ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರಶ್: ಪ್ರತಿ ತಿಂಗಳು 2 ರೈಲು ಸೆಟ್ ಪೂರೈಕೆ, ಗುಡ್‌ನ್ಯೂಸ್...Namma Metro
Bengaluru Metro: ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line News) ಸಂಚಾರ ನೆನ್ನೆ ಸೋಮವಾರದಿಂದ ಆರಂಭವಾಗಿದೆ. ಪ್ರಯಾಣಿಕರು ಖುಷಿಯಿಂದ ಸಂಚರಿಸಿದ್ದಾರೆ. ಸಾವಿರಾರು ಪ್ರಯಾಣಿಕರ ಜೊತೆಗೆ ಫರ್ಸ್ಟ್ ಡೇ, ಫರ್ಸ್ಟ್ ಶೋ ನಿಂದಲೇ ಹೌಸ್ ಫುಲ್! ಆಗಿದೆ. ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಬೊಮ್ಮಸಂದ್ರದ ಕಾರ್ಖಾನೆಯ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಸೇರಿದಂತೆ ಅನೇಕ ನಮ್ಮೊಂದಿಗೆ ಪ್ರಯಾಣಿಸಿದ್ದಾರೆ. ಅವರು ಈ ವಿಷಯವಾಗಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬಹುದಿನಗಳಿಂದ ಕಾಯುತ್ತಿದ್ದ ಈ ಮಾರ್ಗದಲ್ಲಿನ ಸಂಚಾರ ಆರಂಭವಾಗಿದ್ದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ತಮ್ಮ ಪ್ರಯಾಣದ ಅನುಭವ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ನಾಲ್ಕನೇ ರೈಲು ಬೆಂಗಳೂರಿಗೆ ಆಗಮಿಸುವುದು, ಪ್ರತಿ ತಿಂಗಳು ಎರಡು ರೈಲು ಸೆಟ್ ಬರುವುದು ಸೇರಿದಂತೆ ಹಲವು ವಿಷಯಗಳ ಅಪ್ಡೇಟ್ ನೀಡಿದ್ದಾರೆ.

ಆರ್‌ವಿ.ರಸ್ತೆಯಿಂದ ಬೊಮ್ಮಸಂದ್ರ ವರೆಗೆ ದೈನಂದಿನ ಪ್ರಯಾಣವು ಈ ಹಿಂದೆ ಈ ಒಂದು ಮಾರ್ಗದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 35 ನಿಮಿಷಗಳಲ್ಲಿ ತಲುಪಬಹುದು ಎಂದು ಹಲವರು ನನ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೆಟ್ರೋ ಸಾರಿಗೆಯಿಂದ ಉಳಿದ ಪ್ರಯಾಣದ ಸಮಯದಲ್ಲಿ ಅವರು ಏನು ಮಾಡುತ್ತಾರೆಂದರೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ವಿಶ್ರಾಂತಿ ಪಡೆಯುತ್ತಾರೆ. ಮಕ್ಕಳಿಗೆ ಪಾಠ ಮಾಡಲು ಸಹಾಯ ಮಾಡುವುದು, ಆರೋಗ್ಯದ ಕಡೆ ಗಮನಹರಿಸುವುದು. ಇಲ್ಲವೇ ವೃತ್ತಿಯ ಮೇಲೆ ಮತ್ತಷ್ಟು ಸಮಯ ಕೆಲಸ ಮಾಡುತ್ತಾರೆಂದು ಜನರು ತಿಳಿಸಿದ್ದಾರೆ.
ಹಲವಾರು ಪ್ರಯಾಣಿಕರು ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಸಂತೋಷದಿಂದ ಮೆಟ್ರೋದಲ್ಲಿ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗ ಸಾರ್ವಜನಿಕ ಸಾರಿಗೆಯು ಆರಾಮದಾಯಕ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತಿದ್ದರೆ, ಜನರು ಅದನ್ನು ತಮ್ಮ ಮೊದಲ ಆಯ್ಕೆಯಾಗಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ.

ಹೆಚ್ಚು ಮೆಟ್ರೋ ಸೇವೆಗಳನ್ನು ಒದಗಿಸಬೇಕೆಂಬುದು ಒಂದು ಸಾಮಾನ್ಯ ಕೋರಿಕೆಯಾಗಿತ್ತು. ಈಗಾಗಲೇ ಈ ಕೆಲಸ ಮಾಡುತ್ತಿದ್ದೇವೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಸಂಸದರು ಮಾಹಿತಿ ನೀಡಿದರು.
ಹೆಚ್ಚುವರಿ ರೈಲು ಬರೋದು ಯಾವಾಗ?
ಪಶ್ಚಿಮ ಬಂಗಾರದಲ್ಲಿರುವ ರೈಲು ಪೂರೈಕೆ ಕಂಪನಿ ಟಿಟಾಗಢ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಾನು ಮಾತನಾಡಿದ್ದೇನೆ. ಮುಂದಿನ ಅಕ್ಟೋಬರ್‌ನಿಂದ ಪ್ರತಿ ತಿಂಗಳು ಎರಡು ಹೊಸ ಡ್ರೈವರ್‌ಲೆಸ್ಟ್ ಮೆಟ್ರೋ ರೈಲು ಸೆಟ್‌ಗಳನ್ನು ಬೆಂಗಳೂರಿಗೆ ತಲುಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇದೇ ಆಗಸ್ಟ್ ತಿಂಗಳ ಅಂತ್ಯಕ್ಕೆ ನಾಲ್ಕನೇ ರೈಲು ಬೆಂಗಳೂರಿಗೆ ಆಗಮಿಸಲಿದೆ. ಈ ಮಾರ್ಗದಲ್ಲಿ ಶೀಘ್ರವೇ ಹೆಚ್ಚುವರಿ ರೈಲಿನ ಸೇವೆ ಆರಂಭವಾಗಲಿದೆ ಎಂದು ಸಂಸದರು ದೃಢಪಡಿಸಿದ್ದಾರೆ.
ಆರ್.ವಿ. ರಸ್ತೆ ನಿಲ್ದಾಣದಲ್ಲಿ ಜನಸಂದಣಿಯನ್ನು ಗಮನಿಸಿ, ಉತ್ತಮ ಪ್ರಯಾಣಿಕರ ಸಂಚಾರಕ್ಕಾಗಿ ತಕ್ಷಣವೇ ಸ್ಟೀಲ್ ಬ್ಯಾರಿಕೇಡ್‌ಗಳನ್ನು (ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆ ಬದಲಾಗಿ ಬ್ಯಾರಿಕೇಡ್) ಅಳವಡಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಸಿಗಲಿದೆ ಎಂದರು.
ನೆನ್ನೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇಂತಹ ಘಟನೆಗಳು ನಡೆದಾಗ ಪ್ಲಾಟ್‌ಫಾರ್ಮ್ ಸ್ಕ್ರೀನ್ ವ್ಯವಸ್ಥೇ ಅಳವಡಿಕೆ ವಿಚಾರ ಮುನ್ನೆಲೆಗೆ ಬರುತ್ತದೆ. ಇದೀಗ ಯೆಲ್ಲೋ ಲೈನ್‌ನಲ್ಲಿ ಪ್ರಯಾಣಿಕರ ಪ್ರಯಾಣಿಕರು ಸಂಸದರ ಮುಂದೆ ಸುರಕ್ಷತೆಗಾಗಿ, ಸ್ಟೀಲ್ ಬ್ಯಾರಿಕೇಡ್ (ಪಿಎಸ್‌ಡಿ) ಬದಲಾಗಿ ಅಳವಡಿಕೆಗೆಸ ಸಂಸದರ ಮುಂದೆ ಮನವಿ ಮಾಡಿದ್ದಾರೆ.
ಸದ್ಯ 19 ಕಿಲೋ ಮೀಟರ್ ಹಳದಿ ಮಾರ್ಗದ ಸಂಚಾರದಿಂದಾಗಿ ಜನರಲ್ಲಿ ನಿರಾಳತೆ ಮತ್ತು ಸಂತೋಷ ನೋಡುವುದು ವೈಯಕ್ತಿಕವಾಗಿಯೂ ನನಗೆ ಸಂತಸ ತಂದಿದೆ. ಜನರಲ್ಲಿನ ಸಂತೃಪ್ತಿ ನಿಜಕ್ಕೂ ಪ್ರೇರಣಾದಾಯಿಯಾಗಿದೆ. ಜನರ ಸ್ಪಂದನೆ ಗಮನಿಸಿದರೆ, ಈ ರೀತಿಯ ಕಾರ್ಯಗಳು ನಮ್ಮಲ್ಲಿಯೂ ಇನ್ನಷ್ಟು ಹುಮ್ಮಸ್ಸು ತರಲಿವೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.












Click it and Unblock the Notifications