ಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತು

Recommended Video

      2021ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ | Oneindia Kannada

      ಬೆಂಗಳೂರು, ಡಿಸೆಂಬರ್ 12 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

      ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ವನ್ನು ಅಂಪರ್ಕಿಸುವ 5,950 ಕೋಟಿ ರೂ. ಪ್ರಸ್ತಾವನೆಯ ಯೋಜನೆಯನ್ನು ಸಂಪುಟದ ಮುಂದೆ ಇರಿಸಲಾಗಿತ್ತು. ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ನಡೆಯುತ್ತಿರುವಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು.

      ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೂ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಒತ್ತಡವಿದೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಕೇಂದ್ರ ಸರ್ಕಾರ ನೆರವು ಬಿಐಎಎಲ್ ಸಹಭಾಗಿತ್ವ ಹಾಗೂ ಸಾಲ ಸೌಲಭ್ಯದೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2021ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ.

      ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ

      ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ

      ನಾಗವಾರ ಜಂಕ್ಷನ್ ನಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕಿಸುವ ಕಾಮಗಾರಿ ಆರಂಭಿಸಲಾಗುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ನಡೆಸುವ ಹೊತ್ತಿಗೆ 1.2 ಲಕ್ಷ ಮಂದಿ ಸಂಚರಿಸುವ ಅಂದಾಜು ಮಾಡಲಾಗಿದೆ. ಮೆಟ್ರೋವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವುದರಿಂದ ಜನರಿಗೆ ಅನುಕೂಲವಾಗಲಿದೆ.

      ಹಾಗಾಗಿ ಈ ಯೋಜನೆಗೆ ತ್ವರಿತಗತಿ ಕೊಡಲಾಗುವುದು. 29,062 ಕಿ.ಮೀ ಉದ್ದದ ಮಾರ್ಗ ಮೀರಲಿದ್ದು7 ನಿಲ್ದಾಣಗಳು ನಿರ್ಮಾಣ ಗೊಳ್ಳಲಿದೆ ಎಂದು ಸಂಪುಟ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
      ಎಲ್ಲ ಕಡೆಗೂ ಸಂಪರ್ಕ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ದೊರೆತರೆ ನಗರದ ಬಹುತೇಕ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಸುಲಭ ಸಂಚಾರ ಸಾಧ್ಯವಾಗಲಿದೆ.

      ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣ

      ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣ

      ಎರಡನೇ ಹಂತದ ಮೆಟ್ರೋ ಯೋಜನೆಯ್ಲಿ 21.25 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಿಸಲಾಗುತ್ತದೆ. ಈ ಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು ಕಾಮಗಾರಿಗೆ ಸಿದ್ಧತೆ ನಡೆದಿದೆ. ಈ ಮಾರ್ಗದಿಂದ ಒಂದು ತುದಿಯಲ್ಲಿ ಬರುವ ನಾಗವಾರದಿಂದ ವಿಮಾನ ನಿಲ್ದಾಣಕ್ಕೆ ಮಾರ್ಗ ನಿರ್ಮಾಣವಾಗಲಿದೆ. ಇಷ್ಟೂ ಮಾರ್ಗಗಳು ಸಿದ್ಧಗೊಂಡರೆ ನಗರದ ಬಹುತೇಕ ಭಾಗಗಳಿಂದ ವೇಗದ ಸಂಚಾರ ಸಾಧ್ಯವಾಗುತ್ತದೆ.

      ಇಂಟರ್ ಚೇಂಜ್ ಮಾರ್ಗಗಳು

      ಇಂಟರ್ ಚೇಂಜ್ ಮಾರ್ಗಗಳು

      ಗೊಟ್ಟಿಗೆರೆ- ನಾಗವಾರ ಮಾರ್ಗದಲ್ಲಿ ಎಂಜಿ ರಸ್ತೆ , ಶಿವಾಜಿನಗರ, ಜೆಪಿನಗರ, ನಿಲ್ದಾಣಗಳು ಬರಲಿದೆ. ಒಂದನೇ ಹಂತದಲ್ಲಿ ನಿರ್ಮಿಸಿರುವ ಮಾರ್ಗಗಳ ನಿಲ್ದಾಣಗಳು ಈ ಪ್ರದೇಶದಿಂದಲೇ ಹಾದುಹೋಗಲಿದೆ. ಈಗಾಗಲೇ ಇರುವ ಎಂಜಿ ರಸ್ತೆ ನಿಲ್ದಾಣವನ್ನು ಇಂಟರ್ ಚೇಂಜ್ ನಿಲ್ದಾಣವಾಗಿ ರೂಪಿಸಲಾಗುತ್ತದೆ.

      ಮಾರ್ಗಗಳು ಹಾಗೂ ಹಣಕಾಸು ವರದಿ

      ಮಾರ್ಗಗಳು ಹಾಗೂ ಹಣಕಾಸು ವರದಿ

      ರಾಮಕೃಷ್ಣ ಹೆಗಡೆ ನಗರ, ಜಕ್ಕೂರು, ಕೋಗಿಲು, ಚಿಕ್ಕಜಾಲ, ಟ್ರಂಪೆಟ್, ವೆಸ್ಟ್ ಕೆಎಐ, ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್,
      ಹಣಕಾಸು: ರಾಜ್ಯ ಸರ್ಕಾರ 1,250 ಕೋಟಿ ರೂ-(ಶೇ.21.1)
      ಕೇಂದ್ರ ಸರ್ಕಾರ-500 ಕೋಟಿ-(ಶೇ.8.4)
      ಬಿಐಎಎಲ್-1 ಸಾವಿರ ಕೋಟಿ-16.81
      ಬಾಂಡ್ /ದೀರ್ಘಾವಧಿ ಸಾಲ-3500 ಕೋಟಿ ರೂ. ಶೇ.53.78

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+