Namma Metro: ಆರ್.ವಿ ರಸ್ತೆ-ಬೊಮ್ಮಸಂದ್ರ ಮಾರ್ಗ: ಮಹತ್ವದ ಒಪ್ಪಂದಕ್ಕೆ ಮೆಟ್ರೋ ಸಹಿ
ಬೆಂಗಳೂರು, ಡಿಸೆಂಬರ್ 10: ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ಯಾವಾಗ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಮಧ್ಯೆ ಹಳದಿ ಮಾರ್ಗಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೂರನೇಯ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದು ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ ಹಳಿದ ಮಾರ್ಗದಲ್ಲಿ ಬೊಮ್ಮಾಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ನೀರ್ಣಾಯಕ ಒಪ್ಪಂದವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಆರ್‌ಸಿಎಲ್ ಮತ್ತು ಡೆಲ್ಟಾ ಎಲೆಕ್ಟ್ರೋನಿಕ್ಸ್ ₹65 ಕೋಟಿ ಹೂಡಿಕೆಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. ಇದು ಹಳದಿ ಮಾರ್ಗದಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ನಿಲ್ದಾಣ ನಿರ್ಮಾಣ ಒಪ್ಪಂದವು ಇದು ನಮ್ಮ ಮೆಟ್ರೋ ಹಂತ-2ರ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ರೀಚ್-5ರ ಹಳದಿ ಮಾರ್ಗದ ಭಾಗವಾಗಿದೆ. ಈ ಹಳದಿ ಮಾರ್ಗವು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುಸ್ಥಿತಿ ಚಲನಶೀಲತೆ ಒದಗಿಸಲಿದೆ. ಸಂಚಾರಕ್ಕೆ ಪರಿಣಾಮಕಾರಿ ಅನುಕೂಲ ಮಾಡಿಕೊಡಲಿದೆ.
ಮುಖ್ಯವಾಗಿ ಹೊಸೂರು ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲಿದೆ. ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮವನ್ನು ಕಡಿಮೆ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನಮ್ಮ ಮೆಟ್ರೋ ಮಹತ್ವದ ಮಾರ್ಗದಲ್ಲಿ ಒಂದಾಗಿರುವ ಹಳದಿ ಮಾರ್ಗವು ಯಾವಾಗ ತೆರೆದುಕೊಳ್ಳಲಿದೆ ಎಂಬ ಕಾತರದ ನಡುವೆ, ಈ ಮಾರ್ಗಕ್ಕೆ ಸಂಬಂಧಿಸಿದಂತೆ 3ನೇ ಒಪ್ಪಂದ ಇದಾಗಿದೆ. ಈಗಾಗಲೇ BMRCL ಇನ್ಫೋಸಿಸ್ ಫೌಂಡೇಶನ್ ಜೊತೆ ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಹಾಗೂ ಬಯೋಕಾನ್ ಫೌಂಡೇಶನ್ ಜೊತೆಗೆ ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದೆ.
ಮೆಟ್ರೋಗೆ 65 ಕೋಟಿ ರೂ. ಹಸ್ತಾಂತರ
ಈ ಒಪ್ಪಂದದ ಭಾಗವಾಗಿ ನಮ್ಮ ಮೆಟ್ರೋಗೆ ಡೆಲ್ಟಾ ಕಂಪನಿಯು 65 ಕೋಟಿ ರೂ. ನೀಡಬೇಕಿದ್ದು, ಅದರಲ್ಲಿ ಈಗಾಗಲೇ 10 ಕೋಟಿ ಮೊತ್ತವನ್ನು ಪಾವತಿಸಿದೆ. ಉಳಿದ ಮೊತ್ತ ರೂ.55 ಕೋಟಿ ಸೋಮವಾರ ನೀಡಲಾಗಿದೆ. ಬಿ.ಎಂ.ಆರ್.ಸಿ.ಎಲ್ ಕರ್ನಾಟಕ ಸರ್ಕಾರದ ಅನುಮೋದನೆ ಪಡೆದ ನಂತರ 30 ವರ್ಷಗಳ ಅವಧಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕು ನೀಡಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡೆಲ್ಟಾ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಇಂಕ್, ತೈವಾನೀಸ್ ಉತ್ಪಾದನೆಸ್ ತಯಾರಿಕಾ ಕಂಪನಿಯು ಪರಿಸರ ಸುಸ್ಥಿರತೆಗೆ ಬಲವಾದ ಬದ್ಧತೆ ಹೊಂದಿದೆ. ಪರಿಸರಕ್ಕೆ ಪೂರಕವಾದ ಇಂಗಾಲ ಹೊರಸೂಸುವಿಕೆ ವಿರುದ್ಧ ಮಹತ್ವದ ಉಪಕ್ರಮ ಜಾರಿಗೆ ತಂದಿದೆ.
BMRCL ಎಂಡಿ ಹೇಳಿದ್ದೇನು?
ಒಪ್ಪಂದದ ವೇಳೆ ಮಾತನಾಡಿದ, BMRCL ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್, "ಡೆಲ್ಮಾ ಡಿಸೋಸಿಯನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆ ತಮ್ಮ ಬೆಂಬಲದೊಂದಿಗೆ ಮುಂದೆ ಬಂದಿರುವುದಕ್ಕೆ ನಮಗೆ ಅತ್ಯಂತ ಸಂತೋಷ ಉಂಟಾಗಿದೆ.
ನಮ್ಮ ಮೆಟ್ರೋ ಕಾರಿಡಾರ್‌ಗಳ ಉದ್ದಕ್ಕೂ, ನಗರದ ಮೆಟ್ರೋ ಮೂಲ ಸೌಕರ್ಯವನ್ನು ಸ್ಥಾಪಿಸಲು ಇತರ ಕಾರ್ಪೊರೇಟ್ ಸಂಸ್ಥೆಗಳು ಬಿ.ಎಂ.ಆರ್.ಸಿ.ಎಲ್ ಅನ್ನು ಕೈಜೋಡಿಸುವಂತೆ ಅವರು ಕೋರಿದರು. ಬೆಂಜಮಿನ್ ಲಿನ್-ಅಧ್ಯಕ್ಷರು ಮತ್ತು ನಿರಂಜನ್ ನಾಯಕ್-ವ್ಯವಸ್ಥಾಪಕ ನಿರ್ದೇಶಕರು, ಡೆಲ್ಟಾ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, "ಹೊಸೂರು ರಸ್ತೆಯಲ್ಲಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ಬಿ.ಎಂ.ಆರ್.ಸಿ.ಎಲ್ ಜೊತೆ ಪಾಲುದಾರಿಕೆ ಹೊಂದಿರುವುದು ಹರ್ಷದಾಯಕ.
ರೂ. 65 ಕೋಟಿ ಒಪ್ಪಂದದ ಮೂಲಬೆಂಗಳೂರಿನ ನಾಗರೀಕರಿಗೆ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಒದಗಿಸುವ ಮೂಲಕ ನಾವು ಪರಿಸರ ಸುಸ್ಥಿರತೆಯಜವಾಬ್ದಾರಿಯನ್ನು ಪೂರೈಸಲಿದ್ದೇವೆ ಎಂದರು.












Click it and Unblock the Notifications