ಬೆಂಗಳೂರು: ಮೆಟ್ರೋ ಹಳದಿ ಲೈನ್ ಎಲ್ಲಿಂದ ಎಲ್ಲಿಗೆ? ಯಾವಾಗ ಸೇವೆ ಆರಂಭ?
ಬೆಂಗಳೂರು ಆಗಸ್ಟ್ 24: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಹಾಗೂ ಜನರಿಗೆ ವೇಗದ ಸುರಕ್ಷಿತ ಸಾರಿಗೆ ಸೇವೆ ನೀಡುವ ಉದ್ದೇಶದಿಂದ ಆರಂಭಿಸಿರುವ ಬೊಮ್ಮಸಂದ್ರದಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ವರೆಗೆ ನಮ್ಮ ಮೆಟ್ರೋ 'ಹಳದಿ ಲೈನ್' ಮೊದಲ ಹಂತದ ಸೇವೆಯು ಮುಂದಿನ ವರ್ಷ 2023ರ ಜೂನ್ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.
ಡೆಲಿವರಿ ಕೆಲಸಗಳಲ್ಲಿ ದೈನಂದಿನ ಕನಿಷ್ಠ ಗ್ಯಾರಂಟಿ ಮತ್ತು ವಾರದ ಪ್ರೋತ್ಸಾಹ ಧನನೊಂದಿಗೆ 30,000 ವರೆಗೆ ಗಳಿಸಿ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು, ಬೊಮ್ಮಸಂದ್ರದಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ವರೆಗೆ ನಮ್ಮ ಮೆಟ್ರೋ 'ಹಳದಿ ಲೈನ್'ಯ ಸೇವೆ ಜೂನ್ ನಲ್ಲಿ ಆರಂಭವಾದರೆ, ಡಿಸೆಂಬರ್ 2023ರ ಹೊತ್ತಿಗೆ ಇದೇ 'ಹಳದಿ ಲೈನ್'ಯ ಆರ್‌ವಿ ರಸ್ತೆವರೆಗಿನ ಎರಡನೇ ಹಂತ ಸೇವೆ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಿಎಂಆರ್‌ಸಿಎಲ್ ಈ ಮೊದಲು 'ಹಳದಿ ಲೈನ್'ಯ ಸಂಪೂರ್ಣ ಕಾಮಗಾರಿಯನ್ನು 2021ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಸಮಯ ನಿಗದಿ ಮಾಡಿಕೊಂಡಿದ್ದರು. ನಂತರ ಅದು ಡಿಸೆಂಬರ್ 2022ಕ್ಕೆ ವಿಸ್ತರಿಸಲಾಯಿತು. ಗುತ್ತಿಗೆದಾರರಿಂದ ರೋಲಿಂಗ್ ಸ್ಟಾಕ್ ಪಡೆಯುವಲ್ಲಿ ಸಾಕಷ್ಟು ವಿಳಂಬವಾದ ಹಿನ್ನೆಲೆಯಲ್ಲಿ ಇದೀಗ ಜೂನ್ 2023ರ ವೇಳೆಗೆ ಹಳದಿ ಲೈನ್ ಮೊದಲ ಹಂತ ಗುಡುವು ಪಡೆದಿದೆ. ಸದ್ಯ ಜೂನ್‌ನಿಂದ ಈ ಭಾಗ ಜನರು ಮೆಟ್ರೋ ಸೇವೆ ಪಡೆಯುವುದು ಬಹುತೇಕ ನಿಶ್ಚಯವಾಗಿದೆ.

ಮೆಟ್ರೋ ಕೋಚ್ ಪೂರೈಸದ ಕಂಪನಿ
2019ರ ಡಿಸೆಂಬರ್‌ನಲ್ಲಿ ಚೈನ್ ಮೂಲದ ಕಂಪನಿಯಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿ. ಗೆ 216 ಕೋಚ್‌ಗಳ ಗುತ್ತಿಗೆಯನ್ನು ನೀಡಲಾಗಿದೆ. ಅದು ಮಾತಿನಂತೆ ಒಟ್ಟು 173 ವಾರಗಳಲ್ಲಿ ಮೆಟ್ರೋ ರೈಲ್ ಕೋಚ್‌ಗಳನ್ನು ಪೂರೈಸಬೇಕಾಗಿತ್ತು. ಆದರೆ ಪದೇ ಪದೆ ಕಂಪನಿ ವಿಳಂಬ ಧೋರಣೆಯಿಂದಾಗಿ ಬಿಎಂಆರ್‌ಸಿಎಲ್ ಅನೇಕ ಶೋಕಾಸ್ ಎಚ್ಚರಿಕೆಗಳನ್ನು ಕಳುಹಿಸಿತಾದರೂ ಈವರೆಗೆ ಒಂದೇ ಒಂದು ಕೋಚ್ ಬಂದಿಲ್ಲ ಎನ್ನಲಾಗಿದೆ.
ಈ ಕಾರಣದಿಂದಾಗಿ ಕೋಲ್ಕತ್ತಾ ಮೂಲದ ವ್ಯಾಪಾರಿಗಳಾದ ಟಿಟಾಗರ್ ವ್ಯಾಗನ್‌ಗಳ ಸಹಯೋಗದಲ್ಲಿ ಭಾರತದಲ್ಲಿ ಮೆಟ್ರೋ ಕೋಚ್‌ಗಳನ್ನು ನಿರ್ಮಿಸಲು ಸಿಆರ್‌ಸಿಸಿ (ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್ ಕಾರ್ಪೋರೇಷನ್) ಜತೆ ಇತ್ತೀಚೆಗೆ ಅಧಿಕೃತ ಮಾತುಕತೆ ನಡೆಸಿ ಅಂತಿಮಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

204 ಕೋಚ್ ನೀಡಲಿರುವ ಸಿಆರ್‌ಸಿಸಿಗೆ
ಉದ್ದೇಶದಂತೆ ಕಾಮಗಾರಿ ಪೂರ್ಣಗೊಳ್ಳದೇ ವಿಳಂಬವಾಗಿದೆ. ಇದಕ್ಕೆ ಕೊರೋನಾ ಸಾಂಕ್ರಾಮಿಕ ರೋಗದ ಪಿಡುಗು, ಲಾಕ್‌ಡೌ್‌ನಂತಹ ಸರ್ಕಾರದ ಕಠಿಣ ಕ್ರಮಗಳು, ಇದರಿಂದ ಕಾರ್ಮಿಕರ ಕೊರತೆ, ನಿಧಾನಗತಿ ಕಾರ್ಯ, ವಿದೇಶಿ ನೇರ ಹೂಡಿಕೆಗೆ ತೊಂದರೆ ಮತ್ತು ಹೂಡಿಕೆ ನಿಯಂತ್ರಿಸುವ ನಿಯಮಗಳ, ಭಾರತ ಚೀನಾ ನಡುವಿನ ಬಿಕ್ಕಟ್ಟುಗಳೂ, ಕೆಲವು ನಿರ್ಭಂಧಗಳು ಸಹ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿವೆ.
ಸಿಆರ್‌ಸಿಸಿ (ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್ ಕಾರ್ಪೋರೇಷನ್)ಕಂಪನಿಯು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ಗುತ್ತಿಗೆ ಆಧಾರದ ಮೇಲೆ 204 ಕೋಚ್ ಗಳನ್ನು ತಯಾರಿಸಲು 184 ಕೋಟಿ ರೂಪಾಯಿ ಒಪ್ಪಂದದ ಆದೇಶವನ್ನು ಸ್ವೀಕರಿಸಿದೆ ಎಂದು ಮೆಟ್ರೋ ಅಧಿಕಾರಗಳು ವಿವರಿಸಿದ್ದಾರೆ.

'ಹಳದಿ ಲೈನ್' ನಲ್ಲಿ 15ರೈಲು ಸಂಚಾರ
ಬಿಎಂಆರ್‌ಸಿಎಲ್‌ಗೆ ಮುಂದೆ ಬರಲಿರುವ 216 ಕೋಚ್‌ಗಳಲ್ಲಿ 126 ಕೋಚ್‌ಗಳನ್ನು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ 21ಕೋಚ್‌ಗಳು ಆರು ಬೋಗಿಗಳ ರೈಲುಗಳು ಆಗಿರಲಿವೆ. 19 ಕಿಲೋ ಮೀಟರ್ 'ಹಳದಿ ಲೈನ್ ' ಎಲೆಕ್ಟ್ರಾನಿಕ್ಸ ಸಿಟಿ ಮೆಟ್ರೋಗೆ ಆರು ಬೋಗಿಗಳು ಇರುವ 15 ರೈಲುಗಳು ಸಂಚಾರ ನಡೆಸಲಿವೆ. ಇದಕ್ಕಾಗಿ ಇನ್ನೂ ಒಟ್ಟು 90 ಕೋಚ್‌ಗಳ ಅವಶ್ಯಕತೆ ಈ ಹಳದಿ ಲೈನ್ಗೆ ಇದೆ.

ಕಾಮಗಾರಿ ಬಹತೇಕ ಪೂರ್ಣ
ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಬೊಮ್ಮಸಂದ್ರ ನಿಲ್ದಾಣಗಳ ನಡುವಿನ ಮೆಟ್ರೋದ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಿವಿಲ್ ಕೆಲಸ ಮುಗಿದ ನಂತರ, ಟ್ರ್ಯಾಕ್ ಹಾಕುವಿಕೆ, ಸಿಗ್ನಲಿಂಗ್ ಮತ್ತು ಟೆಲಿಕಾಂ ನಿರ್ಮಾಣ ಪ್ರಾರಂಭವಾಗುತ್ತದೆ. ಇದಾದ ಬಳಿಕ ಪ್ರಾಯೋಗಿಕ ಪರೀಕ್ಷೆ, ಅಧಿಕಾರಿಗಳ ಪರಿಶೀಲನೆ ನೆರವೇರಲಿದೆ. ಇದಕ್ಕೆ ಇನ್ನಷ್ಟು ಸಮಯದ ಅಗತ್ಯತೆ ಇದೆ. ಈ ಕಾರಣಕ್ಕೆ ಮುಂದಿನ ಜೂನ್ ಹಾಗೂ ಡಿಸೆಂಬರ್ ವೇಳಗೆ ಉದ್ದೇಶದ ಮೆಟ್ರೋ ನೂತನ ಸೇವೆ ಆರಂಭಗೊಳ್ಳಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications