RV Road-Bommasandra Metro Line: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 4ನೇ ರೈಲು ಆಗಮನದ ಅಪ್ಡೇಟ್ಸ್
ಬೆಂಗಳೂರು, ಜುಲೈ 31: ಬೆಂಗಳೂರು ಜನರ ಬಹುನಿರೀಕ್ಷೆಯ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ, ರೈಲುಗಳ ಪೂರೈಕೆಯಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈಗಾಗಲೇ ಮೂರು ರೈಲುಗಳು ಸಂಚಾರಕ್ಕೆ ಸಿದ್ಧವಾಗಿವೆ. ಈ ಮಧ್ಯೆ ವಿಳಂಬವಾದರೂ ಸಹಿತ ನಾಲ್ಕನೇ ರೈಲುಗಳ ಪೂರೈಕೆ ಶುರುವಾಗಿದೆ. ಹಾಗಾದರೆ ಆಗಸ್ಟ್ 15ರಂದು ಈ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ (RV Road-Bommasandra Metro Line) ತೆರೆಯುತ್ತಾ. ಇಲ್ಲ ಸೆಪ್ಟಂಬರ್‌ವರೆಗೆ ಮತ್ತೆ ಮುಂದೂಡಿಕೆ ಆಗುತ್ತಾ?
ಪಶ್ಚಿಮ ಬಂಗಾಳದಲ್ಲಿರುವ ಟಿಟಾಗರ್ ಮೆಟ್ರೋ ರೈಲು ಉತ್ಪಾದನಾ ಘಟಕದಿಂದ ರೈಲು ಪೂರೈಕೆ ಈವರೆಗೆ ವಿಳಂಬವಾಗಿತ್ತು. ಇದೀಗ ಒಪ್ಪಂದದಂತೆ ಸೋಮವಾರ ಹಾಗೂ ಮಂಗಳವಾರ ರಾತ್ರಿ ನಾಲ್ಕನೇ ಡ್ರೈವರ್‌ಲೆಸ್ ಮೆಟ್ರೋ ಬೋಗಿಗಳನ್ನು ರವಾನಿಸಿದೆ. ಅಲ್ಲಿಂದ ಪ್ರಯಾಣ ಆರಂಭವಾಗಿದೆ ಎಂದು ಟಿಟಾಗಢ ರೈಲು ವ್ಯವಸ್ಥೆ ಲಿಮಿಟೆಡ್ (TRSL) ಮುಖ್ಯಸ್ಥರು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ತಿಳಿಸಿದ್ದಾರೆ.

ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಆರ್‌ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗವು 19.15 ಕಿಮೀ. ಇದ್ದು, ಈ ಮಾರ್ಗದ ಕಾರ್ಯಾಚರಣೆ ಆರಂಭಕ್ಕೆ ರೈಲುಗಳು ಅಗತ್ಯವಾಗಿದೆ. ಸದ್ಯ ನಾಲ್ಕನೇ ರೈಲಿನ ಬೋಗಿಗಳು ಮಳೆ ಹಾಗೂ ಇತರ ಕಾರಣದಿಂದ ರವಾನಿಸುವುದು ವಿಳಂಬವಾಗಿದೆ. ಒಟ್ಟು ಆರು ಬೋಗಿಗಳನ್ನು ಹೊತ್ತ ಲಾರಿಯು ಬೆಂಗಳೂರಿನತ್ತ ಬರುತ್ತಿದೆ. ಇವೆಲ್ಲವು ಚಾಲಕ ರಹಿತ ಬೋಗಿಗಳಾಗಿವೆ.
ಬೆಂಗಳೂರು ತುಲುಪುವುದು, ಮಾರ್ಗ ಕಾರ್ಯಚರಣೆ ಯಾವಾಗ?
