Namma Metro Yellow Line: ಸಮುದ್ರ ಮಾರ್ಗದಲ್ಲಿ 'ಮೊದಲ ಸೆಟ್ ಮೆಟ್ರೋ ಬೋಗಿ' ರವಾನೆ: ಚೀನಿ ಕಂಪನಿ

ಬೆಂಗಳೂರು, ಫೆಬ್ರವರಿ 02: ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಹಳದಿ ಮಾರ್ಗ ಉದ್ಘಾಟನೆಗೆ ಸಜ್ಜಾಗಿದೆ. ಇದರೊಂದಿಗೆ ಇನ್ನೂ ಕೆಲವು ಮಾರ್ಗಗಳಿಗೆ ಬಳಕೆ ಆಗಬಹುದಾದ ಚೀನಾ ನಿರ್ಮಿತ ಮೆಟ್ರೋ ಬೋಗಿಗಳು ಆಗಮಿಸುತ್ತಿವೆ. ಹಲವು ವಿಳಂಬಗಳ ನಂತರ ಚೀನಿ ಕಂಪನಿ ಮೊದಲ ಸೆಟ್‌ ರೈಲು ಬೋಗಿಗಳನ್ನು ರವಾನಿಸಿದ್ದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಹೌದು, ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ ಮೆಟ್ರೋ (ಹಳದಿ ಲೈನ್) ಗಾಗಿ ಮೊದಲ ಆರು ಬೋಗಿಗಳ ರೈಲನ್ನು ಚೀನಾದಿಂದ ಭಾರತಕ್ಕೆ ಕಳುಹಿಸುತ್ತಿದೆ. ಈ ಮೊದಲ ಸೆಟ್ ರೈಲುಗಳು ಸಮುದ್ರದ ಮಾರ್ಗವಾಗಿ ರವಾನಿಸಲಾಗಿದೆ ಎಂದು ನಮ್ಮ ಮೆಟ್ರೋ ಜತೆ ಒಪ್ಪಂದ ಮಾಡಿಕೊಂಡ ಚೀನಾ ಕಂಪನಿ ಅಧಿಕೃತ ದೃಢೀಕರಣ ಮಾಡಿದೆ.

Namma Metro Yellow Line: China Company Sent 1st Set Metro Coaches Through Sea Route

ಸಮುದ ಮಾಗವಾಗಿ ಬರುತ್ತಿರುವ ಈ ಮೆಟ್ರೋ ಬೋಗಿಗಳು ಮೊದಲು ಚೆನ್ನೈಗೆ ತೆರಳುತ್ತವೆ. ನಂತರ ಅಲ್ಲಿಂದ ರಾಜಧಾನಿಗೆ ಬರಲಿವೆ ಎಂದು 'ದಿ ಹಿಂದೂ' ವರದಿ ಮಾಡಿದೆ. ಕಳೆದ ಜನವರಿ 31 ರಂದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಗೆ ಮೆಟ್ರೋ ಕೋಚ್ ತಲುಪಿಸಲಾಗುತ್ತಿದೆ ಎಂದು ಚೀನಾದ CRRC ನಾನ್ಜಿಂಗ್ ಪುಜೆನ್ ಕಂಪನಿಯು ವಿಡಿಯೋವೊಂದನ್ನು ಹಂಚಿಕೊಂಡಿತ್ತು.

ಚೆನ್ನೈನಿಂದ ರಸ್ತೆ ಮೂಲಕ ರಾಜಧಾನಿಗೆ

ಈ ಬೋಗಿಗಳು ಫೆಬ್ರವರಿ ಮಧ್ಯದಿಂದ ಅಂತ್ಯದ ವೇಳೆಗೆ ಚೆನ್ನೈ ಬಂದರಿಗೆ ಆಗಮಿಸುವ ಸಾಧ್ಯತೆ ಇದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಲಿವೆ. ಈ ವೇಳೆ ಅವುಗಳನ್ನು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

BMRCL ಜತೆ ಚೀನಿ ಕಂಪನಿಯು 2019 ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ 216 ಮೆಟ್ರೋ ಕೋಚ್‌ಗಳನ್ನು ಪೂರೈಸಲು ₹1,578 ಕೋಟಿ ಮೌಲ್ಯದ ಒಪ್ಪಂದಕ್ಕೆ ಉಭಯ ಕಂಪನಿಗಳು ಸಹಿ ಹಾಕಿವೆ. ಕೋವಿಡ್ ಹಾಗೂ ಭಾರತದಲ್ಲಿ ಕೋಚ್ ಉತ್ಪಾದನಾ ಘಟಕ ಸ್ಥಾಪಿಸದ ಕಾರಣ ನಿಗದಿತ ಸಮಯಕ್ಕೆ ಬೋಗಿ ಪೂರೈಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಎಲ್ಲವು ವಿಳಂಬವಾಗಿತ್ತು.

Namma Metro Yellow Line: China Company Sent 1st Set Metro Coaches Through Sea Route

ಬೋಗಿ ರವಾನೆ: ಮೆಟ್ರೋ ಅಧಿಕಾರಿಗಳ ಚೀನಾ ಭೇಟಿ

ಕಂಪನಿಯು ಮೂಲ ಮಾದರಿಯ ಆರು-ಕೋಚ್ ರೈಲುಗಳ ಆರಂಭಿಕ ಸೆಟ್‌ಗಳನ್ನು ಒದಗಿಸುತ್ತಿದೆ. ಮೊದಲ ಸೆಟ್ ರವಾನಿಸಿತ್ತು. ಉಳಿದ ಕೋಚ್‌ಗಳನ್ನು ಹಂತ ಹಂತವಾಗಿ BMRCL ಗೆ ತಲುಪಿಸುವುದಾಗಿ ಚೀನಿ ಕಂಪನಿ ತಿಳಿಸಿದೆ. ಬೋಗಿಗಳ ಸಾಗಣೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಚೀನಾಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

6 ತಿಂಗಳಲ್ಲಿ ಹಳದಿ ಮಾರ್ಗ ಕಾರ್ಯಾರಂಭ?

ನಗರದ ಆರ್.ವಿ. ರಸ್ತೆ ಯಿಂದ ಬೊಮ್ಮಸಂದ್ರ ವರೆಗೆ ಮೆಟ್ರೋ ಹಳದಿ ಲೈನ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಲ್ಲಿ ಪ್ರಾಯೋಗಿಕ ಸಂಚಾರವು ಬೋಗಿಗಳು ಬಂದ ಬಳಿಕ ನಡೆಯಲಿದೆ. ಒಟ್ಟಾರೆ ಈ ಮಾರ್ಗವು ಮುಂದಿನ ಆರು ತಿಂಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆಗಳು ಇವೆ.

BMRCL ನೊಂದಿಗೆ ಒಪ್ಪಂದದ ನಿಯಮಗಳನ್ನು ಅನುಸರಿಸಲು, ಚೀನಾದ ಕಂಪನಿಯು ಬೋಗಿಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಟಿಟಾಗರ್ ರೈಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಕೋಲ್ಕತ್ತಾ ಬಳಿಯ ಉತ್ತರ ಪಾರದಲ್ಲಿರುವ ಟಿಟಾಗಢ ರೈಲಿನ ವ್ಯಾಗನ್ ಉತ್ಪಾದನಾ ಘಟಕದಲ್ಲಿ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು.

ಒಟ್ಟಾರೆಯಾಗಿ ನಮ್ಮ ಮೆಟ್ರೋ ಹಳದಿ ಮಾರ್ಗವು ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ ಸಾರಿಗೆ ನೀಡುವ ಮೂಲಕ ಟ್ರಾಫಿಕ್ ಕಡಿಮೆಗೊಳಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+