Namma Metro: ಹೊಸದಾಗಿ 04 ಮೆಟ್ರೋ ನಿಲ್ದಾಣಗಳಲ್ಲಿ ತಾಯಂದಿರಿಗೆ ವಿಶೇಷ ಸೌಕರ್ಯ
ಬೆಂಗಳೂರು, ಜೂನ್ 07: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವ್ಯಾಪ್ತಿಯಲ್ಲಿ ಮಗುವಿನೊಂದಿಗೆ ಪ್ರಯಾಣ ಮಾಡುವ ತಾಯಂದಿರಿಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಿಳೆಯರು, ಮಕ್ಕಳು, ಹಿರಿಯರು, ಉದ್ಯೋಗಿಗಳು ಹೀಗೆ ಎಲ್ಲರು ಮೆಟ್ರೋ ಸಾರಿಗೆ ಬಳಸುತ್ತಾರೆ. ಇದೇ ರೀತಿ ತಾಯಂದಿರು ಆಸ್ಪತ್ರೆಗೆ ಅಥವಾ ಇನ್ನಿತರ ಕಾರ್ಯಗಳಿಗೆ ಮೆಟ್ರೋದಲ್ಲಿ ತೆರಳುವಾಗ ಅವರಿಗೆ ಅನುಕೂಲ ಆಗುವಂತೆ ಮಗುಗೆ ಹಾಲುಣಿಸುವ ಕೇಂದ್ರಗಳನ್ನು (Baby Feeding Centers) ಸ್ಥಾಪಿಸಲಾಗಿದೆ.
ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗಿದೆ. ಈ ಉತ್ತಮ ಸಾರಿಗೆ ವ್ಯವಸ್ಥೆ ಮೇಲೆ ಜನರ ಅವಲಂಬನೆ ನಿರಂತರವಾಗಿ ಹೆಚ್ಚಾಗುತ್ತಿದೆ. ಮೆಟ್ರೋ ನಿಲ್ದಾಣಗಳಲ್ಲಿ ಮಗುಗೆ ಹಾಲುಣಿಸುವ ಕೇಂದ್ರ ತೆರೆಯುವಂತೆ ಒತ್ತಾಯ ಕೇಳಿ ಬಂದಿತ್ತು. BMRCL ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಚೈಲ್ಡ್ ಹೆಲ್ಫ್ ಫೌಂಡೇಷನ್ (CHF) ಸಹಯೋಗದಲ್ಲಿ ನಗರದ 04 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಈ ಮಗುಗೆ ಹಾಲುಣಿಸುವ ಕೇಂದ್ರವನ್ನು (ಶಿಶು ಆಹಾರ ಕೇಂದ್ರ) ಸ್ಥಾಪಿಸಲಾಗಿದೆ. ಇದರಿಂದಾಗಿ ನಗರದಲ್ಲಿ ಒಟ್ಟು 09 ಮೆಟ್ರೋ ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರಗಳು ಲಭ್ಯವಾಗಿವೆ.

ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ/ಜವಾಬ್ದಾರಿ (CSR) ನಡಿ ನಮ್ಮ ಮೆಟ್ರೋದ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದ ನಿರ್ಮಿಸಲಾಗಿದೆ. ತಾಯಂದಿರು ಮಕ್ಕಳಿಗೆ ಆಸ್ಪತ್ರೆಗೆ ಬರುವಾಗ ಹಾಲುಣಿಸಲು ಆಗುತ್ತಿದ್ದ ಅನಾನುಕೂಲ ಕಂಡು, ಆದ್ಯತೆ ಮೇರೆಗೆ ಈ ನಾಲ್ಕು ಕಡೆಗಳಲ್ಲಿ ಹಾಲುಣಿಸುವ ಕೇಂದ್ರ ನಿರ್ಮಿಸಲಾಗಿದೆ ಎಂದು ಸಂಸ್ಥೆಗಳು ಮಾಹಿತಿ ನೀಡಿವೆ ಎಂದು 'ಹ್ಯಾನ್ಸ್ ಇಂಡಿಯಾ' ವರದಿ ಮಾಡಿದೆ.
* ಬನಶಂಕರಿ ಮೆಟ್ರೋ ನಿಲ್ದಾಣ
* ರಾಷ್ಟ್ರೀಯ ವಿದ್ಯಾಲಯ (ಆರ್.ವಿ.) ರಸ್ತೆ ಮೆಟ್ರೋ ನಿಲ್ದಾಣ
* ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ
* ಈ ಮೇಲಿನ ಮೂರು ಸೇರಿದಂತೆ ಒಟ್ಟು ನಾಲ್ಕು ನಿಲ್ದಾಣಗಳಲ್ಲಿ ನಿರ್ಮಿಸಲಾಗಿದೆ.
ಶಿಶಿ ಆಹಾರ ಕೇಂದ್ರ ಸ್ಥಾಪನೆಯಾಗಿರುವ ಈ ಮೆಟ್ರೋ ನಿಲ್ದಾಣಗಳಲ್ಲಿ ಇತರ ಪ್ರಯಾಣಿಕರಂತೆ ತಾಯಂದಿರುವ ಬರುವುದು ಹೆಚ್ಚು. ಇದನ್ನು ಗಮನಿಸಿ ಈ ನಾಲ್ಕು ಸ್ಥಳಗಳನ್ನು ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎಸ್‌ಬಿಐ ಹಾಗೂ ಸಿಎಚ್‌ಎಫ್ ಮೂಲಕ ತಾಯಂದಿರಿಗೆ ನಾಲ್ಕು ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕ ಹಾಲುಣಿಸುವ ಕೇಂದ್ರ ವ್ಯವಸ್ಥೆ ಲಭ್ಯವಾಗಿದೆ.
ಇತ್ತೀಚೆಗೆ ಈ ಕೇಂದ್ರ ಸ್ಥಾಪಿಸಿ, ಚಾಲನೆ ನೀಡಲಾಯಿತು. ಈ ವೇಳೆ ಎಸ್‌ಬಿಐ ಹಿರಿಯ ಅಧಿಕಾರಿಗಳು, ನಮ್ಮ ಮೆಟ್ರೋ ರೈಲು ನಿಮಗ ಹಾಗೂ ಚೈಲ್ಡ್ ಹೆಲ್ಪ್ ಫೌಂಡೇಷನ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಭಾಗದ ಆಸ್ಪತ್ರೆಗಳಿಗೆ ಆಗಾಗ ಮಗುವಿನೊಂದಿಗೆ ಭೇಟಿ ನೀಡುವ ತಾಯಂದಿರ ಸಂಖ್ಯೆ ಹೆಚ್ಚಾಗಿತ್ತು. ಅವರಿಗೆ ಈ ಶಿಶು ಆಹಾರ ಕೇಂದ್ರಗಳ ಅಗತ್ಯವಿತ್ತು ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು. ಎಸ್‌ಬಿಐ ಹಾಗೂ ಸಿಎಚ್‌ಎಫ್ ಸಹಕಾರದಲ್ಲಿ ಇಂಥದ್ದೊಂದು ಸಾಮಾಜಿಕ ಕಾರ್ಯ ನಡೆದಿದ್ದನ್ನು ಅವರು ಶ್ಲಾಘಿಸಿದರು.
09 ನಿಲ್ದಾಣಗಳಲ್ಲಿ ಬೇಬಿ ಕೇರ್ ಸೆಂಟರ್
ಈ ಹಿಂದೆ ಮೆಟ್ರೋ ಟ್ರನಿಟಿ ನಿಲ್ದಾಣದಲ್ಲಿ ಮಗುಗೆ ತಾಯಿ ಹಾಲುಣಿಸಲು ಪರದಾಡಿದ್ದು, ಅವರ ಪತಿ ಪತ್ನಿಗೆ ಸಹಾಯ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಗ ಮೆಟ್ರೋ ನಿಲ್ದಾಣಗಳಲ್ಲಿ ಬೇಬಿ ಕೇರ್ ಸೆಂಟರ್ ತೆರೆಯುವಂತೆ ಹೆಚ್ಚಿನ ಆಗ್ರಹ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 05 ಮೆಟ್ರೋ ನಿಲ್ದಾಣಗಳಲ್ಲಿ (ಕೆಂಗೇರಿ, ಮೆಜೆಸ್ಟಿಕ್, ಯಶವಂತಪುರ, ಬೈಯಪ್ಪನಹಳ್ಳಿ ಹಾಗೂ ಯಲಚೇನಹಳ್ಳಿ ನಿಲ್ದಾಣಗಳು) ಶಿಶು ಆಹಾರ ಕೇಂದ್ರ ಸ್ಥಾಪಿಸಿತ್ತು. ಸದ್ಯ ನಗರದಲ್ಲಿ ಒಟ್ಟು 09 ಕಡೆಗಳಲ್ಲಿ ಶಿಶು ಆಹಾರ ಕೇಂದ್ರ ಸ್ಥಾಪಿಸಿದಂತಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications