Namma Metro: ನಮ್ಮ ಮೆಟ್ರೋ 2 ಮತ್ತು 3ನೇ ಹಂತದಲ್ಲಿ 16 ಇಂಟರ್ ಚೇಂಜ್ ಸ್ಟೇಷನ್‌ಗಳು! ಸಂಪೂರ್ಣ ಮಾಹಿತಿ
ಬೆಂಗಳೂರು, ಮೇ. 11 : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಹಂತ 2 ಮತ್ತು ಹಂತ 3 ಯೋಜನೆಗಳ ಭಾಗವಾಗಿ 16 ಹೊಸ ಇಂಟರ್‌ಚೇಂಜ್ ನಿಲ್ದಾಣಗಳನ್ನು ಪರಿಚಯಿಸಲು ಸಜ್ಜಾಗಿದೆ. ಹೌದು.. ಸದ್ಯ ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣವು ನಗರದ ಏಕೈಕ ಇಂಟರ್‌ಚೇಂಜ್ ನಿಲ್ದಾಣವಾಗಿದೆ.
ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣ ನೇರಳೆ ಮತ್ತು ಹಸಿರು ಮಾರ್ಗಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಪ್ರತಿದಿನ ಸರಿಸುಮಾರು 50,000 ಪ್ರಯಾಣಿಕರು ಇಲ್ಲಿ ರೈಲು ಬದಲಿಸುತ್ತಾರೆ. ಇದು ಬೆಂಗಳೂರಿನ ಮೆಟ್ರೋ ನೆಟ್‌ವರ್ಕ್‌ನಲ್ಲಿ ಪ್ರಮುಖ ಅಂಶವಾಗಿದೆ. ಈಗ ಮುಂಬರುವ ಮೆಟ್ರೋ ಎರಡನೇ ಹಂತ ಮತ್ತು ಮೂರನೇ ಹಂತಗಳಲ್ಲಿ ಬರೋಬ್ಬರಿ 16 ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳನ್ನು ಸೇರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ನಮ್ಮ ಮೆಟ್ರೋ: 16 ಇಂಟರ್‌ಚೇಂಜ್ ನಿಲ್ದಾಣಗಳು
ನಮ್ಮ ಮೆಟ್ರೋ ಜಾಲದ ವಿವಿಧ ಮೆಟ್ರೋ ಮಾರ್ಗಗಳ ನಡುವೆ ತಡೆರಹಿತ ಸಂಪರ್ಕ ಒದಗಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಮುಂಬರುವ ಹಂತ 2 ಮತ್ತು ಹಂತ 3 ಮೆಟ್ರೋ ಯೋಜನೆಗಳಲ್ಲಿ 16 ಇಂಟರ್‌ಚೇಂಜ್ ನಿಲ್ದಾಣಗಳನ್ನು ನಿರ್ಮಿಸಲಿದೆ. ಇದರಿಂದ ಹೆಚ್ಚು ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆ ಪಡೆಯಲು ಸಾಧ್ಯವಾಗಲಿದೆ.
ಮುಂಬರುವ 16 ಹೊಸ ಇಂಟರ್‌ಚೇಂಜ್ ನಿಲ್ದಾಣಗಳ ಸೇರ್ಪಡೆಯು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಲಿದೆ. ಜೊತೆಗೆ ಅವರ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋ ಸೇವೆಗಳ ಮೇಲೆ ಹೆಚ್ಚು ಅವಲಂಬಿಸುವಂತೆ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

16 ಇಂಟರ್‌ಚೇಂಜ್ ನಿಲ್ದಾಣಗಳು ಯಾವವು?
* ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್,
* ಎಂಜಿ ರಸ್ತೆ
* ಕೆಆರ್ ಪುರಂ
* ಹೊಸಹಳ್ಳಿ
* ಮೈಸೂರು ರಸ್ತೆ
* ಪೀಣ್ಯ ಆರ್‌ವಿ ರಸ್ತೆ
* ಜೆಪಿ ನಗರ
* ಜೆಪಿ ನಗರ 4ನೇ ಹಂತ
* ಡೈರಿ ಸರ್ಕಲ್
* ನಾಗವಾರ
* ಕೆಂಪಾಪುರ
* ಹೆಬ್ಬಾಳ
* ಅಗರ
* ಸೆಂಟ್ರಲ್ ಸಿಲ್ಕ್ ಬೋರ್ಡ್
* ಸುಮನಹಳ್ಳಿ ಕ್ರಾಸ್
ಈ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ, ಜಯದೇವ ಜಂಕ್ಷನ್‌ನಲ್ಲಿರುವ ಮಲ್ಟಿ-ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು ನಗರದಲ್ಲೇ ದೊಡ್ಡದಾಗಿದೆ. ಇದು ಈ ವರ್ಷದ ಅಂತ್ಯದಲ್ಲಿ ತೆರೆಯುವ ನಿರೀಕ್ಷೆಯಿದೆ. ಈ ಮೆಟ್ರೋ ನಿಲ್ದಾಣವು ಬೆಂಗಳೂರು ಮೆಟ್ರೋದ ಹಳದಿ ಮತ್ತು ಪಿಂಕ್ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಎರಡೂ ಮಾರ್ಗಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ.
ಇದಲ್ಲದೆ, ಯೆಲ್ಲೋ ಲೈನ್ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಹೊಂದಿರುತ್ತದೆ. ಇದು ರಸ್ತೆ ಸಂಚಾರ ಮತ್ತು ಮೆಟ್ರೋ ನಡುವೆ ತಡೆರಹಿತ ಸಂಪರ್ಕ ನೀಡುತ್ತದೆ. ಜಯದೇವ ಜಂಕ್ಷನ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು ಹಳದಿ ಮಾರ್ಗದ ಉದ್ಘಾಟನೆ ಬಳಿಕ ಭಾಗಶಃ ತೆರೆಯುವ ನಿರೀಕ್ಷೆಯಿದೆ. ಈ ವರ್ಷದ ಕೊನೆಯಲ್ಲಿ ಹಳದಿ ಮಾರ್ಗದ ಉದ್ಘಾಟನೆಯಾಗಲಿದೆ.
ಪಿಂಕ್ ಲೈನ್ ಪೂರ್ಣಗೊಂಡ ನಂತರ ಪೂರ್ಣ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ. ಒಮ್ಮೆ ಸಂಪೂರ್ಣವಾಗಿ ಕಾರ್ಯಾರಂಭಿಸಿದರೆ, ಪ್ರತಿದಿನಿ ನಿಲ್ದಾಣದಲ್ಲಿ 80,000 ರಿಂದ 90,000 ಪ್ರಯಾಣಿಕರನ್ನು ನೋಡಬಹುದು, ಇದು ಮೆಜೆಸ್ಟಿಕ್ ನಂತರ ಬೆಂಗಳೂರಿನ ಅತ್ಯಂತ ಜನನಿಬಿಡ ಮೆಟ್ರೋ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications