Bengaluru Metro: ಟಿಬಿಎಂ 'ತುಂಗಾ' ಯಶಸ್ವಿ ಕಾರ್ಯಾಚರಣೆ, 'ಪಿಂಕ್ ಲೈನ್' ಸುರಂಗ ಕಾಮಗಾರಿ ಅಪ್ಡೇಟ್

ಬೆಂಗಳೂರು, ಡಿಸೆಂಬರ್ 06: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಸುರಂಗ ಕೊರೆಯುವ ಯಂತ್ರ ಟಿಬಿಎಂ ತುಂಗಾ ಯಶಸ್ವಿ ಕಾರ್ಯಾಚರಣೆ ನಡೆಸಿ ಹೊರ ಬಂದಿದೆ ಎಂದು ನಮ್ಮ ಮೆಟ್ರೋ (Namma Metro) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಮೆಟ್ರೋದ ಅತಿ ಉದ್ದದ ಭೂಗತ ಸುರಂಗ ಮಾರ್ಗ ಕೊರೆಯುವಲ್ಲಿ ನಿರತವಾಗಿದ್ದ ತುಂಗಾ ಟಿಬಿಎಂ ಬುಧವಾರ ತನ್ನ ಎರಡು ನಿಗದಿತ ಕಾಮಗಾರಿ ಮುಗಿಸಿ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಹೊರ ಬಂದಿದೆ.

Namma Metro: Tunga TBM Came Out in KG Halli After 1184 meter tunnelling completed

ಕಾಳೇನ ಅಗ್ರಹಾರದಿಂದ ಮಹಾತ್ಮ ಗಾಂಧಿ ರಸ್ತೆಯ ಹಾಗೂ ಮತ್ತು ಟ್ಯಾನರಿ ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸಲು ನಮ್ಮ ಮೆಟ್ರೋ 21.26 ಕಿ.ಮೀ ಉದ್ದದ ಮಾರ್ಗ ನಿರ್ಮಿಸುತ್ತಿದೆ. ಈ ಗುಲಾಬಿ ಮಾರ್ಗದಲ್ಲಿ (Metro Pink line) ಒಟ್ಟು 24 ಸುರಂಗ ಕಾಮಗಾರಿಗಳನ್ನು ಕೈಗೊಂಡಿದ್ದ BMRCL 21ನೇ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ.

ಉದ್ದೇಶಿತ ಸುರಂಗ ಕೆಲಸ ಪೂರ್ಣಗೊಳಿಸಿದ 'ತುಂಗಾ'

ತುಂಗಾ ಟಿಬಿಎಂ ವೆಂಕಟೇಶಪುರ ನಿಲ್ದಾಣ ಮತ್ತು ಶಾಧಿ ಮಹಲ್ ಶಾಫ್ಟ್ ನಡುವೆ 1064 ಮೀ ಸುರಂಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ವೆಂಕಟೇಶಪುರ ನಿಲ್ದಾಣದಿಂದ ದಿನಾಂಕ ಅಕ್ಟೋಬರ್ 31ರಂದು ಈ ಸುರಂಗ ಮಾರ್ಗದ ಕಾಮಗಾರಿಯ ಕೆಲಸ ಆರಂಭಿಸಿತ್ತು. ಅದು ಇದೀಗ ಯಶಸ್ವಿಯಾಗಿ 1184.4 ಮೀಟರ್ ಕೆಲಸ ಪೂರ್ಣಗೊಳಿಸಿ ಇಂದು ಅಂದರೆ ಡಿಸೆಂಬರ 6ರಂದು ಅರೇಬಿಕ್ ಕಾಲೇಜು ಬಳಿಯಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ನಿಲ್ದಾಣ ಬಳಿ ಹೊರ ಬಂದಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಗತಿಯೊಂದಿಗೆ, ಒಟ್ಟು, 20992 ಮಿಟರ್‌ಗಳಲ್ಲಿ 18832.30 ಮೀಟರ್ ಅಂದರೆ ಶೇಕಡಾ 89.70% ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ, 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಗಳನ್ನು ಪೂರ್ಣಗೊಳಿಸಿವೆ ಎಂದು ತಿಳಿಸಲಾಗಿದೆ.

Namma Metro: Tunga TBM Came Out in KG Halli After 1184 meter tunnelling completed

13 ತಿಂಗಳು ನಿರಂತರ ಕಾರ್ಯ

ಜರ್ಮನ್ ನಿರ್ಮಿತ ಹೆರೆಂಕಕ್ನೆಕ್ಟ್ ಯಂತ್ರವನ್ನು ಮೊದಲ ಬಾರಿಗೆ 2021 ಜುಲೈ 23, 2021 ರಂದು ನಗರದಲ್ಲಿ ಪ್ರಾರಂಭಿಸಲಾಯಿತು. ಪಿಂಕ್ ಲೈನ್ ಮಾರ್ಗದಲ್ಲಿನ ವೆಂಕಟೇಶಪುರ ಮತ್ತು ಟ್ಯಾನರಿ ರಸ್ತೆಯ ಮಧ್ಯೆದ 1,260 ಮೀಟರ್ ಸುರಂಗ ಕೊರೆಯಲು 13 ತಿಂಗಳು ಹಿಡಿಯಿತು.

ಬುಧವಾರ ಹೊರ ಬಂದಿರುವ ಈ ತುಂಗಾ ಟಿಬಿಎಂ ಕೋರ್ ಕಟಿಂಗ್, ಡ್ರಿಲ್ಲಿಂಗ್ ಹೋಲ್‌ಗಳು ಮತ್ತು ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು.ಈ ಟಿಬಿಎಂ ದಿನಕ್ಕೆ ಸರಾಸರಿ 2.99 ಮೀಟರ್‌ ಕೊರೆಯುವ ಮೂಲಕ ಒಟ್ಟು 401 ದಿನಗಳಲ್ಲಿ 1,184.4 ಮೀಟರ್‌ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿದೆ. ಇದರ ಮಾರ್ಗವು ಶೇಕಡಾ 40ರಷ್ಟು, 40ರಷ್ಟು ಮಣ್ಣು ಮತ್ತು ರಷ್ಟು 20 ಕಲ್ಲು-ಮಣ್ಣಿನಿಂದ ಕೂಡಿದ್ದ ದಾರಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

2025ಕ್ಕೆ ಪಿಂಕ್ ಲೈನ್ ಮಾರ್ಗ ಪೂರ್ಣ

ಇನ್ಣೂ ಭದ್ರಾ ಟಿಬಿಎಂ ಎರಡನೇ ಡ್ರೈವ್ ವೆಂಕಟೇಶಪುರ ಮತ್ತು ಕೆಜಿ ಹಳ್ಳಿ ನಡುವೆ 1,186 ಮೀಟರ್ 2024ರ ಜನವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಇವೆ. ಕೆಜಿ ಹಳ್ಳಿ-ನಾಗವಾರದವರೆಗೆ 935 ಮೀಟರ್‌ ಅನ್ನು ಕೊರೆಯಲು ಜನವರಿ 2024 ರಲ್ಲಿ ತುಂಬಾ ಟಿಬಿಎಂ ಸಜ್ಜಾಗಲಿದೆ. ಪಿಂಕ್ ಲೈನ್ ಮಾರ್ಗದ ಕೆಲಸಗಳು ಭರದಿಂದ ಸಾಗಿದ್ದು, ಮಾರ್ಚ್ 2025 ರ ಹೊತ್ತಿಗೆ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+