ನಾಲ್ಕನೇ ರೈಲು ಸೆಟ್ ಮುಂದಿನ ಎರಡು ವಾರಗಳಲ್ಲಿ ರಾಜಧಾನಿಯ ಮೆಟ್ರೋ ಡಿಪೋ ತಲುಪಲಿವೆ. ನಡುವೆ ಮಳೆ, ರಸ್ತೆ ಸಮಸ್ಯೆ ಎದುರಾದರೆ ಎರಡು ದಿನ ತಡವಾಗಬಹುದು. ಮೆಟ್ರೋ ಕೋಚ್ ಭಾರದ ಆಧಾರದಲ್ಲಿ ಲಾರಿಗಳು ನಿಗದಿತ ವೇಗದಲ್ಲಿ ಮಾತ್ರ ಚಲಿಸುತ್ತವೆ. ಸಂಚಾರ ದಟ್ಟಣೆ ಜೊತೆಗೆ ಸಾಗಿಬರುವುದರಿಂದ ಒಂದೆರಡು ದಿನ ಹೆಚ್ಚು ಕಡಿಮೆ ಆಗುವ ನಿರೀಕ್ಷೆ ಇದೆ.
ಎರಡು ವಾರಗಳ ಬಳಿಕ ಬಂದ ಮೇಲೆ ಬೋಗಿಗಳನ್ನು ಜೋಡಿಸಿ ಹಳಿಗೆ ಇಳಿಸಲಾಗುತ್ತದೆ. ಅಲ್ಲಿಂದ ಎರಡು ವಾರಗಳ ತಪಾಸಣೆ ಕೈಗೊಲಾಗುತ್ತದೆ. ಚಾಲಕ ರಹಿತ ರೈಲು ಆಗಿರುವ ಕಾರಣ ಹೆಚ್ಚಿನ ಪರೀಕ್ಷೆಗಳಿಗೆ ಈ ರೈಲು ಬೋಗಿಗಳು ಒಳಪಡುತ್ತವೆ.
4ನೇ ರೈಲು ಸಹಿತ ಕಾಯಾಚರಣೆ ಸೆಪ್ಟಂಬರ್‌ಗೆ?
ಆಗಸ್ಟ್ ಮಧ್ಯ ಭಾಗದಲ್ಲಿ ಅಂದರೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಹಳದಿ ಮಾರ್ಗ ತೆರೆಯಲಾಗುತ್ತದೆ ಎಂದು ಹೇಳಲಾಗಿತ್ತು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಮಾರ್ಗ ತಪಾಸಣೆ ಮಾಡಿ ಪರಿಶೀಲಿಸಿದ್ದಾರೆ. ಇದರ ವರದಿ ಬರುತ್ತಿದ್ದಂತೆ ಸದ್ಯಕ್ಕೆ 20 ನಿಮಿಷಗಳಿಗೊಮ್ಮೆ ಮೂರು ರೈಲು ಸಂಚರಿಸುವ ನಿರೀಕ್ಷೆ ಇದೆ. ಅದಕ್ಕೆ ನಾಲ್ಕನೇ ರೈಲು ಸಮೇತ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ. ಈ ಮಾರ್ಗ ಸೆಪ್ಟಂಬರ್ ಕೊನೆ ವಾರದ ಸಾರ್ವಜನಿಕರಿಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ನಮ್ಮ ಮೆಟ್ರೋ ಚೀನಾದ ಟಿಆರ್‌ಎಸ್‌ಎಲ್ ಜೊತೆಗೆ ಬೋಗಿ ಉತ್ಪಾದಿಸಿ ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಆ ಕಂಪನಿ ಜೊತೆಗಿನ ಒಪ್ಪಂದದಡಿ ಟಿಟಾಗಢ ಕಂಪನಿಯು ಪಶ್ಚಿಮ ಬಂಗಾಳದ ತನ್ನ ಘಟಕದಲ್ಲಿ ರೈಲು ಉತ್ಪಾದಿಸುತ್ತದೆ. ಒಟ್ಟು 36 ರೈಲು ಸೆಟ್‌ಗಳನ್ನು ಪೂರೈಸಬೇಕಿದೆ. ಅದರಲ್ಲಿ 15 ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಸಂಚರಿಸಲಿವೆ.












Click it and Unblock the Notifications