Get Updates
Get notified of breaking news, exclusive insights, and must-see stories!

Namma Metro: ಲಾಲ್‌ಬಾಗ್ ಫಲಪುಷ್ಪಕ್ಕೆ ಬರುವವರಿಗೆ ಮೆಟ್ರೋ ಪೇಪರ್ ಟಿಕೆಟ್

ಬೆಂಗಳೂರು, ಆಗಸ್ಟ್ 11: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ಲಾಲ್ ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಸಂಬಂಧ ಆಗಸ್ಟ್ 15ರಂದು ಅತ್ಯಧಿಕ ಜನರು ಉದ್ಯಾನಕ್ಕೆ ಆಗಮಿಸಲಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೊ ಪೇಪರ್ ಟಿಕೆಟ್ (Namma Metro paper ticket) ಒದಗಿಸುವುದಾಗಿ ತಿಳಿಸಿದೆ.

ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ದಿಂದ ನೀವು ಅಂದು ಮಂಗಳವಾರ (ಆಗಸ್ಟ್ 15) ಪೇಪರ್ ಟಿಕೆಟ್ ಪಡೆದು ಎಲ್ಲಿಗಾದರೂ ಮೆಟ್ರೋದಲ್ಲಿ ಓಡಾಡಬಹುದಾಗಿದೆ. ಇದು ಲಾಲ್‌ಬಾಗ್‌ನಿಂದ ಮರಳಿ ಹೋಗುವವರ ಅನುಕೂಲಕ್ಕೆ ಪರಿಚಯಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

namma-metro-will-provide-paper-ticket

ಸದರಿ ಮೆಟ್ರೋ ರೈಲುಗಳ ಈ ಪೇಪರ್ ಟಿಕೆಟ್ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಲಭ್ಯವಿರುತ್ತದೆ. ಪ್ರತಿ ಪೇಪರ್ ಟಿಕೆಟ್‌ ದರವನ್ನು ರೂ.30/ಗೆ ನಿಗಧಿಪಡಿಸಲಾಗಿದೆ.

ಲಾಲ್‌ಬಾಗ್‌ನಲ್ಲಿ ರಾತ್ರಿ 8 ರವರೆಗೆ ಪೇಪರ್‌ ಟಿಕೆಟ್ ಲಭ್ಯ

ಈ ಪೇಪರ್ ಟಿಕೆಟ್ ಆ ದಿನದ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎಲ್ಲ ಮೆಟ್ರೋ ನಿಲ್ದಾಣಗಲ್ಲಿ ಇದನ್ನು ಖರೀದಿಸಬಹುದಾಗಿದೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ಸದರಿ ಪೇಪರ್ ಟಿಕೆಟ್ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ.

namma-metro-will-provide-paper-ticket

ಮೆಟ್ರೋ ಪುಯಾಣಿಕರು ಲಾಲ್‌ಬಾಗ್ ನಿಲ್ದಾಣದ AFC ಗೇಟ್‌ಗಳಲ್ಲಿ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಪೇಪರ್ ಟಿಕೆಟ್‌ಗಳನ್ನು ಹಾಜರಿಪಡಿಸುವುದು ಕಡ್ಡಾಯವಿರುತ್ತದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ನಮ್ಮ ಮೆಟ್ರೋ ಪಯಾಣಿಕರ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಎಂದು ನಮ್ಮ ಮೆಟ್ರೋ ಮನವಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+