Namma Metro: ಈ ನಮ್ಮ ಮೆಟ್ರೋ ಮಾರ್ಗ 3 ಲಕ್ಷ ಜನರಿಗೆ ಉಪಯೋಗ, ನಿಲ್ದಾಣಗಳು

ಬೆಂಗಳೂರು, ನವೆಂಬರ್ 14: ನಮ್ಮ ಮೆಟ್ರೋ ಉದ್ಯಾನ ನಗರಿ ಬೆಂಗಳೂರು ಜನರ ಜೀವನಾಡಿಯಾಗುತ್ತಿದೆ. ನಗರದ ಮತ್ತೊಂದು ಬಹುನಿರೀಕ್ಷಿತ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತಯಾರಿ ನಡೆಯುತ್ತಿದೆ. 2025ರ ಆರಂಭದಲ್ಲಿ ಈ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ಮಾರ್ಗದ ನಿಲ್ದಾಣಗಳು, ವಿಶೇಷತೆಗಳ ವಿವರಗಳು ಇಲ್ಲಿವೆ.

ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ಪರಿಶೀಲನೆ ನಡೆಸಿ, ರೈಲುಗಳು ವಾಣಿಜ್ಯ ಸಂಚಾರಕ್ಕೆ ಅಂತಿಮ ಒಪ್ಪಿಗೆ ನೀಡಬೇಕಿದೆ. 2025ರಲ್ಲಿ ರೈಲು ಸಂಚಾರ ಆರಂಭವಾಗಲಿದೆ.

Namma Metro Yellow Line RV Road Bommasandra Station List

18.82 ಕಿ. ಮೀ. ಉದ್ದದ ಈ ಹಳದಿ ನಮ್ಮ ಮೆಟ್ರೋ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಐಟಿ-ಬಿಟಿಯ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 3.5 ಲಕ್ಷ ಜನರಿಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಅನುಕೂಲವಾಗಲಿದೆ. ಅಲ್ಲದೇ ಈ ಭಾಗದ ಸುತ್ತಮುತ್ತಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.

ಕಾಮಗಾರಿ, ನಿಲ್ದಾಣಗಳ ಮಾಹಿತಿ: ಬನಶಂಕರಿ ಸಮೀಪದ ರಾಷ್ಟೀಯ ವಿದ್ಯಾಲಯ (ಆರ್. ವಿ. ರಸ್ತೆ) ನಿಲ್ದಾಣದಿಂದ ಬೊಮ್ಮಸಂದ್ರ ತನಕ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ. ಎಲೆಕ್ಟ್ರಾನಿಕ್ ಸಿಟಿ-1 (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ ನಿಲ್ದಾಣಗಳು ನಗರದ ಐಟಿ ಹಬ್ ಸಂಪರ್ಕಿಸುತ್ತವೆ.

ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡುವುದು ಈ ಮಾರ್ಗದ ವಿಶೇಷತೆಯಾಗಿದೆ. ಜೂನ್‌ನಿಂದ ಮೂರು ತಿಂಗಳ ಕಾಲ ವಿವಿಧ ವಿಭಾಗದ ತಜ್ಞರು ಪ್ರಾಯೋಗಿಕ ಸಂಚಾರ ನಡೆಸಿದ್ದಾರೆ. ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ತಂಡ ಸಹ ಈ ಮಾರ್ಗದಲ್ಲಿ ಸಂಚಾರ ನಡೆಸಿ ಪರಿಶೀಲಿಸಿದ್ದಾರೆ.

2017ರಲ್ಲಿ ಈ ಮಾರ್ಗದ ಕಾಮಗಾರಿ ಆರಂಭಿಸಲಾಗಿದ್ದು, ಒಟ್ಟು16 ನಿಲ್ದಾಣಗಳಿವೆ. ಈ ಮಾರ್ಗದ ಒಟ್ಟು ವೆಚ್ಚ 2,869 ಕೋಟಿ ರೂ.ಗಳು. ಮಾರ್ಗದ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ರೈಲ್ವೆ ಸುರಕ್ಷತೆ ದಕ್ಷಿಣ ವಲಯದ ಆಯುಕ್ತ ಅನಂತ್ ಮಧುಕರ್ ಚೌಧರಿ ಮತ್ತು ತಂಡ ಡಿಸೆಂಬರ್‌ನಲ್ಲಿ ಆರ್‌. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಅಂತಿಮ ಒಪ್ಪಿಗೆ ನೀಡಬೇಕಿದೆ.

ರೈಲುಗಳ ಓಡಾಟಕ್ಕೆ ರೈಲು ಬೋಗಿಯ ಕೊರತೆ ಪ್ರಮುಖ ಕಾರಣವಾಗಿದೆ. ಸದ್ಯ 6 ಬೋಗಿಯ ಒಂದು ಕೋಚ್‌ ಮಾತ್ರ ಇದ್ದು, ಇದನ್ನು ಪ್ರಾಯೋಗಿಕ ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್‌ನಲ್ಲಿ ಇನ್ನೂ ಎರಡು ಕೋಚ್‌ಗಳು ಬೆಂಗಳೂರು ನಗರಕ್ಕೆ ಬರಲಿದ್ದು, ಈ ಮಾರ್ಗದ ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.

14 ಕೋಚ್‌ಗಳನ್ನು ಒಟ್ಟುಕೊಂಡು 15 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಮೂರು ತಿಂಗಳುಗಳಲ್ಲಿ ಎಲ್ಲಾ ಕೋಚ್‌ಗಳು ಬೆಂಗಳೂರು ನಗರಕ್ಕೆ ಬಂದು ಸೇರಲಿದ್ದು, ಬಳಿಕ ಸಂಚಾರ ಆರಂಭಿಸಲು ತಯಾರಿಯನ್ನು ಮಾಡಲಾಗುತ್ತದೆ.

ಬೆಂಗಳೂರು ನಗರದ ಅತಿ ಎತ್ತರದ ಇಂಟರ್ ಚೇಂಜ್ ನಿಲ್ದಾಣ ಜಯದೇವದಲ್ಲಿ ನಿರ್ಮಾಣವಾಗಿದೆ. ರಾಗಿಗುಡ್ಡ ಮತ್ತು ಸಿಲ್ಕ್ ಬೋರ್ಡ್ ಸಂಪರ್ಕಿಸುವ ಡಬಲ್ ಡೆಕ್ಕರ್ ಫ್ಲೈ ಓವರ್ ಈ ಯೋಜನೆಯ ಇನ್ನೊಂದು ವಿಶೇಷ ಫ್ಲೈ ಓವರ್‌ನಲ್ಲಿ ಈಗಾಗಲೇ ಒಂದು ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಆರಂಭಿಸಲಾಗಿದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ನಗರದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 3.5 ಲಕ್ಷ ಏರಿಕೆಯಾಗಲಿದೆ. ಆರಂಭದಲ್ಲಿ ಅರ್ಧ ಗಂಟೆಗೆ ಒಂದು ರೈಲು ಸಂಚಾರ ನಡೆಸಿದರೂ 50 ಸಾವಿರ ಪ್ರಯಾಣಿಕರು ಸಂಚಾರ ನಡೆಸುವ ನಿರೀಕ್ಷೆ ಇದೆ. 2025ರ ಆರಂಭದಲ್ಲಿಯೇ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ತಯಾರಿ ಆರಂಭಿಸಿದೆ.

ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಆರ್. ವಿ. ರಸ್ತೆ, ರಾಗಿಗುಡ್ಡ, ಜಯದೇವ ಬಿಟಿಎಂ ಲೇಔಟ್, ಸಿಲ್ಕ್‌ ಬೋರ್ಡ್‌, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಬಿರಿಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ-1, ಎಲೆಕ್ಟ್ರಾನಿಕ್ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ನಿಲ್ದಾಣಗಳಿವೆ.

ಈ ಮಾರ್ಗದಲ್ಲಿ ಆರ್. ವಿ. ರಸ್ತೆ ಇಂಟರ್ ಚೇಂಜ್ ನಿಲ್ದಾಣ ಹಸಿರು ಮಾರ್ಗಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಜಯದೇವ ನಿಲ್ದಾಣ ಗುಲಾಬಿ ಮಾರ್ಗಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಸಿಲ್ಕ್‌ ಬೋರ್ಡ್ ನಿಲ್ದಾಣದ ಮೂಲಕ ನೇರಳೆ ಮಾರ್ಗಕ್ಕೆ ಸಂಪರ್ಕವನ್ನು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+