Shivajinagar Metro Name Controversy: ಶಿವಾಜಿನಗರದಲ್ಲಿ ಬೇಡದ ವಿವಾದವೇಕೆ
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ನಿರ್ದಿಷ್ಟ ಸಮುದಾಯದ ದೇವರ ಹೆಸರಿಡುವ ಬಗ್ಗೆ ಪ್ರಸ್ತಾವ ಮಾಡುವ ಮೂಲಕ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಬೇಡದ ವಿವಾದಕ್ಕೆ ಕೈಹಾಕಿದೆ. ಬೆಂಗಳೂರಿನ ಶಿವಾಜಿನಗರ ಹೇಳಿ ಕೇಳಿ ಕೋಮುಸೂಕ್ಷ್ಮ ಪ್ರದೇಶ. ಶಿವಾಜಿನಗರದ ಮುಖ್ಯಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಇದೆ. ಶಿವಾಜಿನಗರ ಬಸ್‌ನಿಲ್ದಾಣ ಹಾಗೂ ಮಾರುಕಟ್ಟೆಯನ್ನು ನೋಡಿದರೆ ಸಾಕು ಇಲ್ಲಿ ಜನ ಅದೆಷ್ಟು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿ ಎನ್ನುವಂತಿದೆ ಶಿವಾಜಿನಗರ.
ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಶಿವಾಜಿನಗರದಲ್ಲಿ ಇದೀಗ ರಾಜ್ಯ ಸರ್ಕಾರವೇ ವಿವಾದವೊಂದಕ್ಕೆ ನಾಂದಿ ಹಾಡಿದ್ದು. ಅದು ಮುಂದೆ ಯಾವ ರೀತಿಯ ಚರ್ಚೆಗೆ ಕಾರಣವಾಗಲಿದೆ ಎನ್ನುವುದನ್ನು ಮರೆತಂತಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ಹೃದಯಭಾಗದಲ್ಲಿದೆ. ಇಲ್ಲಿ ಸರ್ವ ಧರ್ಮಿಯರಷ್ಟೇ ಅಲ್ಲ. ಸರ್ವ ಭಾಷೆಯ ಜನರೂ ಸಹ ವಾಸಿಸುತ್ತಿದ್ದಾರೆ.

ಇನ್ನು ಶಿವಾಜಿನಗರದಲ್ಲಿ ಮುಸ್ಲಿಂ ಜನ ಸಂಖ್ಯೆ ಹೆಚ್ಚಾಗಿದೆ. ಪ್ರಮುಖ ಸರ್ಕಾರಿ ಆಸ್ಪತ್ರೆ, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ವಾಣಿಜ್ಯ ಮಾರುಕಟ್ಟೆ ಇಲ್ಲಿದೆ. ಮಾಂಸ ಹಾಗೂ ವಾಣಿಜ್ಯ ಉತ್ಪನ್ನಗಳ ಮಾರಾಟದಿಂದ ಶಿವಾಜಿನಗರ ಪ್ರಸಿದ್ಧಿ ಗಳಿಸಿದೆ. ಇಷ್ಟೆಲ್ಲ ಪ್ರಖ್ಯಾತಿ ಇರುವ ಶಿವಾಜಿನಗರದಲ್ಲಿ ಇದೀಗ ಮೆಟ್ರೋ ಕಾಮಗಾರಿ ಜೋರಾಗಿಯೇ ಸಾಗಿದೆ.ಇದರ ನಡುವೆ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡುವ ಪ್ರಸ್ತಾವನೆಯ ಬಗ್ಗೆ ಮಾತನಾಡಿದ್ದಾರೆ.
ಊದುವುದನ್ನು ಕೊಟ್ಟು ಬಾರಿಸುವುದು ಕೊಂಡಂತೆ!
ಊದುವುದನ್ನು ಕೊಟ್ಟು ಬಾರಿಸುವುದು ತೆಗೆದುಕೊಂಡರಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಏನು ಇಲ್ಲ. ವಿವಾದವಾದರೆ ಸಾಕು ಅದನ್ನು ಯಾವ ರೀತಿ ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂದು ವಿರೋಧ ಪಕ್ಷದಲ್ಲಿನ ಕೆಲವು ನಾಯಕರು ಕಾಯುತ್ತಿದ್ದಾರೆ. ಅವರ ಕೈಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಬಡಿಗೆ ಕೊಟ್ಟು ಬರ್ಸ್ಸಿ ಎನ್ನುವಂತಿದೆ. ರಾಜ್ಯ ಸರ್ಕಾರ ಎರಡು ವರ್ಷದ ಅಧಿಕಾರದ ಅವಧಿಯನ್ನು ಪೂರೈಸುವ ಮೊದಲೇ ಹಲವು ಕಾರಣಗಳಿಂದ ನೆಗೆಟಿವ್ ಅಭಿಪ್ರಾಯಗಳಿಗೆ ಗುರಿಯಾಗಿದೆ. ಅದರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣದ ಆರೋಪ ಇದೀಗ ಮುಂದಿನ ಸಿ.ಎಂ ಯಾರು ಎನ್ನುವ ಪ್ರಶ್ನೆ ಇಷ್ಟೆಲ್ಲ ಸಾಲದು ಎನ್ನುವುದಕ್ಕೆ ಆಗಾಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸುವ ಪ್ರಸ್ತಾವನೆಯ ಪ್ರಯೋಗವನ್ನು ಮಾಡುತ್ತಿರುವಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡುವ ಪ್ರಸ್ತಾವನೆಯ ಬಗ್ಗೆ ಮಾತನಾಡಿರುವುದಷ್ಟೇ. ಈಗ ಅದೇ ವಿಷಯ ವಿವಾದಕ್ಕೆ ಕಾರಣವಾಗುತ್ತಿದೆ.
ಮೇರಿಯಮ್ಮನ ಹೆಸರೇಕೆ ಎಂದ ಯತ್ನಾಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿವಾಜಿನಗರ ಮೆಟ್ರೋಗೆ ಸೇಂಟ್ ಮೇರಿ ಹೆಸರಡುವ ಬಗ್ಗೆ ಮಾತನಾಡುತ್ತಿದ್ದಂತೆಯೇ ವಿರೋಧ ಪಕ್ಷ ಇದು ಓಲೈಕೆಯ ರಾಜಕೀಯ ಎಂದು ದೂರಿವೆ. ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎನ್ನುವುದಕ್ಕೆ ಇದು ಉದಾಹರಣೆ ಎಂದು ಹೇಳಿದ್ದಾರೆ.
ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ. ಇತಿಹಾಸ ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ ಏಕಾಂಬರೇಶ್ವರ ಸ್ವಾಮಿಯ ದೇವಸ್ಥಾನ, ಮುತ್ಯಾಲಮ್ಮ ದೇವಸ್ಥಾನ, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಅಂಗಾಲ ಪರಮೇಶ್ವರಿ ಅಮ್ಮನವರ ದೇವಸ್ಥಾನಗಳು ಶಿವಾಜಿನಗರದಲ್ಲಿದೆ ಎಂದು ಯತ್ನಾಳ ಅವರು ಸಿ.ಎಂ ಸಿದ್ದರಾಮಯ್ಯ ಅವರು ಹೆಸರು ಹೇಳದೆ ಅವರನ್ನು ತಿವಿದಿದ್ದಾರೆ.
ಓಲೈಕೆ ರಾಜಕಾರಣಕ್ಕೆ, ಹೆಚ್ಚು ವೋಟು ಬೀಳುತ್ತಿರುವ ಸಮುದಾಯವನ್ನು ಸಂತುಷ್ಟಗೊಳಿಸಲು ಈ ರೀತಿ ವ್ಯರ್ಥ ಪ್ರಯತ್ನಗಳು ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಧರ್ಮವನ್ನು ಹೆಸರನ್ನು ಉಳಿಸಿದವರನ್ನೆಲ್ಲ ಬಿಟ್ಟು ರಾಜಕೀಯ ಕಾರಣಕ್ಕಾಗಿ ಮೇರಿಯಮ್ಮನ ಹೆಸರು ನಾಮಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಸಿ.ಎಂ ಸಿದ್ದರಾಮಯ್ಯ ಅವರ ಪ್ರಸ್ತಾವಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
-
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications