ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಬೆಂಗಳೂರು, ಅಕ್ಟೋಬರ್ 27: ಹೆಬ್ಬಾಳದ ಮೂಲಕವೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಚರಿಸಲಿದೆ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೆಟ್ರೋ ರೈಲು ಸಾಗುವ ಮಾರ್ಗದ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಲಾಗಿದ್ದು, ಹಿಂದಿನ ವಿನ್ಯಾಸದಲ್ಲಿದ್ದ ಆರ್‌ಕೆ ಹೆಗಡೆ ನಗರ ಬದಲು ಹೆಬ್ಬಾಳ ಮೂಲಕವೇ ಮಾರ್ಗ ನಿರ್ಮಿಸಲು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಪ್ರತಿದಿನ ಲಕ್ಷಾಂತರ ವಿಮಾನ ಪ್ರಯಾಣಿಕರು ಮತ್ತು ಮಾರ್ಗದ ನಡುವಿನ ಊರಿನ ನಿವಾಸಿಗಳಿಗೆ ಪ್ರಯಾಣ ಸುಗಮವಾಗಲಿದೆ.

ಈ ಹಿಂದೆ ಏರ್‌ಪೋರ್ಟ್‌ಗೆ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿತ್ತು, ಎಂಜಿ ರಸ್ತೆಯಿಂದ ಯಲಹಂಕ ಮಾರ್ಗವಾಗಿ ಹೈ ಸ್ಪೀಡ್ ರೈಲು ಮಾರ್ಗ ನಿರ್ಮಿಸಲು ನಕ್ಷೆಯನ್ನೂ ಕೂಡ ತಯಾರಿಸಲಾಗಿತ್ತು ಆದರೆ ಮೆಟ್ರೋ ಯೋಜನೆ ಬಂದಾಗ ಹೈಸ್ಪೀಡ್ ರೈಲಿನ ಪ್ರಸ್ತಾಪವನ್ನು ಅಲ್ಲಿಗೇ ಕೈಬಿಡಲಾಗಿತ್ತು.

ನಾಗವಾರ-ಆರ್‌ಕೆ ಹೆಗಡೆ ನಗರ-ಜಕ್ಕೂರು ಮಾರ್ಗವಾಗಿ ಏರ್‌ಪೋರ್ಟ್‌ ಮಟ್ರೋ ರಸ್ತೆ ನಿರ್ಮಾಣಕ್ಕೆ ಮೊದಲು ವಿನ್ಯಾಸ ಸಿದ್ಧಪಡಿಸಲಾಗಿತ್ತು, ಆದರೆ ಆರ್‌ಕೆ ಹೆಗಡೆ ನಗರದಲ್ಲಿ ಪೆಟ್ರೋಲಿಯಂ ಪೈಪ್ ಹಾದುಹೋಗಿರುವುದರಿಂದ ಪಿಲ್ಲರ್ ಹಾಕುವುದು ಕಷ್ಟ ಎಂಬ ಕಾರಣಕ್ಕೆ ಹೆಬ್ಬಾಳ ಮಾರ್ಗದ ಚಿಂತನೆ ನಡೆದಿತ್ತು. ಈಗ ಹೆಬ್ಬಾಳ ಮಾರ್ಗವೇ ಅಂತಿಮವಾಗಿದೆ. ಹಾಗೆಯೇ ಹೆಬ್ಬಾಳದಿಂದ ಟ್ರಂಪೆಟ್ ವರೆಗೆ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಸ್ಪೀಡ್ ರೈಲಿಗೆ ಮೀಸಲಿಟ್ಟಿದ್ದ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ.

ನಮ್ಮ ಮೆಟ್ರೋ ಟಿಕೆಟ್‌ನ್ನು ಮೊಬೈಲ್ ಮೂಲಕ ಪಡೆಯಿರಿ

ನಮ್ಮ ಮೆಟ್ರೋ ಟಿಕೆಟ್‌ನ್ನು ಮೊಬೈಲ್ ಮೂಲಕ ಪಡೆಯಿರಿ

ನಮ್ಮ ಮೆಟ್ರೋ ಟೋಕನ್ ಖರೀದಿಸಲು ಇನ್ನುಮುಂದೆ ಸರತಿಸಾಲಿನಲ್ಲಿ ನಿಲ್ಲಬೇಕಿಲ್ಲ, ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡಿದೆ. ಪ್ರಯಾಣಿಕರು ತಮ್ ಸ್ಮಾರ್ಟ್ ಪೋನ್‌ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್‌ಲೈನ್ ಮೂಲಕ ಬಿಎಂಆರ್‌ಸಿಎಲ್ ಗೆ ಜಮಾ ಆಗಲಿದೆ.

ಮಾರ್ಗ ಬದಲಾವಣೆ

ಮಾರ್ಗ ಬದಲಾವಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಬ್ಬಾಳದ ಮೂಲಕವೇ ಮೆಟ್ರೋ ಸಾಗಲಿದೆ, ಹೊಸ ಮಾರ್ಗದ ನಕ್ಷೆ ಪ್ರಕಾರ ನಾಗವಾರ-ರಿಂಗ್‌ರೋಡ್-ಹೆಬ್ಬಾಳ-ಬಳ್ಳಾರಿ ಮುಖ್ಯ ರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಟೇಷನ್ ತನಕ ಮಾರ್ಗ ಬದಲಾಗಲಿದ್ದು, ಅಲ್ಲಿಂದ ಹಳೇ ನಕ್ಷೆಯ ಮೂಲಕವೇ ಮೆಟ್ರೋ ಸಾಗಲಿದೆ ಎಂದು ಹೇಳಲಾಗಿದೆ.

ಮಾರ್ಗ ಬದಲಾವಣೆಗೆ ಕಾರಣಗಳೇನು?

ಮಾರ್ಗ ಬದಲಾವಣೆಗೆ ಕಾರಣಗಳೇನು?

ಆರ್‌ ಕೆ ಹೆಗಡೆನಗರ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ಪೆಟ್ರೋಲಿಯಮ್ ಪೈಪ್ ಹಾದು ಹೋಗುವ ಕಾರಣ ಅಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಅನಿವಾರ್ಯವಾಗಿ ಹೆಬ್ಬಾಳ ಮಾರ್ಗದಲ್ಲಿ ಮೆಟ್ರೋ ಚಲಿಸಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ, ಬಿಎಂಟಿಸಿ ಕಾಮನ್ ಕಾರ್ಡ್ ಶೀಘ್ರ ಜಾರಿ

ಮೆಟ್ರೋ, ಬಿಎಂಟಿಸಿ ಕಾಮನ್ ಕಾರ್ಡ್ ಶೀಘ್ರ ಜಾರಿ

ಮೆಟ್ರೋ ಹಾಗೂ ಬಿಎಂಟಿಸಿ ನಡುವೆ ಸಂಚರಿಸಲು ಕಾಮನ್‌ಫೇರ್‌ ಕಾರ್ಡ್‌ ಪರಿಚಯಿಸಲು ಚಿಂತಿಸಿದ್ದು, ಉಪಚುನಾವಣೆ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ಬಿಎಂಟಿಸಿ ಹಾಗೂ‌ ಮೆಟ್ರೋನಲ್ಲಿ ಸಂಚರಿಸಲು ಒಂದೇ ಕಾರ್ಡ್‌ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+