲ್ಲಿ ಬರಲಿದೆ, ನವೆಂಬರ್ ಅಂತ್ಯದ ವೇಳೆಗೆ ಚೆನ್ನೈನ ಬಂದರಿಗೆ ಬರಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿಗೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬರಲಿದೆ.

 Namma Metros First Driverless Train En Route from China, Arrival Expected in a Month

ಹಳದಿ ಮಾರ್ಗದಲ್ಲಿ ಸಂಚಾರ

ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಹಳದಿ ಮಾರ್ಗ ಈ ವೇಳೆಗಾಗಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಹಲವು ಕಾರಣದಿಂದ ಕಾಮಗಾರಿ ತಡವಾಗಿದೆ.

ರೀಚ್-5 ಎಲಿವೇಟೆಡ್ ಲೈನ್, 19.15 ಕಿಮೀ ಕಾಮಗಾರಿ ಚಾಲನೆಯಲ್ಲಿದೆ, ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ನಂತರ ನಮ್ಮ ಮೆಟ್ರೋ ಪ್ರಯಾಣಿಕ ಸಂಖ್ಯೆ 10 ಲಕ್ಷ ದಾಟುವ ನಿರೀಕ್ಷೆ ಮಾಡಲಾಗಿದೆ. ಹಳದಿ ಮಾರ್ಗ ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್‌ನೊಂದಿಗೆ 16 ನಿಲ್ದಾಣಗಳನ್ನು ಹೊಂದಿರುತ್ತದೆ ಮತ್ತು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ಗೆ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಹೊಂದಿರುತ್ತದೆ.

ಜನವರಿಯಲ್ಲಿ ಪ್ರಾಯೋಗಿಕ ಸಂಚಾರ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, "ಎಲ್ಲವೂ ಯೋಜಿಸಿದಂತೆ ನಡೆದರೆ, ಮೊದಲ ರೈಲು ಸೆಟ್ ನವೆಂಬರ್ 20 ರಂದು ಚೀನಾದಿಂದ ಚೆನ್ನೈಗೆ ಹೊರಡಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ರಸ್ತೆ ಮೂಲಕ ಬೆಂಗಳೂರಿಗೆ ತರಲಾಗುವುದು. ಡಿಸೆಂಬರ್ 20 ಅಥವಾ ಅದಕ್ಕೂ ಮೊದಲು ರೈಲು ಇಲ್ಲಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ನಾವು ಜನವರಿ 2024 ರಿಂದ ಮೂರು ತಿಂಗಳವರೆಗೆ ಪ್ರಾಯೋಗಿಕ ಸಂಚಾರ ನಡೆಸಬಹುದು, ಮೆಟ್ರೋ ರೈಲು ಸುರಕ್ಷತೆಗಾಗಿ ಆಯುಕ್ತರು ಒಪ್ಪಿಗೆ ನೀಡಿದ ನಂತರ ಏಪ್ರಿಲ್‌ನಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಬಹುದು" ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

12 ಕೋಚ್‌ಗಳ ಶೆಲ್‌ಗಳು 25 ದಿನಗಳ ಹಿಂದೆ ಕೋಲ್ಕತ್ತಾ ಬಳಿಯ ಟಿಟಾಗರ್ ವ್ಯಾಗನ್‌ಗೆ ಬಂದಿದ್ದು, ಅವುಗಳನ್ನು ಎರಡು ಹೊಸ ರೈಲುಗಳಾಗಿ ಸಿದ್ಧಪಡಿಸಲು ವಿವಿಧ ಸೌಲಭ್ಯಗಳನ್ನು ಅಳವಡಿಸಬೇಕಾಗುತ್ತದೆ ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಮೊದಲ ರೈಲಿನ ಆಗಮನಕ್ಕೆ ಮೊದಲಿನ ಗಡುವು ಅಕ್ಟೋಬರ್ 16 ಆಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಈ ರೈಲುಗಳು 35 ರೈಲು ಸೆಟ್‌ಗಳಿಗಾಗಿ ಮಾಡಲಾದ ಆರ್ಡರ್‌ನ ಭಾಗವಾಗಿದ್ದು, ಭವಿಷ್ಯದಲ್ಲಿ ಟಿಟಾಘರ್‌ನಿಂದ ವಿವಿಧ ಹಂತಗಳಲ್ಲಿ ಸರಬರಾಜು ಮಾಡಲಾಗುವುದು.

ಜಯದೇವ ನಿಲ್ದಾಣ ಪೂರ್ಣಗೊಂಡಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣದ ಮುಂಭಾಗ ಕಾಮಗಾರಿ ನಡೆಯುತ್ತಿದೆ. ಸಿಗ್ನಲಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊರಾಂಗಣ ಕೆಲಸಗಳು ಸಹ ಪ್ರಗತಿಯಲ್ಲಿವೆ. ಮೊದಲ ರೈಲು ಹೆಬ್ಬಗೋಡಿ ಡಿಪೋ ತಲುಪುವ ವೇಳೆಗೆ ಇದೆಲ್ಲವೂ ಸಿದ್ಧವಾಗಲಿದೆ ಎಂದು ಅಂಜುಮ್ ಪರ್ವೇಜ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+